June 13, 2024

Vokkuta News

kannada news portal

ಕಾಂ.ಕಾರ್ಯಕರ್ತರು ಮುಂದಿನ ಜನಾದೇಶಕ್ಕೆ ಸಿದ್ಧರಾಗಬೇಕಿದೆ :ಸಮಾರಂಭದಲ್ಲಿ ಡಾ. ಹುಸೇನ್ ಕರೆ.

ಮಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಎ.ಐ.ಸಿ.ಸಿ ಕಾರ್ಯಕಾರಿಣಿ ಸಮಿತಿ ಸದಸ್ಯರು ಮತ್ತು ರಾಜ್ಯ ಸಭಾ ಸದಸ್ಯರು, ವಿಪಕ್ಷ ಸಚೇತಕರು ಆದ ಶ್ರೀ. ಡಾ. ಸೈಯದ್ ನಾಸೀರ್ ಹುಸೇನ್,ಮತ್ತು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕರು, ಕೆಪಿಸಿಸಿ ಕಾರ್ಯಾಧ್ಯ್ಷರಾದ ಶ್ರೀ ಸಲೀಮ್ ಅಹಮದ್ ರವರಿಗೆ ಅಭಿನಂದನಾ ಸಮಾರಂಭ ಮಂಗಳೂರು ಕುದ್ಮೂಲ್ ರಂಗರಾವ್ ಪುರಭವನ ಇಲ್ಲಿ ನಡೆಯಿತು ಇದರೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರ ಸಮಾವೇಶವು ನಡೆಯಿತು. ಸಮಾರಂಭದಲ್ಲಿ ಡಾ.ಸೈಯದ್ ನಾಸೀರ್ ಹುಸೇನ್ ರವರು ಹಾಲಿ ಕರ್ನಾಟಕದ ಸರಕಾರ ಮತ್ತು ಮುಂದಿನ ಲೋಕ ಸಭಾ ಚುನಾವಣೆಗೆ ಕಾರ್ಯಕರ್ತರು ಸಿದ್ದರಾಗಬೇಕೆಂದು ಕರೆ ನೀಡಿದರು.

ಆರೋಗ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ಎಳೆ ಸಸಿಗೆ ಜಲ ಹಾಯಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ಜಬ್ಬಾರ್ ಕೆ ಪೀ.ಸಿ.ಸಿ ಅಲ್ಪ ಸಂಖ್ಯಾತ ಘಟಕ, ಶ್ರೀ. ಬಿ.ರಾಮನಾಥ ರೈ, ಹರೀಶ್ ಕುಮಾರ್,ವಿನಯ ಕುಮಾರ್ ಸೊರಕೆ,ಮಂಜುನಾಥ್ ಭಂಡಾರಿ,ಅಭಯ ಚಂದ್ರ ಜೈನ್, ಐವನ್ ಡಿ ಸೋಜಾ, ಮಿಥುನ್ ರೈ,ಜೇ.ಆರ್.ಲೋಬೋ,ಇನಾಯತ್ ಆಲಿ, ಸಾಹುಲ್ ಹಮೀದ್, ಶಶಿಧರ್ ಹೆಗ್ಡೆ,ಪ್ರವೀಣ್ ಚಂದ್ರ ಆಳ್ವ,ಮೊಹಮ್ಮದ್ ಮೋನು,ಕೆ.ಅಶ್ರಫ್,ಲತೀಫ್ ಕಂದಕ್,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ,ವಹಾಬ್ ಕುದ್ರೋಳಿ,ಇಬ್ರಾಹಿಮ್ ಕೊಡಿಚಾಲ್,ಹುಸೈನ್ ಕಾವೂರು,ಮೊಹಮ್ಮದ್ ಅಲಿ ಕಮ್ಮರಡಿ,ವಿವಿಧ ಬ್ಲಾಕ್,ವಾರ್ಡ್ ಮಟ್ಟದ ಹಿರಿಯ ಮತ್ತು ಕಿರಿಯ ನಾಯಕರು ಉಪಸ್ಥಿತರಿದ್ದರು.