November 9, 2024

Vokkuta News

kannada news portal

ಯುನಿವೆಫ್ ಕರ್ನಾಟಕ ದಿಂದ ‘ ಮನುಕುಲದ ಪ್ರವಾದಿ ‘ ವಾಹನ ಪ್ರಚಾರ ಅಭಿಯಾನ.

ಮಂಗಳೂರು: ಯುನಿವೆಫ್ ಕರ್ನಾಟಕ (ಎನ್. ಜಿ. ಓ) ಸಂಸ್ಥೆಯಿಂದ ನಗರಾದ್ಯಂತ ಇಂದು ‘ ಅರಿಯಿರಿ ಮನುಕುಲದ ಪ್ರವಾದಿ ‘ ಎಂಬ ಘೋಷ ವಾಕ್ಯದ ಅಡಿಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ಪ್ರಚಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬೀದಿ ಬದಿ ವಾಹನ ಜಾಥಾ ನಡೆಯಿತು. ಅಭಿಯಾನದ ಭಾಗವಾಗಿ ಪ್ರವಾದಿ ಮಹಮ್ಮದ್ ( ಸ. ಅ) ರವರ ಜೀವನ ಮಾರ್ಗ ಮತ್ತು ಮಾನವ ಸೌಹಾರ್ದತೆ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಜನಾಬ್ ರಫಿಯುದ್ದೀನ್ ಕುದ್ರೋಳಿ ಕಿರು ಪ್ರಭಾಷಣ ಗೈದರು.

ಅಭಯಾ ಎಂಬ ಸಂಸ್ಥೆಯ ಘಟಕವು ಪ್ರಚಾರ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಪ್ರಚಾರ ಅಭಿಯಾನದಲ್ಲಿ ಸಮವಸ್ತ್ರ ಧರಿಸಿದ ಅಭಾಯಾ ಕಾರ್ಯಕರ್ತರೂ ಭಾಗವಹಿಸಿದ್ದರು.

ತಾರೀಕು 06 ಜನವರಿ 2023 ರಂದು ಸಂಜೆ 6.45 ಕ್ಕೆ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು ಮಂಗಳೂರಿನ ಪುರಭವನ ಹಾಲ್ ನಲ್ಲಿ ನಡೆಯಲಿದ್ದು,ಮಾಜಿ ಸ್ಪೀಕರ್ ಆದ ರಮೇಶ್ ಕುಮಾರ್, ಫಾದರ್ ಪೀಟರ್ ಪೌಲ್ ಸಲ್ದಾನ ರು ಮತ್ತು ವಿವಿಧ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ.