September 7, 2024

Vokkuta News

kannada news portal

ಹೊಸ ದಂಡ ಸಂಹಿತೆ,ಇತರ ಕಾನೂನುಗಳ ಅನುಷ್ಠಾನ ಮುಂದೂಡುವಂತೆ ಕೋರಿ ಪಿಯುಸಿಎಲ್ ಮನವಿ.

ಬೆಂಗಳೂರು: ಹಿಂದಿನ ವರ್ಷ ದಿಸೆಂಬರ್ ನಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತೆ,ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಕಾನೂನಗಳು ಮುಂದಿನ ತಿಂಗಳ ಆರಂಭದಿಂದ ಅನುಷ್ಠಾನ ಗೊಳ್ಳುವುದನ್ನು ಮುಂದೂಡುವಂತೆ ದೇಶದ ಪ್ರಮುಖ ಮಾನವ ಹಕ್ಕು ಸಂಘಟನೆಯಾದ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬೆರ್ಟೀಸ್ ಸಂಸ್ಥೆಯು ಕೇಂದ್ರ ಕಾನೂನು ಮಂತ್ರಿಯಾದ ಶ್ರೀ ಅರುಣ್ ಮೇಘವಾಲ್ ರವರಿಗೆ ಪತ್ರ ಬರೆದಿರುತ್ತದೆ. ಮೂರು ಕಾನೂನುಗಳ ಅನುಷ್ಠಾನದ ಮೊದಲು ಸದ್ರಿ ಕಾನೂನಿನ ಬಗ್ಗೆಗಿನ ಮತ್ತು ಮಾನವ ಹಕ್ಕುಗಳ ಸಂಭಾವ್ಯ ಉಲ್ಲಂಘನೆ ಸಾಧ್ಯತೆ ಬಗ್ಗೆ ರಾಷ್ಟ್ರ ಮಟ್ಟದ ಒಂದು ಬಹು ಆಯಾಮದ ಚರ್ಚೆಯ ಅವಶ್ಯಕತೆ ಇದೆ ಎಂದು ಪಿಯುಸಿಎಲ್ ಸಂಸ್ಥೆ ಹೇಳಿದೆ. ಪಿಯುಸಿಎಲ್ ಸಂಸ್ಥೆಯು ಹೊಸ ಕಾನೂನಿನ ಬಗ್ಗೆಗಿನ ತನ್ನ ವಿಸ್ತೃತ ಅಧ್ಯಯನದಲ್ಲಿ ಬೊಟ್ಟು ಮಾಡಿ ನಾಗರಿಕರು ಸರಕಾರದ ಯೋಜನೆಗಳನ್ನು ವಿರೋಧಿಸುವ ಹಲವು ಸಾಮಾನ್ಯ ಕ್ರಿಯೆಗಳನ್ನು ಅಪರಾಧವೆಂದು ಬಿಂಬಿಸಿ,ಕಾನೂನನ್ನು ಅವರ ವಿರುದ್ಧದ ಆಯುಧವಾಗಿ ಬಳಕೆ ಮಾಡುವ ಸಾಧ್ಯತೆಯನ್ನು ಹೇಳಿದೆ. ಹೊಸ ಕಾನೂನಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿ ಇರುವ ಪ್ರಮುಖ ಕಾನೂನಿನ ಖಂಡಿಕೆಗಳನ್ನು ಯಥಾವತ್ತಾಗಿ ನಕಲು ಮಾಡಲಾಗಿದೆ ಇಂದು ಕೂಡಾ ಹೇಳಿದೆ. ಹಾಲಿ ಕಾನೂನಿನಲ್ಲಿರುವ ಅಮಾಯಕತೆಯ ಗಣನೆ ಯಂತಹ ಕಾನೂನಿನ ಸಾಮಾನ್ಯ ಸ್ವರೂಪವನ್ನು ವಿರಹಿತ ಗೊಳಿಸಲಾಗಿದೆ. ಪೊಲೀಸರಿಗೆ ಅಧಿಕ ಅಧಿಕಾರ ಇತ್ಯಾದಿ ವಿಷಯಗಳನ್ನು ವಿಮರ್ಷಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಭಂಧಿಸಿದ ಕಾನೂನನ್ನು ಆಯುಧೀಕರಣ ಮಾಡಲಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಹೊಸ ಕಾನೂನು ಸಾಮಾನ್ಯ ಕಾನೂನು ಪ್ರಕ್ರಿಯೆಯ ವಿರುದ್ಧವಾಗಿದೆ ಎಂಬ ವಿಮರ್ಷೆಯೊಂದಿಗೆ ಈ ಸರ್ವ ವಿಷಯಗಳಲ್ಲಿ ಮುಕ್ತ ಚರ್ಚೆಯ ನಂತರವೇ ಈ ಕಾನೂನುಗಳ ಅನುಷ್ಠಾನವಾಗಬೇಕೆಂದು ಬೇಡಿಕೆ ಮುಂದಿಟ್ಟಿದೆ.
ಮುಂದುವರಿದು, ತಾನು, ಒಂದು ಪ್ರಮುಖ ಮಾನವ ಹಕ್ಕು ಅನುಭವೀ ಸಂಸ್ಥೆಯಾಗಿ, ಈ ಹಿಂದೆ ಈ ಸಂಸ್ಥೆಯ ಮುಖ್ಯಸ್ಥರಾಗಿ ಪ್ರಮುಖ ಹುದ್ದೆಯಲ್ಲಿ ಜಸ್ಟಿಸ್ ತಾರ್ಕುಂಡೆ, ಜಸ್ಟಿಸ್ ರಾಜೇಂದ್ರ ಸಾಚಾರ್, ಪ್ರೊ ರಜನಿ ಕೊಟ್ಟಾರಿ, ಕೆ. ಜಿ. ಖನ್ನಿಬರನ್, ಪ್ರೊ. ಪ್ರಕಾಶ್ ಸಿನ್ಹಾ ರಾಂತವರು ಮಾನವ ಹಕ್ಕುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಅನುಭವ ಹೊಂದಿದ ಒಂದು ಜವಾಬ್ದಾರಿ ಸಂಸ್ಥೆ ಎಂದು ಹೇಳಿದೆ. ಪ್ರಜಾಪ್ರಭುತ್ವದ ಪ್ರಮುಖ ಭಾಗವಾದ ಚುನಾವಣಾ ಪ್ರಕ್ರಿಯೆಯಲ್ಲಿ ಜನರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸುವ ಪ್ರಕ್ರಿಯೆಯಾದ ನೋಟಾ ಅನುಷ್ಠಾನಕ್ಕೆ ಮುಂಚೂಣಿಯಲ್ಲಿ ನಿಂತು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ವಿಜಯಿಯಾದ ಅನುಭವ ಇರುವ ಸಂಸ್ಥೆ ಎಂದು ಕೂಡಾ ಹೇಳಿದೆ. ಮುಂದುವರಿದು, ತಾನು ಈ ದೇಶವು ಯಾವುದೇ ಕಾನೂನನ್ನು ಅನುಷ್ಠಾನ ಮಾಡುವುದರಲ್ಲಿ ವಿರೋಧವಿಲ್ಲ, ಆದರೆ 2023 ರಲ್ಲಿ ವಿವಾದಿತ ಕಾನೂನನ್ನು ಹಿಂದಿನ ಕೇಂದ್ರ ಸರಕಾರ ಬಹು ಸಂಖ್ಯೆಯ ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಗೂಳಿಸಿ, ಉಳಿದ ಅಲ್ಪ ಬಹುಮತದ ಸದನ ಸಂಧರ್ಭದಲ್ಲಿ ತುರಾ ತುರಿಯಲ್ಲಿ ಚರ್ಚೆ ರಹಿತವಾಗಿ ಅನುಷ್ಠಾನ ಗೊಳಿಸಿರುವ ಬಗ್ಗೆ ವಿಮರ್ಶಿಸುತ್ತಿದೆ,ಎಂದು ಹೇಳಿದೆ.
ರಾಷ್ಟೀಯ ಹಿತಾಸಕ್ತಿ ಕಾರಣಕ್ಕಾಗಿ ಸದ್ರಿ ಕಾನೂನನ್ನು ಅನುಷ್ಠಾನ ಗೊಳಿಸುವ ಪ್ರಯತ್ನವನ್ನು ಮುಂದೂಡ ಬೇಕೆಂದು ಕೋರಿದೆ.