June 14, 2024

Vokkuta News

kannada news portal

ಯುನಿವೆಫ್ ಕರ್ನಾಟಕದಿಂದ ಪ್ರವಾದಿ ಸಂದೇಶ ಪ್ರಚಾರ ಸೀರತ್ ಅಭಿಯಾನಕ್ಕೆ ಚಾಲನೆ

ಮಂಗಳೂರು: ಯೂನಿವರ್ಸಲ್ ವೆಲ್ಫೇರ್ ಫಾರಮ್ ಕರ್ನಾಟಕ ವತಿಯಿಂದ ಪ್ರತಿ ವರ್ಷವು ಆಯೋಜಿಸುತ್ತಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಇಸ್ಲಾಮಿನ ಅಂತಿಮ ಪ್ರವಾದಿ ಮುಹಮ್ಮದ್ (ಸ. ಅ) ರವರ ಸಂದೇಶ ಪ್ರಚಾರ ಅಭಿಯಾನದ ಭಾಗವಾಗಿ ಇಂದು ಮಂಗಳೂರಿನ ಕಂಕನಾಡಿಯ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಅಭಿಯಾನದ ಪ್ರಾಸ್ತಾವಿಕ ಪರಿಚಯ ಭಾಷಣಗೈದ ಬ್ರ ಸೈಫುದ್ದೀನ್ ಮಾತನಾಡಿ ಯುನಿವೆಫ್ ಸಂಸ್ಥೆಯು ಆಯೋಜಿಸುತ್ತಿರುವ ಅಭಿಯಾನದ ಮಹತ್ವವನ್ನು ವಿವರಿಸಿದರು.

