February 11, 2025

Vokkuta News

kannada news portal

ಉ.ಕ. ಸಿರಸಿ ಕಾಂಗ್ರೆಸ್ ಚುನಾವಣಾ ಸಭೆ: ಇಂಡಿಯಾ ಒಕ್ಕೂಟ ಗೆಲ್ಲಿಸಿ: ರಮಾನಾಥ ರೈ ಕರೆ.

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಾರೀಕು 07 ಏಪ್ರಿಲ್ ರಂದು ಚುನಾವಣೆ ನಡೆಯಲಿದ್ದು ಭಾರತೀಯ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ರವರಿಗೆ ಮತ ನೀಡಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲಿಸಬೇಕೆಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ರಮಾನಾಥ ರೈ ಕರೆ ನೀಡಿದರು.

ಶಿರಸಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಕಾಂಗ್ರೆಸ್ ಪಕ್ಷ ಮಾತ್ರಾ ಈ ದೇಶವನ್ನು ಮುನ್ನಡೆಸುವ ಪಕ್ಷ ಎಂದು ಹೇಳಿದರು. ಅಂಜಲಿ ನಿಂಬಾಳ್ಕರ್ ಓರ್ವೆ ಸಮರ್ಥ ಅಭ್ಯರ್ಥಿ ಎಂದರು.

ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ಟಿ.ನಾಯಕ್, ಮಾಜಿ ಮೇಯರ್ ಗಳಾದ ಕೆ.ಅಶ್ರಫ್,ಶಶಿಧರ್ ಹೆಗ್ಡೆ,ಕೌನ್ಸಿಲರ್ ನವೀನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.