January 24, 2025

Vokkuta News

kannada news portal

ಉಳ್ಳಾಲ ಮಸ್ಜಿದ್ ಸಲ್ ಸಬೀಲ್ ಈದ್ಗಾದಲ್ಲಿ ಈದ್ ನಮಾಝ್, ಇಬ್ರಾಹಿಮ್ ಸೌಷಾದ್ ಖುತುಬಾ.

ಉಳ್ಳಾಲ: ಉಳ್ಳಾಲ ಬೀಚ್ ಮಸ್ಜಿದ್ ಸಲ್ ಸಬೀಲ್ ಆವರಣದ ಈದ್ಗಾದಲ್ಲಿ ಇಂದು ಮುಸ್ಲಿಮ್ ಭಾಂದವರು,ಮೌಲ್ವಿ ಇಬ್ರಾಹಿಮ್ ಸೌಶಾದ್ ನೇತೃತ್ವದಲ್ಲಿ ಈದ್ ಉಲ್ ಫಿತರ್ ನಮಾಝ್ ನಿರ್ವಹಿಸಿದರು.

ಉಳ್ಳಾಲ,ಕೋಡಿ,ಮುಕ್ಕಛೇರಿ,ತೊಕ್ಕೊಟ್ಟು,ಮುನ್ನೂರು,ಪರ್ಮನ್ನುರು, ಮಂಗಳೂರು ಇತ್ಯಾದಿ ಕಡೆಯಿಂದ ಜಮಾಯಿಸಿದ ಅಗಾಧ ಮುಸ್ಲಿಮ್ ಪುರುಷರು,ಮಹಿಳೆಯರು ಮತ್ತು ಮಕ್ಕಳು ಇಂದು ಈದ್ ಪ್ರಾರ್ಥನೆ ಸಲ್ಲಿಸಿದರು.

ತಕ್ಬೀರ್ ನೊಂದಿಗೆ ಆರಂಭವಾದ ಈದ್ ಜಮಾವಣೆಯಲ್ಲಿ, ಮೌಲ್ವಿ ಇಬ್ರಾಹಿಮ್ ಸೌಷಾದ್ ರವರು ನಮ್ಮಾಝ್ ನಂತರದಲ್ಲಿ ಈದ್ ಸಂದೇಶದ ಖುತುಬಾ ಪಾರಾಯಣ ಮಾಡುತ್ತಾ, ಕಳೆದ ಮೂವತ್ತು ದಿನಗಳಿಂದ ಅತ್ಯಂತ ಕಷ್ಟದಿಂದ ಪಾಲಿಸಿ ಕೊಂಡು ಬಂದ ಶ್ರೇಷ್ಠ ಉಪವಾಸ ವೃತದ ಘನತೆಯನ್ನು ಸಂರಕ್ಷಿಸಲು ಕರೆ ನೀಡಿದರು. ಈಗಾಗಲೇ ನಿರ್ವಹಿಸಿದ ವೃತ್ತದ ಪಾವಿತ್ರ್ಯತೆ ಯನ್ನು ಮುಸ್ಲಿಮರು ಬಾಕಿ ದಿನಗಳಲ್ಲಿ ಉಳಿಸಿ ಬೆಳೆಸಲು ಕರೆ ನೀಡುತ್ತಾ,ಪ್ರವಾದಿ ಮುಹಮ್ಮದ್ ಸ.ಆ ರವರು ತ್ಯಾಗ ಬಲಿದಾನಗಳ ಮೂಲಕ ನಮಗೆ ಅರ್ಪಿಸಿದ ಧಾರ್ಮಿಕ ಸಿದ್ಧಾಂತಗಳನ್ನು ಪಾಲಿಸಲು ಹೇಳಿದರು.

ಕೊನೆಯಲ್ಲಿ ದುವಾ ಪ್ರಾರ್ಥನೆಯ ನಂತರ, ಸಭಿಕರು ಸಾಂಪ್ರದಾಯಿಕ ಆಲಿಂಗನ,ಈದ್ ಶುಭಾಶಯಗಳನ್ನು ಹಂಚಿದರು. ಈದ್ ಜಮಾವಣೆ ಸಂಧರ್ಬದಲ್ಲಿ ಇಸ್ಲಾಹಿ ಟ್ರಸ್ಟ್ ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಬಾಷಾ,ಅಬ್ದುಲ್ ರಝಾಕ್ ಹಾಜಿ,ಅಬೂ ಹುರೈರಾ ಮತ್ತು ರಝಾಕ್ ಗೊಳ್ತ ಮಜಲ್ ಉಪಸ್ಥಿತರಿದ್ದರು.