ಮಂಗಳೂರಿನ ಮಸ್ಜಿದ್ ನ್ನೂರ್ ನ ಮಾಜಿ ಖತೀಬ್ ಆದ ಜನಾಬ್ ಯೂಸುಫ್ ಕೌಸರಿ ಅಭಿಯಾನವನ್ನು ಉದ್ಘಾಟಿಸಿ ಪ್ರವಾದಿ ಮುಹಮ್ಮದ್ ಸ. ಅ ರವರು ತಮ್ಮ ಜೀವನದ ಅಂತ್ಯದ ವಿಯೋಗದ ಸಂಧರ್ಬದಲ್ಲಿ ತನ್ನ ಅನುಯಾಯಿಗಳಿಗೆ ಪ್ರತಿಪಾದಿಸಿದ ಧಾರ್ಮಿಕ ಮೌಲ್ಯಗಳ ಬಗ್ಗೆ ವಿವರಿಸಿ ಸಂದೇಶ ಪ್ರಚಾರದ ಅಗತ್ಯತೆ ಬಗ್ಗೆ ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಂಸ್ತೆಯ ಅಧ್ಯಕ್ಷರಾದ ರಫಿಉದ್ದೀನ್ ಕುದ್ರೋಳಿ ರವರು ಸೀರತ್ ಅಭಿಯಾನವನ್ನು ಕಳೆದ ಹದಿನೆಂಟು ವರ್ಷದಿಂದ ಯಶಸ್ವಿಯಾಗಿ ಪ್ರತಿವರ್ಷ ಆಯೋಜಿಸಿದ ಬಗ್ಗೆ ವಿವರಿಸಿ, ಬದಲಾದ ಸರಕಾರದ ಈ ಅವಧಿಯಲ್ಲಿ ಜನತೆ ನಿರಾಳ ಇರುವ ಭಾವನೆ ಮತ್ತು ಬ್ರಮೆಯ ಬಗ್ಗೆ ನೆನಪಿಸಿದರು. ಎಲ್ಲಾ ಸರಕಾರದ ಅವಧಿಯಲ್ಲೂ ಕೂಡಾ ಅಭಿಯಾನವನ್ನು ಆಯೋಜಿಸಿದ ಬಗ್ಗೆ ಹೇಳಿದರು. ಸಾಮಾಜಿಕ ಜಾಲ ತಾಣದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಹಾಲಿ ಕೆಲವು ಜನತೆ ನಾವು ಜ್ಞಾನ ವಂತರಾಗಿದ್ದೇವೆ ಎಂಬ ಹುಸಿ ನಂಬಿಕೆಯ ಬಗ್ಗೆ ವಿವರಿಸಿದರು.ಆದರೆ ಅದು ನಿಜವಾದ ಜ್ಞಾನವಲ್ಲ.ಈ ಹಿಂದೆ ಚಿಕ್ಕಮಗಳೂರು ಕ್ಷೇತ್ರದ ಶಾಸಕರೋರ್ವರು ಕುರ್ ಆನ್ ಸೂಕ್ತ ಗಳನ್ನು ವಿವಾದಾತ್ಮಕವಾಗಿ ಆಕ್ಷೇಪಿಸಿ ಪ್ರಸ್ತಾಪಿಸಿದಾಗ ಮುಸ್ಲಿಂ ಜನತೆ ತೀವ್ರವಾಗಿ ಮುಜುಗರಕ್ಕೆ ಒಳಗಾಯಿತು. ಜನತೆ ಆಕಾಶಕ್ಕೆ ನೋಡಿ ಅಲ್ಲಾಹನಲ್ಲಿ ದುವಾಗೈದು ಇಂತವರಿಗೆ ಬುದ್ದಿ ನೀಡು ಎಂದು ಪ್ರಾರ್ಥಿಸಿದರೆ, ಒಂದು ವೇಳೆ ದುವಾ ಮಾಡಿ ಕಷ್ಟ ಪರಿಹಾರ ಆಲಾಹು ನೀಡುತ್ತಾನೆ ಎಂದಿದ್ದರೆ ಈ ಹಿಂದೆ ಪ್ರವಾದಿಯವರೂ ಏಕೆ ಅಷ್ಟೂ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದರು. ಅಲ್ಲಾಹನು ಬನೀ ಇಸ್ರಾಹೀಲರಿಗೆ ನಲವತ್ತು ವರ್ಷಗಳ ಶಿಕ್ಷೆ ನೀಡಿದ್ದಾನೆ ಮತ್ತು ಅವರಿಗೆ ಅಲ್ಲಾಹು ಸ್ವರ್ಗದ ಆಹಾರ ನೀಡಿದ. ಪ್ರವಾದಿ ಮುಹಮ್ಮದ್ ರ ಕಾಲದಲ್ಲಿ ಸಾಮಾಜಿಕ ನಿಷೇಧ ಸಂದರ್ಭದಲ್ಲಿ ಉಣ್ಣಲು ಆಹಾರ ಇಲ್ಲದೆ ಜನರು ತತ್ತರಿಸಿದಾಗ ಪ್ರವಾದಿಯವರು ಜನರು ಎಲೆಗಳನ್ನು ತಿಂದು ಜೀವಿಸಲು ಉಪದೇಶಿಸಿದ್ದು, ಅಲ್ಲಾಹನನ್ನು ಸ್ತುತಿಸಿ ಜೀವಿಸುವ ಒಂದು ಜನಾಂಗಕ್ಕೆ ಆಹಾರವನ್ನು ಸುಲಭವಾಗಿ ನೀಡಲಿಲ್ಲ. ಬದ್ರ್ ಯುದ್ಧದಲ್ಲಿ ವಿಜಯಿಯಾದ ಸಂಧರ್ಬದ ಬಗ್ಗೆ ವಿವರಿಸಿದರು. ಈಗೆ ಧಾವ ಕಾರ್ಯಕ್ರಮದ ಅಗತ್ಯದ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಮಧ್ಯೆ ಮಾಸ್ಟರ್ ಅರ್ಮಾನ್ ಉಲ್ ಕಬೀರ್ ಎಂಬ ಮದರಸ ವಿಧ್ಯಾರ್ಥಿ ಪ್ರವಾದಿ ಉರ್ದುಗಾನ ಹಾಡಿದರು.