July 27, 2024

Vokkuta News

kannada news portal

ತೊಕ್ಕೊಟ್ಟು ಸಿಟಿ ಮಾರ್ಕೆಟ್ ಸಂಕೀರ್ಣದಲ್ಲಿ ನಾಗರಿಕ ವೇದಿಕೆ ಕಚೇರಿ ಸ್ಥಾಪನೆ.

ಉಳ್ಳಾಲ: ಉಳ್ಳಾಲ ನಾಗರಿಕ ವೇದಿಕೆ ಇದರ ಅಧಿಕೃತ ಕಚೇರಿಯನ್ನು ಇತ್ತೀಚೆಗೆ ತೊಕ್ಕೊಟ್ಟು ವಿನ ಸಿಟಿ ಮಾರ್ಕೆಟ್ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿ ಕೊಠಡಿ ನಂಬ್ರ 247 ರಲ್ಲಿ ಉದ್ಘಾಟಿಸಲಾಯಿತು. ವೇದಿಕೆಯ ಅಧ್ಯಕ್ಷರಾದ ಖಾಲಿದ್ ಸಾಗರ್ ಅವರು ಹಾಲಿ ಈ ಸಂಸ್ಥೆಗೆ ಕೊಠಡಿ ವ್ಯವಸ್ಥೆಯನ್ನು ಪೂರೈಸುತ್ತಾರೆ. ಪ್ರಸ್ತುತ ಉಳ್ಳಾಲ ನಾಗರಿಕ ವೇದಿಕೆ ಸಂಸ್ಥೆಯು ಉಳ್ಳಾಲದ ವಿವಿಧ ನಾಗರಿಕ ಹಕ್ಕುಗಳು ಮತ್ತು ಪೂರೈಕೆ ವಿಷಯದಲ್ಲಿ ಕಾರ್ಯ ನಿರ್ವಹಿಸುವ ಮಹತ್ವದ ಚಟುವಟಿಕೆಗಳನ್ನು ಕೈ ಗೊಳ್ಳುತ್ತಿದೆ. ಕಚೇರಿಯಲ್ಲಿ ವೇಕಿಕೆಯ ಲಾಂಛನ ವನ್ನೂ ಅನಾವರಣ ಗೊಳಿಸಿದ್ದು,ಪೀಠೋಪಕರಣ ದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಈ ಕಚೇರಿಯಲ್ಲಿ ಮುಂದಿನ ದಿನಗಳಲ್ಲಿ ಅವಹಾಲು ಸ್ವೀಕರಣೆ ನಡೆಯಲಿದೆ ಎಂದು ವೇದಿಕೆಯ ಸಂಚಾಲಕರು ಹೇಳಿಕೆ ನೀಡಿದ್ದಾರೆ.

ಉಳ್ಳಾಲ ನಾಗರೀಕ ವೇದಿಕೆ ( ನನ್ನ ಉಳ್ಳಾಲ ನಮ್ಮ ಉಳ್ಳಾಲ)ಯು ಅಧ್ಯಕ್ಷರಾದ ಖಾಲಿದ್ ಸಾಗರ್, ವೇದಿಕೆಯ ಸಂಚಾಲಕರಾದ ಝಾಕೀರ್ ಇಖ್ಲಾಸ್, ಕಾರ್ಯ ದರ್ಶಿ ನವೀನ್ ನಾಯಕ್, ನಗರ ಸಭಾ ಸದಸ್ಯರಾದ ಅಬ್ದುಲ್ ಜಬ್ಬಾರ್, ಪರಿಸರ ಸಂರಕ್ಷಣಾ ಒಕ್ಕೂಟ ಸದಸ್ಯರಾದ ಮಂಗಳೂರು ರಿಯಾಝ್, ಸಾಮಾಜಿಕ ಕಾರ್ಯಕರ್ತ ಸೋಶಿಯಲ್ ಫಾರೂಕ್, ರೋಹಿದಾಸ್ ಬಂಗೇರ,
ಪೀ.ಯು.ಸಿ. ಎಲ್ ಸದಸ್ಯ ಇಮ್ತಿಯಾಜ್ ಉಳ್ಳಾಲ್ ಸಿ.ಎಮ್.ಸಿ, ಫೈರೋಜ್ ಡಿ ಎಂ, ನಮ್ಮೂರ ಧ್ವನಿ ಸದಸ್ಯ ಉಮ್ಮರ್ ಫಾರೂಕ್ ಆಲೆಕಲ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸಿಹಾನ ಬಿ ಎಂ, ಸಾಮಾಜಿಕ ಕಾರ್ಯಕರ್ತೆ ದಾಕ್ಷಾಯಿಣಿ ಎಸ್.ಜಿ, ಉಳ್ಳಾಲ ನಗರಸಭಾ ಮಾಜಿ ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ, ಪ್ರಶಾಂತ್ ಫೋಕಸ್ ಡ್ರೈವಿಂಗ್ ಸ್ಕೂಲ್ , ಸಾಮಾಜಿಕ ಜಾಲತಾಣದ ಮಾಂತ್ರಿಕ ಸಮೀಕ್ಷರಾದ ಅಸ್ಲಾಂ ಕೀಲಂಗಡಿ, ಲಾಯ್ಡ್ ಅಲೇಕಲ ಮುಂತಾದವರು ಉಪಸ್ಥಿತರಿದ್ದರು. ನವೀನ್ ನಾಯಕ್ ಸ್ವಾಗತಿಸಿದರು

ಫಾರೂಕ್ ಸೋಶಿಯಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.