November 17, 2024

Vokkuta News

kannada news portal

ಮುಸ್ಲಿಮರಿಗೆ ಮೀಸಲಾತಿ ನೀಡಿದ ಬಗ್ಗೆ ದೇವೇಗೌಡರು ಮೌನ ಮುರಿಯಲಿ: ಸಾಮಾಜಿಕ ವಿಶ್ಲೇಷಕ ರಫೀಉದ್ದೀನ್ ಕುದ್ರೋಳಿ.

ಮಂಗಳೂರು: ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಇಂದು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ ಮತ್ತು ನರೇಂದ್ರ ಮೋದಿಯವರು ಮುಸ್ಲಿಮರಿಗೆ ಕಾಂಗ್ರೆಸ್ ಮೀಸಲಾತಿ ನೀಡಿ ದೇಶದ ಸಂಪತ್ತನ್ನು ಮುಸ್ಲಿಮರಿಗೆ ವಿತರಿಸುತ್ತಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಾ , ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯ ಭಾಗವಾಗಿ ಜನರಲ್ಲಿ ಮತೀಯ ವಿದ್ವೇಷ ಸಾಧನೆಗೆ ಪ್ರಯತ್ನಿಸುತ್ತಿರುವ ಈ ಸಂಧರ್ಭದಲ್ಲಿ ಮಂಗಳೂರಿನ ಸಾಮಾಜಿಕ ವಿಶ್ಲೇಷಕ ಮತ್ತು ಸಾಮುದಾಯಿಕ ಕಾರ್ಯಕರ್ತರಾದ ಯುನಿ ವೆಫ್ ಕರ್ನಾಟಕ ಸಂಸ್ಥೆಯ ಮುಖ್ಯಸ್ಥ ರಫೀ ಉದ್ದೀನ್ ಕುದ್ರೋಳಿ ಅವರು ಮುಸ್ಲಿಮರು ಮತ್ತು ಮೀಸಲಾತಿಯ ಅನುಷ್ಠಾನದ ತಮ್ಮ ವಾಸ್ತವಿಕ ಅನುಭವವನ್ನು ಪತ್ರಿಕೆಗೆ ತಿಳಿಸಿರುತ್ತಾರೆ. ರಫೀಉದ್ಧೀನ್ ಕುದ್ರೋಳಿ ಹೇಳುವಂತೆ

