July 26, 2024

Vokkuta News

kannada news portal

ಡಿ.22 ನಗರದಲ್ಲಿ ಯುನಿವೆಫ್ ಕರ್ನಾಟಕ ಸಂಘಟನೆಯಿಂದ, ಅರಿಯಿರಿ…ಪ್ರವಾದಿಯನ್ನು ಸಮಾರೋಪ ಕಾರ್ಯಕ್ರಮ.

ಮಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯ ಪ್ರಮುಖ ಸಮಾಜೋ ಧಾರ್ಮಿಕ ಸಂಘಟನೆಯಾದ ಯುನಿವೆಫ್ ಕರ್ನಾಟಕ ಮಂಗಳೂರು ಸೀರತ್ ಅಭಿಯಾನದ ಸಮಾರೋಪದ ಪ್ರಯುಕ್ತ ಡಿಸೆಂಬರ್ 22 ರಂದು ಶುಕ್ರವಾರ ಸಂಜೆ ಗಂಟೆ 6.45 ಕ್ಕೆ ಮಂಗಳೂರು ಪುರಭವನದಲ್ಲಿ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಘೋಷವಾಕ್ಯ ದೊಂದಿಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಸಂದೇಶ ಪ್ರಚಾರ ಕಾರ್ಯಕ್ರಮ ಆಯೋಜಿಸಿದೆ.

ಸಮಾರೋಪ ಸಮಾರಂಭದ ಈ ಕಾರ್ಯಕ್ರಮದಲ್ಲಿ ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ ಸ. ಅ. ಎಂಬ ಪ್ರಮುಖ ವಿಷಯದಲ್ಲಿ ವಿವಿಧ ಧರ್ಮದ ವಾಗ್ಮಿಗಳು ಭಾಷಣ ಮಾಡಲಿದ್ದಾರೆ.ಶ್ರೀ ಬಾರ್ಕೂರು ಮಹಾ ಸಂಸ್ಥಾನದ ವಿಶ್ವ ಸಂತೋಷ ಶ್ರೀ ಪಾದರು,ಶ್ರೀ ವಿಧ್ಯಾ ವಚಸ್ಪತಿ, ಮಂಗಳೂರು ಕರ್ನಾಟಕ ಥಿಯೋಲಜಿಕಲ್ ಕಾಲೇಜು ಇದರ ಪ್ರಾಂಶುಪಾಲರಾದ ಏಚ್.ಎನ್.ವಾಟ್ಸನ್ ಮತ್ತು ಯುನಿವೆಫ್ ಕರ್ನಾಟಕದ ದ ಮುಖ್ಯಸ್ಥರಾದ ಜ.ರಫಿ ಉದ್ದೀನ್ ಕುದ್ರೋಳಿ ಅವರು ಪ್ರಮುಖ ಭಾಷಣ ಮಾಡಲಿದ್ದಾರೆ. ಯುನಿವೆಫ್ ಸಂಘಟನೆಯ ಪರಿಚಯವನ್ನು ಪ್ರಮುಖ ಪದಾಧಿಕಾರಿ ಆದ ಯು.ಕೆ.ಖಾಲಿದ್ ರವರು ಮಾಡಲಿದ್ದಾರೆ.

2006 ರಿಂದ ಆರಂಭ ಗೊಂಡ ಪ್ರವಾದಿ ಹ. ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶವನ್ನು ಸಾರ್ವತ್ರಿಕ ಗೊಳಿಸುವ ಉದ್ದೇಶದೊಂದಿಗೆ ಒಂದು ಮಹಾ ಅಭಿಯಾನವನ್ನು 18 ವರ್ಷಗಳ ಮೊದಲು ಆರಂಭಿಸಲಾಗಿತ್ತು. ಇಂದು “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಘೋಷವಾಕ್ಯ ಅಡಿಯಲ್ಲಿ ಜಿಲ್ಲೆಯಲ್ಲಿ ಈ ಸಂಘಟನೆ ಸಾಮೂಹಿಕವಾಗಿ ಪರಿಚಯಿ ಸಲ್ಪಟ್ಟಿದೆ . ಪ್ರತೀ ವರ್ಷ ಈ ಘೋಷಣೆಯೊಂದಿಗೆ ಜನರಲ್ಲಿ ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಯನ್ನು ದೂರೀಕರಿಸುವ ಮತ್ತು ಅವರ ನೈಜ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈ ಸಂಘಟನೆ ವಿವಿಧ ಸಾಮಾಜಿಕ ಕಾರ್ಯಕ್ರಮದ ಮೂಲಕ ಆಯೋಜಿಸುತ್ತಿದೆ. ಸ್ತ್ರೀಯರಿಗೆ ಸಮಾರಂಭ ವೀಕ್ಷಣೆ ವ್ಯವಸ್ಥೆಗೊಳಿಸಲಾಗಿದೆ.

ಪ್ರವಾದಿಯವರನ್ನು ತಪ್ಪಾಗಿ ನಿಂದಿಸುವರಿಗೆ, ವಿಮರ್ಶಕರಿಗೆ , ಟೀಕಾಕಾರಿಗೆ ಪ್ರವಾದಿಯವರ ಸಂದೇಶವನ್ನು ತಿಳಿಯದವರಿಗೂ, ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ವರ್ಷ ಕನಿಷ್ಟ 50000 ಸಾಮಾನ್ಯ ಜನತೆಗೆ ಪ್ರವಾದಿಯವರ ಸಂದೇಶ ಪರಿಚಯವನ್ನು ಈ ಕಾರ್ಯಕ್ರಮದ ಮೂಲಕ ಮಾಡಲು ಸಾಧ್ಯವಾಗುತ್ತಿದೆ. ಅದರಂತೆ ಈ ವರ್ಷವೂ ಕೂಡಾ ಈ ಸಂಘಟನೆ ಜಿಲ್ಲೆಯಲ್ಲಿ ನಿರಂತರ ಸಂದೇಶ ಪ್ರಚಾರ ಗೈದು ಈ ಸಂಧರ್ಭದಲ್ಲಿ ಸಮಾರೋಪ ಸಮಾರಂಭ ಆಯೋಜಿಸುತ್ತದೆ. ಈ ಕಾರ್ಯಕ್ರಮಕ್ಕೆ ಭಿನ್ನ ಧರ್ಮೀಯರು ಸೇರಿದಂತೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಸ್ವಾಗತವಿದೆ ಎಂದು ಸಂಘಟನೆಯ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.