June 14, 2024

Vokkuta News

kannada news portal

ಮಂಗಳೂರು ಪಾಸ್ ಪೋರ್ಟ್ ಕಚೇರಿ ಅವ್ಯವಸ್ಥೆ: ಐವನ್ ಡಿ ಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗದಿಂದ ಸರಿಪಡಿಸಲು ಒತ್ತಾಯ.

ಮಂಗಳೂರು: ಮಂಗಳೂರು ಪಾಸ್ ಪೋರ್ಟ್ ಸೇವಾ ಕೇಂದ್ರ ಅವ್ಯವಸ್ಥೆ, ಅರ್ಜಿದಾರರಿಗೆ ಸೂಕ್ತ ಕಾಯುವಿಕೆ ಕೊಠಡಿ ಇಲ್ಲದಿರುವಿಕೆ, ಗ್ರಾಹಕರನ್ನು ಮುಖ್ಯ ದ್ವಾರದಲ್ಲಿನ ಬಿಸಿಲಿನಲ್ಲಿ ಕಾಯುವಂತಹ ಸ್ಥಿತಿ,ಇತ್ಯಾದಿ ಸಮಸ್ಯೆಗಳ ಇತ್ಯರ್ಥ್ಡದ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಲು ಇಂದು ಐವನ್ ಡಿ ಸೋಜಾ ನೇತೃತ್ವದಲ್ಲಿ,ಜಿಲ್ಲಾ ಕಾಂಗ್ರೆಸ್ ವತಿಯಿಂದ ಒತ್ತಾಯಿಸಲಾಯಿತು.

ಮಂಗಳೂರು ಪಾಸ್ಪೋರ್ಟ್ ಕೇಂದ್ರಕ್ಕೆ ಭೇಟಿ ನೀಡುವ ಗ್ರಾಹಕರು ತಮ್ಮ ಸಂದರ್ಶನಕ್ಕಾಗಿ ಕಚೇರಿಗೆ ಬಂದಾಗ ಸೂಕ್ತ ಕಾಯುವಿಕೆ ಕೊಠಡಿಯ ವ್ಯವಸ್ಥೆ ಇಲ್ಲದಿರುವುದು, ಅರ್ಜಿದಾರರು ಕಚೇರಿಯ ಮುಖ್ಯ ದ್ವಾರದಲ್ಲಿ, ರಸ್ತೆಯಲ್ಲಿಯೇ ಕಾಯುವ ಸ್ಥಿತಿಯ ಬಗ್ಗೆ ಈಗಾಗಲೇ ಅಪಾರ ದೂರುಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಾಸ್ ಪೋರ್ಟ್ ಕಚೇರಿಗೆ ಭೇಟಿ ನೀಡಿ ಮುಖ್ಯಸ್ಥ ಯಾದ ಪ್ರೀತಿ ನಾಯರ್ ರವರಿಗೆ ಸಮಸ್ಯೆಯ ವಾಸ್ತವಿಕ ವಿಷಯವನ್ನು ಗಮನಕ್ಕೆ ತರಲಾಯಿತು.

ಅರ್ಜಿದಾರರು ಕಚೇರಿಗೆ ಬಂದರೆ ಬಿಸಿಲಿನಲ್ಲಿ ನಿಲ್ಲುವ ಸ್ಥಿತಿಯಿಂದಾಗಿ ಮಂಗಳೂರಿನ ಪಾಸ್ಪೋರ್ಟ್ ಕಚೇರಿ ,ಹಾಲಿ ಫುಟ್ ಪಾತ್ ಕಛೇರಿಯಾಗಿದೆ ಎಂದು ಐವನ್ ಡಿ ಸೋಜ ಮಾರ್ಮಿಕವಾಗಿ ಹೇಳಿದರು. ತಕ್ಷಣದಿಂದ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ಹೋರಾಟದ ಭಾಗವಾಗಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು.

ಅರ್ಜಿದಾರರು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಾರಣದಿಂದ ವಾಹನ ಪಾರ್ಕಿಂಗ್ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ ಎಂದರು. ಹಾಲಿ ಇರುವ ಪಾಸ್ಪೋರ್ಟ್ ಕಚೇರಿಯನ್ನು ಜನರ ಅನುಕೂಲಕ್ಕಾಗಿ ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು, ಅಲ್ಲಿ ಎಲ್ಲಾ ಸವಲತ್ತು ಇದೆ, ಪಾಸ್ಪೋರ್ಟ್ ಕಚೇರಿ ಅಲ್ಲಿಗೆ ಸ್ಥಳಾಂತರ ಗೊಂಡರೆ ಜನರ ಸಮಸ್ಯೆ ಇತ್ಯರ್ಥ ವಾಗುತ್ತದೆ ಎಂದರು.

ನಿಯೋಗದಲ್ಲಿ ಕೆ.ಅಶ್ರಫ್( ಮಾಜಿ ಮೇಯರ್),ಉದಯ ಆಚಾರಿ,ವಿಕಾಸ್ ಶೆಟ್ಟಿ,ಸಲೀಮ್ ಅಹಮದ್ ಸೌಥ್ ಬ್ಲಾಕ್ ಅಧ್ಯಕ್ಷರು,ಇಮ್ರಾನ್ ಬಂದರ್ ,ಅನ್ವರ್ ರಿಕೋ, ಕಾರ್ಪೊರೇಟರ್ ಸತೀಶ್ ಪೆಂಗಲ್ , ಎನ್ .ಎಸ್.ಯು.ಐ ನ ಅಧ್ಯಕ್ಷರಾದ ಸುಹಾನ್ ಆಳ್ವ,ಅಶ್ರಫ್ ಕಿನಾರ, ಯೂಸುಫ್ ಉಚ್ಚಿಲ,ಎಂ.ಕೆ. ಫಯಾಜ್,ಹೈದರ್ ಬೋಳಾರ್ , ಆನಂದ್ ಸೊನ್ಸ್, ಕಾಂಗ್ರೆಸ್ ಯುವ ನಾಯಕರು ಮತ್ತಿತರರು ಉಪಸ್ಥಿತರಿದ್ದರು.