” ದೇಶಾದ್ಯಂತ ಜಾತ್ಯತೀತತೆಯನ್ಮು ಭದ್ರಪಡಿಸಲು ತೃತೀಯ ರಂಗದ ನಾಯಕರು ದೇಶಾದ್ಯಂತ ಪ್ರವಾಸಮಾಡಿದ್ದ ಆ ದಿನಗಳಲ್ಲಿ ದ.ಕ ಜಿಲ್ಲೆಗೆ ಕಮ್ಯುನಿಸ್ಟ್ ಪಕ್ಷದ ಸೀತಾರಾಮ್ ಯಚೂರಿ, ಜನತಾದಳದ ಹೆಚ್ ಡಿ ದೇವೇಗೌಡ ಸಹಿತ ಅನೇಕ ನಾಯಕರು ಮಂಗಳೂರಿಗೆ ಭೇಟಿ ನೀಡಿದ್ದರು . ಆಯ್ದ ಜನರ ಒಂದು ಕಾರ್ಯಕ್ರಮವನ್ನು ಜನತಾದಳ (ಎಸ್) ಅಂದು ಶಾರದಾ ವಿದ್ಯಾಲಯದ ಸಮೀಪ ಏರ್ಪಡಿಸಿತ್ತು. ಜನತಾದಳದ ಜಿಲ್ಲೆಯ ಪ್ರಮುಖರೋರ್ವರ ಆಹ್ವಾನದ ಮೇರೆಗೆ ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಅನೇಕ ವಿಷಯಗಳು ಅಲ್ಲಿ ಚರ್ಚೆಗೊಳಗಾಯಿತು ಮತ್ತು ಜಾತ್ಯಾತೀತ ಪಕ್ಷಗಳನ್ನು ಬಲಪಡಿಸಲು ಅಂದಿನ ಸಭೆ ತೀರ್ಮಾನಿಸಿತ್ತು ಆ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆದಿತ್ತು. ಅಂದು ನಾನು ನೇರವಾಗಿ ದೇವೇಗೌಡರಲ್ಲಿ ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಮುಸ್ಲಿಮರಿಗಾಗಿ ಏನು ಮಾಡಿದೆ ಹಾಗು ಯಾವ ಯೋಜನೆಗಳನ್ನು ಹೊಂದಿದೆ ಮತ್ತು ಏಕೆ ಅವರು ತಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಕೇಳಿದಾಗ ಅವರು ಈ ಪ್ರಶ್ನೆಗೆ ಉತ್ತರಿಸಲು ಅಂದಿನ ವಿಧಾನಪರಿಷತ್ ಸದಸ್ಯ ಅಬ್ದುಲ್ ಅಝೀಮ್ ರವರಿಗೆ ಆದೇಶಿಸಿದರು. ಅಝೀಮ್ ರವರು ಮುಸಲ್ಮಾನರಿಗೆ ನಾವು ನಾಲ್ಕು ಶೇಕಡಾದಷ್ಟು ಮೀಸಲಾತಿಯನ್ನು ತಂದಿದ್ದೇವೆ ಇದು ಕರ್ನಾಟಕದ ರಾಜ್ಯದಲ್ಲಿ ಒಂದು ಐತಿಹಾಸಿಕ ನಡೆ ಎಂದು ಹೇಳಿದ್ದರು.
ಆಗ ನಾನು ನೇರವಾಗಿ ದೇವೇಗೌಡ ರವರಲ್ಲಿ ಅದು ವೀರಪ್ಪ ಮೊಯ್ಲಿಯ ಸಾಧನೆಯಲ್ಲವೇ ಎಂದು ಹೇಳಿದಾಗ ಅವರು ಅಬ್ದುಲ್ ಅಝೀಮರಿಂದ ಮೈಕನ್ನು ಪಡೆದು ನನ್ನತ ನೋಡುತ್ತಾ ನಿಮ್ಮ ಪ್ರಶ್ನೆಯೇ ನಮ್ಮನ್ನು ಶಂಶಯಿಸುವಂತೆ ಮಾಡುತ್ತಿದೆ ಎಂದು ಹೇಳುತ್ತಾ ಒ ಬಿ ಸಿ ಕೋಟಾದಲ್ಲಿ ಮುಸ್ಲಿಮರನ್ಜು ಉಪ ಪಂಗಡವಾಗಿ ಸೇರಿಸಿ ಅದರಲ್ಲಿ 4% ವನ್ನು ಮುಸ್ಲಿಮರಿಗೆ ಮೀಸಲಾತಿ ಇಟ್ಟದ್ದು ನಮ್ಮ ಸರಕಾರದ ಸಾಧನೆ ಎಂದು ವಿವರವಾಗಿ ಹೇಳಿದರು.
ಇಂದು ದೇಶಾದ್ಯಂತ ಮೋದಿಯವರು ಕಾಂಗ್ರೆಸ್ ಅನ್ನು ಕುಟುಕುತ್ತಾ ಒಬಿಸಿಗೆ ಮುಸಲ್ಮಾನರನ್ನು ಸೇರ್ಪಡೆ ಗೊಳಿಸಿ ಒಬಿಸಿ ಗಳ ಮೀಸಲಾತಿಯನ್ನು ಮುಸಲ್ಮಾನರಿಗೆ ಹಂಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅಪಾದಿಸುತ್ತಿರುವಾಗ ದೇವೇಗೌಡರು ತಮ್ಮ ಮೌನವನ್ನು ಮುರಿದು ಈ ಬಗ್ಗೆ ಸ್ಪಷ್ಟತೆ ನೀಡುವುದು ಇಂದಿನ ಅಗತ್ಯವಾಗಿದೆ. ವೀರಪ್ಪ ಮೊಯ್ಲಿ ಅದರಲ್ಲಿ ಕೊಂಚ ಬದಲಾವಣೆ ಮಾಡಿ ಉಳಿದ ಅಲ್ಪಸಂಖ್ಯಾತರಿಗೆ ಪ್ರಯೋಜನವಾಗಲಿ ಎಂದು ಮೀಸಲಾತಿಯನ್ನು 6% ಶೇಕಡಾಕ್ಕೆ ಏರಿಸಿರುತ್ತಾರೆ.ಕಾಕತಾಳಿಯವೇನೆಂದರೆ ಅದು ಅನುಷ್ಠಾನಕ್ಕೆ ಬರುವ ಮೊದಲೇ ವೀರಪ್ಪ ಮೊಯ್ಲಿ ತಮ್ಮ ಮುಖ್ಯಮಂತ್ರಿಯ ಅಧಿಕಾರವನ್ನು ಕಳೆದು ಕೊಂಡಿದ್ದರು.
ಈಗ ಎನ್ ಡಿ ಎ ಯ ಭಾಗವಾಗಿರುವ ದೇವೇಗೌಡರು ಇದಕ್ಕೇ ಉತ್ತರಿಸಬೇಕಿದೆ.” ಎಂದು ಹೇಳಿದ್ದಾರೆ.