March 19, 2025

Vokkuta News

kannada news portal

ಮಾಜಿ ಶಾಸಕ ವಸಂತ ಬಂಗೇರ ನಿಧನ: ಕೆ.ಅಶ್ರಫ್ ಸಂತಾಪ.

ಮಂಗಳೂರು: ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ರವರು ನಿಧನರಾಗಿದ್ದು ಜಿಲ್ಲೆಯ ಹಿರಿಯ,ಸೈದ್ಧಾಂತಿಕ,ಮುತ್ಸದ್ದಿ ರಾಜಕಾರಣಿ ಯೊಬ್ಬರನ್ನು ಕಳೆದು ಕೊಂಡಂತಾಗಿದೆ. ಜೀವನದಲ್ಲಿ ನೈಜ ರಾಜಕಾರಣವನ್ನು ಪ್ರದರ್ಶಿಸಿದ ವಸಂತ ಬಂಗೇರ ರವರು ಜಿಲ್ಲೆಯಲ್ಲಿ ಓರ್ವ ಮಾದರಿ ರಾಜಕಾರಣ ಜೀವನ ನಡೆಸಿದ ಹಿರಿಮೆ ಹೊಂದಿದ್ದಾರೆ. ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಅವರ ಕುಟುಂಬಕ್ಕೆ ಅಗಲಿಕೆಯನ್ನು ತಾಳುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಉಪಾಧ್ಯಕ್ಷರು,ದ.ಕ.ಜಿಲ್ಲಾ ಕಾಂಗ್ರೆಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.