March 19, 2025

Vokkuta News

kannada news portal

ರಸ್ತೆಯಲ್ಲಿ ನಮಾಝ್: ಪ್ರಕರಣದಲ್ಲಿ ತನಿಖೆ ಸ್ಥಗಿತ: ಆಯುಕ್ತರಿಂದ ಮುಸ್ಲಿಮ್ ನಿಯೋಗಕ್ಕೆ ಭರವಸೆ.

ಮಂಗಳೂರು: ಇತ್ತೀಚೆಗೆ ಮಂಗಳೂರು ಕಂಕನಾಡಿ ಮಸೀದಿ ಹೊರಾಂಗಣದಲ್ಲಿ ಜುಮಾ ನಮಾಝ್ ವೇಳೆಯಲ್ಲಿ ಮಸೀದಿಯಲ್ಲಿ ಜನ ಭರ್ತಿ ಆದ ನಂತರ ಭೇಟಿ ನೀಡಿದ ಕೆಲವು ವ್ಯಕ್ತಿಗಳು ರಸ್ತೆಯ ಬದಿಯಲ್ಲಿ ನಮಾಝ್ ನಿರ್ವಹಿಸಿದ್ದು, ಅದನ್ನು ಸ್ಥಳೀಯರೊಬ್ಬರು ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದು ಈ ಬಗ್ಗೆ ಸುದ್ದಿಯಾದ ಕಾರಣದಿಂದ ಮಂಗಳೂರು ನಗರ ಪೊಲೀಸರು ನಮಾಝ್ ನೀರ್ವಹಿಸಿದ ವ್ಯಕ್ತಿಗಳ ವಿರುದ್ಧ ಸೊಮೊಟೊ ಪ್ರಕರಣ ದಾಖಲಿಸಿದ್ದು, ಪೊಲೀಸರ ಈ ನಡೆಗೆ ಮುಸ್ಲಿಮ್ ಸಮುದಾಯದ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಮುಸ್ಲಿಮ್ ಮುಂದಾಳುಗಳು ನಿಯೋಗವೊಂದು ಪೋಲೀಸು ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಪೋಲೀಸು ಆಯುಕ್ತರು ಸದರಿ ಪ್ರಕರಣದಲ್ಲಿ ತನಿಖೆ ಸ್ತಾಗಿ ಸ್ಥಗಿತ ಗೋಳಿಸಿ ಪ್ರಕರಣ ಮುಕ್ತಾಯ ಗೊಳಿಸಿದುವುದಾಗಿ ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಕೊಡಿಚಲ್ ಇಬ್ರಾಹಿಮ್, ಕನಚೂರು ಮೋನು ಹಾಜಿ, ಕೆ.ಅಶ್ರಫ್ ಮಾಜಿ ಮೇಯರ್, ಎಂ.ಎಸ್. ಮೊಹಮ್ಮದ್, ಶಾಹುಲ್ ಹಮೀದ್, ಅಬ್ದುಲ್ ಲತೀಫ್, ಸಂಶುದ್ದೀನ್, ಅಬ್ದುಲ್ ರೌಫ್, ಸಿರಾಜ್ ಬಜ್ಪೆ, ನಿಸಾರ್ ಬಜ್ಪೆ, ವಹಾಬ್ ಕುದ್ರೋಳಿ, ಮೊಹಮ್ಮದ್ ಬಪ್ಪಳಿಕೆ, ರಫೀಕ್ ಕಣ್ಣೂರು, ಕಣ್ಣೂರು ಸಲೀಮ್ ಮತ್ತಿತರರು ಉಪಸ್ಥಿತರಿದ್ದರು.