June 22, 2024

Vokkuta News

kannada news portal

ಕಾಂಗ್ರೆಸ್ ಚುನಾವಣಾ ಪ್ರಚಾರ,ಭಟ್ಕಳ ತಂಝೀಮ್ ನಲ್ಲಿ ಮುಸ್ಲಿಮ್ ಮುಖಂಡರೊಂದಿಗೆ ಕಾಂಗ್ರೆಸ್ ಪ್ರಮುಖರ ಸಭೆ.

ಭಟ್ಕಳ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ರವರ ಗೆಲುವು ಉದ್ದೇಶಿತ,ದ.ಕ.ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ತಂಡದ ಸದಸ್ಯರಾದ ಕೆ.ಅಶ್ರಫ್,ಶಶಿಧರ ಹೆಗ್ಡೆ,ನವೀನ್ ಡಿ ‘ ಸೋಜಾ,ಸಲೀಮ್ ರವರು ಇಂದು ಭಟ್ಕಳ ತಂಝೀಮ್ ಅಧ್ಯಕ್ಷರಾದ ಇನಾಯತ್,ಕಾರ್ಯದರ್ಶಿಗಳು,ಪದಾಧಿಕಾರಿಗಳು ಮತ್ತು ವಕೀಲರಾದ ಇಮ್ರಾನ್ ರವರೊಂದಿಗೆ ಸಭೆ ನಡೆಸಿ ಪ್ರಚಾರ ಕಾರ್ಯದ ರೂಪು ರೇಷೆಗಳನ್ನು ಚರ್ಚಿಸಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕೆ.ಅಶ್ರಫ್,ಶಶಿಧರ ಹೆಗ್ಡೆ, ನವೀನ್ ಡಿ ‘ ಸೋಜಾ,ರಮಾನಂದ ಬೋಳಾರ್ ರವರನ್ನು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿ ಕೆಪಿಸಿಸಿ ಅಧ್ಯಕ್ಷರು ಇತ್ತೀಚೆಗೆ ಆದೇಶ ಹೊರಡಿಸಿದ್ದರು.