June 13, 2024

Vokkuta News

kannada news portal

ಹೊನ್ನಾವರ,ಭಟ್ಕಳ,ಶಿರಸಿ ಯಾದ್ಯಂತ ಕಾಂಗ್ರೆಸ್ ಪ್ರಮುಖರಿಂದ ಅಂಜಲಿ ನಿಂಬಾಳ್ಕರ್ ಪರ ಮತಯಾಚನೆ.

ಹೊನ್ನಾವರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ,ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ರ ಪರ ರಾಜ್ಯದ ಪ್ರಮುಖ ನಾಯಕರಿಂದ ಹೊನ್ನಾವರ,ಭಟ್ಕಳ,ಶಿರಸಿ ಯಾದ್ಯಾಂತ ಮತ ಯಾಚನೆ ನಡೆಸಲಾಯಿತು. ಭಟ್ಕಳ ತಂಝೀಮ್ ಸಂಸ್ಥೆ,ಹೊನ್ನಾವರ ಮತ್ಸ್ಯ ವರ್ತಕರು, ಮತ್ತಿತರ ಕಡೆಗಳಲ್ಲಿ, ದ.ಕ.ಜಿಲ್ಲಾ ಕಾಂಗ್ರೆಸ್ ವರಿಷ್ಠರಾದ ಬಿ.ರಮಾನಾಥ ರೈ ರವರ ನೇತೃತ್ವದಲ್ಲಿ ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಕೆ.ಅಶ್ರಫ್, ನವೀನ್ ಡಿ ಸೋಜ , ರಮಾನಂದ ಬೋಳಾರ್,ಸಲೀಮ್ ಕಣ್ಣೂರು,ಮತ್ತು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಈ ಮಧ್ಯೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ ರೈ ಅವರು ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಸಾಲ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಪ್ರಸ್ತುತ ಬಿಜೆಪಿ ಐವತ್ತೈದು ಲಕ್ಷ ಕೋಟಿ ಸಾಲ ಮಾಡಿಟ್ಟಿದ್ದು, ಹೊರ ದೇಶದಿಂದ ಕಪ್ಪು ಹಣ ತರುತ್ತೇನೆಂದು ಹೇಳಿ, ಎಷ್ಟು ಹಣ ತಂದು ಜನರಿಗೆ ಹಂಚಿದ್ದಾರೆ, ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ರಮಾನಾಥ ರೈ, ಶಶಿಧರ ಹೆಗ್ಡೆ,ಕೆ. ಅಶ್ರಫ್, ನವೀನ್ ಡಿ ಸೋಜ, ರಾಮಾನಂದ ಬೋಳಾರ್, ಶಬೀರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಎಸ್.ಕೆ.ಭಾಗ್ವತ ಮತ್ತಿತರರು ಉಪಸ್ಥಿತಿದ್ದರು.

ಹೊನ್ನಾವರ ಮತ್ಸ್ಯ ವರ್ತಕರೊಂದಿಗೆ ಸಮಾಲೋಚನೆ