July 27, 2024

Vokkuta News

kannada news portal

ನಮಾಝ್ ಪ್ರಕರಣ: ಎಸ್ಡಿಪಿಐ ಯಿಂದ ನಗರದಲ್ಲಿ ಪ್ರತಿಭಟನೆ, ಪೋಲೀಸ್ ನೋಟೀಸ್ ವಿರುದ್ಧ ನ್ಯಾಯಾಲಯಕ್ಕೆ: ಅನ್ವರ್ ಸಾದತ್ ಬಜೆತ್ತೂರು.

ಮಂಗಳೂರು: ಮಸೀದಿ ಮುಂಭಾಗದಲ್ಲಿ ನಮಾಝ್ ನಿರ್ವಹಿಸಿದವರ ವಿರುದ್ಧ ಸುಮೊಟೋ ಕೇಸು ದಾಖಲಿಸಿದ ತಪ್ಪಿತಸ್ಥ ಪೋಲಿಸ್ ಅಧಿಕಾರಿ ಹಾಗೂ ಮಾಧ್ಯಮದ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಸ್ ಡಿಪಿಐ ಪ್ರತಿಭಟನೆ ನಡೆಸುತ್ತಿದೆ.

ಮಂಗಳೂರಿನ ಕ್ಲಕ್ ಟವರ್ ಬಳಿ ಹಲವು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ರಿಯಾಝ್ ಕಡಂಬು ಮಾತನಾಡಿ ಸಂಘ ಪರಿವಾರ ಕಾರ್ಯಕರ್ತರಿಗೆ ನಿರ್ಧಿಷ್ಟ ವಿಷಯದ ಮೇಲೆ ಸವಾಲು ಹಾಕಿದ್ದೂ ಅಲದೆ, ಪೊಲೀಸರು ತನಗೆ ಜ್ಯಾರಿ ಗೊಳಿಸಿದ 107 ಪೋಲೀಸು ನೋಟಿಸ್ ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರು. ದೇಶದಲ್ಲಿ ಭವಿಷ್ಯದಲ್ಲಿ ಯಾವುದೇ ಸರಕಾರ ಬರಬಹುದು ಆದರೆ ಅವರು ನಮ್ಮ ಬೇಡಿಕೆಗೆ ಒಪ್ಪಲಾರರು ಕಾರಣ ಅವರಿಗೆ ತಮಗೆ ಲಭ್ಯವಾಗುವ ಓಟಿನ ಭಯವಿದೆ ಎಂದರು. ಮಾಧ್ಯಮ ಮತ್ತು ಸಂಘ ಪರಿವಾರದ ಪುಂಡರನ್ನು ಎದುರು ಹಾಕಿ ಕೊಲ್ಲಲು ಪ್ರತಿ ಕಾರ್ಯಕರ್ತನ ಹೆಗಲಲ್ಲಿ ಕೇವಲ ಎಸ್ಡಿಫಿಐ ಪಕ್ಷದ ಧ್ವಜ ಸಾಕು ಬೇರೇನೂ ಅಗತ್ಯ ಇಲ್ಲ ಎಂದರು

ಪ್ರತಿಭಟನೆಯ ನೇತೃತ್ವವನ್ನು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ವಹಿಸಿದ್ದಾರೆ. ಆನಂದ್ ಮಿತ್ತಬೈಲ್, ರಿಯಾಝ್ ಕಡಂಬು ಮತ್ತಿತ್ತರು ಉಪಸ್ಥಿತರಿದ್ದು ನಮಾಝ್,ಅನ್ಯಾಯವಾಗಿ ಸೋಮೊಟೊ ಪ್ರಕರಣ ದಾಖಲು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.