December 22, 2024

Vokkuta News

kannada news portal

ಅ.6 ಅರಿಯಿರಿ…ಪ್ರವಾದಿಯನ್ನು ಯುನಿವೆಫ್ ಕರ್ನಾಟಕ ಪ್ರಚಾರ ಅಭಿಯಾನ 23 ಉದ್ಘಾಟನೆ,ಪದಗ್ರಹಣ.

ಮಂಗಳೂರು: ಯೂನಿವರ್ಸಲ್ ವೆಲ್ಫೇರ್ ಫಾರಮ್ ಕರ್ನಾಟಕ ವತಿಯಿಂದ ಪ್ರತಿ ವರ್ಷ ನಡೆಯುತ್ತಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಇಸ್ಲಾಮಿನ ಪ್ರವಾದಿ ಮುಹಮ್ಮದ್ (ಸ. ಅ) ರವರ ಸಂದೇಶ ಪ್ರಚಾರ ಅಭಿಯಾನ 2023 ರ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ತಾರೀಕು 06 ಅಕ್ಟೋಬರ್ 2023 ರಂದು ಸಂಜೆ ಗಂಟೆ 6.45 ಕ್ಕೆ ಮಂಗಳೂರು ಕಂಕನಾಡಿ ಬಾಲಿಕಾಷ್ರಮ ರಸ್ತೆಯಲ್ಲಿನ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಲಿದೆ. ಅಂದು ಯುನಿವೆಫ್ ಕರ್ನಾಟಕ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಪ್ರಚಾರ ಅಭಿಯಾನದ ಉದ್ಘಾಟನೆಯನ್ನು ಮಂಗಳೂರು ಮಸ್ಜಿದ್ ನ್ನೂರ್ ಮಾಜಿ ಖತೀಬ್ ರಾದ ಮೌಲವಿ ಯೂಸುಫ್ ಕೌಸರಿಯವರು ನೆರವೇರಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರವಾದಿ ಸೀರತ್ ಅಭಿಯಾನದ ಸಂಚಾಲಕರಾದ ಬ್ರ. ಸೈಫುದ್ದೀನ್ ರವರು ಭಾಗವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಯುನಿವೆಫ್ ಕರ್ನಾಟಕ ಸಂಸ್ಥೆಯ ಅಧ್ಯಕ್ಷರಾದ ರಫಿಉದ್ದೀನ್ ಕುದ್ರೋಳಿ ಇವರು ಮಾತನಾಡಲಿದ್ದಾರೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಕಾರ್ಯಕ್ರಮ ಎಂದು ಸಂಸ್ತೆಯ ಪ್ರಕಟಣೆ ತಿಳಿಸಿದೆ.