ಮಂಗಳೂರು; ದ.ಕ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ,ಸರಕಾರೇತರ ಸಂಸ್ಥೆಯ ತಾತ್ಕಾಲಿಕ ಆಡಳಿತ ಸಮಿತಿಯಾಗಿ ಟಿ.ರ್ ಭಟ್, ಸಂಚಾಲಕರು, ಕಿಶೋರ್ ಅತ್ತಾವರ್, ಜೋಷಿ ಸತ್ಯಾನಂದ ಜಿ.,ಕಾಲಿನ್ ಡಿಸಿಲ್ವ ಮತ್ತು ಮೊಹಮ್ಮದ್ ಹನೀಫ್.ಯು ರವರನ್ನು ಕೇಂದ್ರ ಪಿಯುಸಿಎಲ್‌ನ ಪದಾಧಿಕಾರಿಗಳು ನೇಮಕ ಮಾಡಿ ಘೋಷಿಸಿರುತ್ತಾರೆ.
ತಾರೀಖು 8 ಮತ್ತು 9 ಮಾರ್ಚ್ 2024 ರಂದು ಮಂಗಳೂರು ರೋಶನಿ ನಿಲಯದಲ್ಲಿ ನಡೆದ ದ್ವಿದಿನ ಸಭೆಯಲ್ಲಿ ರಾಷ್ಟ್ರೀಯ ಪಿಯುಸಿಎಲ್‌ನ ಮಹಾ ಪ್ರದಾನ ಕಾರ್ಯದರ್ಶಿ ಯಾದ ಡಾ.ವಿ.ಸುರೇಶ್, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾದ ಎಸ್. ಬಾಲಮುರುಗನ್,ಕರ್ನಾಟಕ ರಾಜ್ಯ ಪಿಯುಸಿಎಲ್ ನ ಅದ್ಯಕ್ಷರಾದ, ಅರವಿಂದ ನರೈನ್, ಪ್ರದಾನ ಕಾರ್ಯದರ್ಶಿ,ಸುಜಾಯಾತುಲ್ಲಾ.ಕೆ ಇವರ ತಂಡ, ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸರ್ವಾನುಮತದಿಂದ ತಾತ್ಕಾಲಿಕ ಸಮಿತಿಯನ್ನು ರಚಿಸಿಸಿದೆ.
ದ.ಕ. ಪಿಯುಸಿಎಲ್ ಈ ಹಿಂದೆ ಜಿಲ್ಲೆಯಲ್ಲಿನ ಸಮಿತಿಯನ್ನು ರದ್ದು ಪಡಿಸಿತ್ತು. ಪ್ರಸ್ತುತ ಮೇಲಿನ ತಾತ್ಕಾಲಿಕ ಆಡಳಿತ ಸಮಿತಿ ನೇಮಕವಾಗುವುದರೊಂದಿಗೆ ಜಿಲ್ಲೆಯಲ್ಲಿ ಪಿ.ಯು.ಸಿ.ಎಲ್ ಘಟಕ ಕಾರ್ಯಾರಂಭ ಗೊಳಿಸಲಿದೆ. ಜಿಲ್ಲೆಯ ಸುಮಾರು 22 ಸದಸ್ಯರು ಹಾಜರಿದ್ದರು.
ಇನ್ನಷ್ಟು ವರದಿಗಳು
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ
ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು”ಶಾಂತಿ ಸಭೆ” ನಡೆಯಿತು: ಮುನೀರ್ ಕಾಟಿಪಳ್ಳ.