February 19, 2025

Vokkuta News

kannada news portal

ಪಿ ಎಫ್ ಐ ನಾಯಕ ಕೆ.ಎಂ ಷರೀಫ್ ನಿಧನ,ಮುಸ್ಲಿಮ್ ಒಕ್ಕೂಟ ಸಂತಾಪ: ಕೆ.ಅಶ್ರಫ್

ಸಾಮುದಾಯಿಕ ನಾಯಕ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಹಾಲಿ ರಾಷ್ಟ್ರೀಯ ಕೋಶಾಧಿಕಾರಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ,ದ.ಕ.ಮೂಲದ ಕೆ.ಎಂ. ಷರೀಫ್ ರವರು ಇಂದು ಮಂಗಳೂರಿನಲ್ಲಿ ಆನಾರೋಗ್ಯದಿಂದ ನಿಧನ ಹೊಂದಿದ್ದು,ಮುಸ್ಲಿಮ್ ಸಮುದಾಯ ಓರ್ವ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.ಷರೀಫ್ ರವರ ನಿಧನದಿಂದ ಜಿಲ್ಲೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದ ಸಾಮುದಾಯಿಕ ಸಂಘಟನೆಯ ಒಂದು ಮಾಹ ಕೊಂಡಿ ಯನ್ನ್ನು ಜಿಲ್ಲೆಯ ಜನತೆ ಕಳೆದು ಕೊಂಡಿದೆ. ಷರೀಫ್ ರವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿ ಸುತ್ತದೆ.ಮೃತರ ಮಗ್ ಫಿರ ತ್ ಗಾಗೀ ಸರ್ವರೂ ಪ್ರಾರ್ಥಿಸಿ ಬೇಕಾಗಿ ಕರೆ ನೀಡಿದೆ.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.ಮಂಗಳೂರು.