September 8, 2024

Vokkuta News

kannada news portal

ಬೋಳಿಯಾರು ಯುವಕರ ಬಂಧನ ಘಟನೆ, ಎಸ್ಡಿಪಿಐ ಯಿಂದ ಕೊಣಾಜೆ ಪೋ.ಸ್ಟೇಶನ್ ಎದುರಿಗೆ ಪ್ರತಿಭಟನೆ.

ಕೊಣಾಜೆ: ಬೋಳಿಯಾರಿನಲ್ಲಿ ಇತ್ತೀಚೆಗೆ ಚುನಾವಣೆ ಫಲಿತಾಂಶ ಮತ್ತು ಬಿಜೆಪಿ ವಿಜೇತ ಅಭ್ಯರ್ಥಿ ಬ್ರಿಜೇಶ್ ಚೌಟ ರವರ ಗೆಲುವು ಸಂಭ್ರಮಿಸಿ ಬಿಜೆಪಿ ಕಾರ್ಯಕರ್ತರು ತಮ್ಮ ಮೆರವಣಿಗೆ ಸಂಧರ್ಭದಲ್ಲಿ ಬೋಳಿಯಾರ್ ಮಸೀದಿ ಎದುರಿಗೆ ಪ್ರಚೋದನಾತ್ಮಕ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಸಂಭವಿಸಿದ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಚೂರಿ ಇರಿತದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧನ ಮಾಡುವಾಗ ಅಮಾಯಕ ಮುಸ್ಲಿಮ್ ಯುವಕರ ಬಂದನ, ಪೊಲೀಸರಿಂದ ಸ್ಥಳೀಯ ನಿವಾಸಿ ಮುಸ್ಲಿಮ್ ಮನೆಗಳ ಮೇಲೆ ಪೊಲೀಸರ ಧಾಳಿ, ಮಸೀದಿ ವಠಾರದಲ್ಲಿ ಪ್ರಚೋದನಾತ್ಮಕ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಬಂದನ ನಡೆಸದ ಪೊಲೀಸರ ನಡೆ, ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ರವರ ಪಕ್ಷ ಪಾತೀಯ ಧೋರಣೆ, ಪೊಲೀಸರ ಮುಖಾಂತರ ಸ್ಥಳೀಯ ಯುವಕರನ್ನು ದಬ್ಬಾಳಿಕೆ ನಡೆಸುವ ಶಾಸಕರ ನಡೆ ಇತ್ಯಾದಿ ವಿಷಯಗಳು ಮತ್ತು ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ ಎಸ್ ಡಿಪಿಐ ಕೊಣಾಜೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಮಳೆಯನ್ನು ಲೆಕ್ಕಿಸದೆ ಸೇರಿದ ನೂರಾರು ಜನ ಸೇರಿದ್ದಾರೆ. ಬೋಳಿಯಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣದಲ್ಲಿ ಹದಿನಾರು ಮಂದಿ ಆರೋಪಿಗಳ ಬಂಧನವಾಗಿದ್ದರೂ ಪೊಲೀಸರು ಬೇಟೆ ಮುಂದುವರಿಸಿದ್ದಾರೆ. ಕಣ್ಣು ಮುಚ್ಚಿ ಕುಳಿತ ರಾಜ್ಯ ಸರಕಾರದ ದ್ವಿಮುಖ ದೋರಣೆಯನ್ನು ವಿರೋಧಿಸಿ ಎಸ್ ಡಿಪಿಐ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಪ್ರಮುಖರಾದ ಅನ್ವರ್ ಸಾದತ್ ಬಜೆತ್ತೂರು, ರಿಯಾಝ್ ಕಡಂಬು ನಸ್ರೀಯ ಕಣ್ಣೂರು ಮುಂತಾದ ನಾಯಕರು ಮಾತನಾಡಿದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ವಿವಿಧ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದಾರೆ ಎಂದು ಕೂಡಾ ಆರೋಪಿಸಲಾಗಿದೆ. ಪ್ರತಿಭಟನೆಯಲ್ಲಿ ರಾಜ್ಯ ಸರಕಾರ, ಪೊಲೀಸರು,ಸ್ಥಳೀಯ ಶಾಸಕರ ವಿರುದ್ಧದ ಭಿತ್ತಿ ಪತ್ರ ಪ್ರದರ್ಷಿತ ವಾಗಿ ಮತ್ತು ಘೋಷಣೆಗಳು ಕೇಳಿಬಂದಿದೆ.