December 3, 2024

Vokkuta News

kannada news portal

ಪ್ರವಾದಿ ಇಬ್ರಾಹಿಮ್ ದೇವೇಖಾಗ್ರಹಿ ಆಗಿದ್ದರು:ಉಳ್ಳಾಲ ಮಸ್ಜಿದ್ ಸಲ್ ಸಬೀಲ್,ಈದ್ ಭಾಷಣದಲ್ಲಿ ಇಬ್ರಾಹಿಮ್ ಸೌಶಾದ್.

ಉಳ್ಳಾಲ: ಮುಸ್ಲಿಮರ ಪವಿತ್ರ ಹಬ್ಬ ಈದ್ ಅಲ್ ಅಧಾಹ್,ಬಕ್ರೀದ್ ಪ್ರಯುಕ್ತ ಇಂದು ಬೆಳಿಗ್ಗೆ ಉಳ್ಳಾಲ ಸಲ್ ಸಬೀಲ್ ಮಸೀದಿಯಲ್ಲಿ ನಡೆದ ಈದ್ ಸಲಾಹ್ ಪ್ರಾರ್ಥನೆಯ ನಂತರದ ಸಾಮೂಹಿಕ ಭಾಷಣದಲ್ಲಿ ಈದ್ ಹಬ್ಬದ ಮಹತ್ವದ ಬಗ್ಗೆ ವಿವರಿಸುತ್ತಾ ಪ್ರವಾದಿ ಇಬ್ರಾಹಿಮ್ ನೆಬೀರವರು ದೇವೇಕಾಗ್ರಹಿ ಆಗಿದ್ದರು. ಸತ್ಯ ಸಂಧತೆಗೆ ಉದಾಹರಣೆಯಾಗಿ ದೇವನು ಪ್ರವಾದಿ ಇಬ್ರಾಹಿಮ್ ರವರನ್ನು ಈ ಲೋಕಕ್ಕೆ ಕಳುಹಿಸಿದ ಉದ್ಧೇಶವನ್ನೂ ವಿವರಿಸುತ್ತಾ, ಪ್ರವಾದಿಯವರು ಅಗ್ನಿ ಆರಾಧಕ ತನ್ನ ಕುಟುಂಬವನ್ನು , ನಾಡಿನ ಜನತೆಯನ್ನು, ಸತ್ಯ ಸಂಧತೆ ಸ್ಥಾಪನೆಗಾಗಿ ಎದುರು ಹಾಕಿ ಕೊಳ್ಳುವ ಪರಿಸ್ಥಿತಿ ಅವರದ್ದಾಗಿತ್ತು ಎಂದರು. ಏಕ ದೇವ ವಿಶ್ವಾಸದ ಸ್ಥಾಪನೆಗಾಗಿ ಅವರು ದೇವೇಕಾಗ್ರಹಿ ಯಾಗಿದ್ದರು ಎಂದರು. ಈದ್ ಹಬ್ಬ ತ್ಯಾಗ ಬಲಿದಾನದ ಸಂಕೇತವಾಗಿದೆ.ಈದ್ ಸಂದೇಶದಲ್ಲಿ ಹಿಂದಿನ ಪ್ರವಾದಿವರ್ಯರು,ದಾರ್ಶನಿಕರು ಪಟ್ಟ ಪಾಡು ಮತ್ತು ದೇವ ನಿಷ್ಠೆಯ ಬಗ್ಗೆ ವಿವರಿಸಿದರು. ಈದ್ ಸರ್ವರಿಗೂ ಶುಭವನ್ನು ತರಲಿ ಎಂದು ಹಾರೈಸಿದರು

ಮಸ್ಜಿದ್ ಸಲ್ ಸಬೀಳ್ ನಲ್ಲಿ ಜರುಗಿದ ಇಂದಿನ ಈದ್ ನಮಾಝ್ ಗೆ ಉಳ್ಳಾಲ ಕೋಟೆಪುರ,ಮುಕ್ಕಚ್ಛೇರಿ,ತೊಕ್ಕೊಟ್ಟು ಕಲ್ಲಾಪು ಇತ್ಯಾದಿ ಕಡೆಗಳಿಂದ ಮುಸ್ಲಿಮರು, ಮಹಿಳೆ,ಮಕ್ಕಳು ಆಗಮಿಸಿ ಭಾಗವಹಿಸಿದರು. ಈದ್ ಪ್ರಾರ್ಥನೆ ನಂತರ ಪರಸ್ಪರರು ಈದ್ ಶುಭಾಶಯ ವಿನಿಮಯ ಮಾಡಿದರು. ಮಸ್ಜಿದ್ ಸಲ್ ಸಬೀಳ್ ಇಸ್ಲಾಹಿ ಟ್ರಸ್ಟೀ ಈದ್ ನಮಾಝ್ ವ್ಯವಸ್ಥೆ ಆಯೋಜಿಸಿದ್ದರು. ಟ್ರಸ್ಟಿಗಳಾದ ಮೊಹಮದ್ ಬಾಷಾ, ಅಬೂ ಹೂರೈರ, ಅಬ್ದುಲ್ ರಝಾಕ್ ಗೊಳ್ತ ಮಜಲು ಮತ್ತಿತರರು ಉಪಸ್ಥಿತರಿದ್ದರು.