ಜುಬೈಲ್ : ಸೌದಿ ಅರೆಬೀಯಾದ ದಮ್ಮಾಮ್ ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನಕ್ಕೆ ಆಗಮಿಸಿದ ಕಾಂಗ್ರೇಸ್ ಯುವ ಮುಖಂಡರು, ಸಮಾಜ ಸೇವಕರು ಆಗಿರುವ ಮೌಶೀರ್ ಅಹ್ಮದ್ ಸಾಮಣಿಗೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಭೇಟಿ ಮಾಡಿ ಮಾತುಕತೆ ನಡೆಸಿತು. ಈ ಸಂಧರ್ಭದಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿಯ ಪ್ರಮುಖರಾದ ಜ.ರಪೀಕ್ ಸೂರಿಂಜೆ ಡಿ.ಕೆ.ಎಸ್.ಸಿ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ವಿವರಿಸಿದರು. ಸೆಂಟ್ರಲ್ ಕಮಿಟಿ ಮಾಜಿ ಅಧ್ಯಕ್ಷರಾದ ಅಬ್ದುಲ್ ಹಮೀದ್ (ಆರಮೆಕ್ಸ್)ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂಧರ್ಭದಲ್ಲಿ ಸುನ್ನಿ ಸೆಂಟರ್ ಪ್ರಮುಖರಾದ ಆಬೂಬಕ್ಕರ್ ಬರ್ವ,ಆಶ್ರಪ್ ನಾಳಾ,ಕರೀಂ ಪಾಣೆಮಂಗಳೂರು,ಸಫೀರ್ ಗೂಡಿನಬಳಿ,ಹಾಗೂ ಕಾಂಗ್ರೆಸ್ ಅಲ್ಪ ಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಾರೀಸ್ ಬ್ಯೆಕಂಪಾಡಿ ಜನಪರ ಸ್ನೆಹಿ ನಝಿರ್ ಕುಂಜತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಮಾತೃ ನಾಡಿಗೆ ತೆರಳುವ ಮೌಶೀರ್ ಅಹ್ಮದ್ ಸಾಮಣಿಗೆ ಅವರನ್ನು ಡಿ .ಕೆ. ಎಸ್.ಸಿ ಜುಬ್ಬೆಲ್ ಘಟಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.
kannada news portal
ಇನ್ನಷ್ಟು ವರದಿಗಳು
ಕ್ಯಾಥೋಲಿಕ್ ಬಿಷಪ್ – ಮೋದಿ ಭೇಟಿ :’ಅಲ್ಲಿ ಅವರು ಗೌರವಿಸುತ್ತಾರೆ, ಇಲ್ಲಿ ಅವರು ನಾಶಪಡಿಸುತ್ತಾರೆ’ ಕೇರಳ ಧರ್ಮಗುರು ವಿಷಾದ.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ: ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ.
ಹಿಂದೂಗಳ ವಿರುದ್ಧ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗುತ್ತಿದೆ: ಪ್ರಧಾನಿ ಮೋದಿ