ವೆಬ್: ಮುಸ್ಲಿಮ್ ವಾಯ್ಸ್ ಮೆಸೆಂಜೆರ್ ಗ್ರೂಪ್ ನಲ್ಲಿ ಆಯೋಜಿಸಲಾಗಿದ್ದ ನಿನ್ನೆಯ 15 ಶೇಕಡಾ ಮುಸ್ಲಿಮ್ ಮತ ವಿಕೇಂದ್ರೀಕರಣ ಪರ್ಯಾಯತೆ ಎಂಬ ವಿಷಯದ ಮೇಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಜ. ರಿಯಾಝ್ ಫರಂಗಿಪೇಟೆ ರವರು ನಿರೂಪಕರ ಪ್ರಶ್ನೆಗೆ ಸ್ಪಂದಿಸುತ್ತಾ, ರಾಷ್ಟ್ರೀಯ ಪ್ರಮುಖ ಹುದ್ದೆ ವಹಿಸಿಕೊಂಡಿರುವ ನಿಮ್ಮ ಅನಿಸಿಕೆ ಏನು ಎಂಬುದಕ್ಕೆ:
ರಿಯಾಝ್ ಫರಂಗಿಪೇಟೆ:
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಒಂದು ರಾಷ್ಟ್ರೀಯ ರಾಜಕೀಯ ಪಕ್ಷ,ರಾಷ್ಟ್ರೀಯವಾಗಿ ಚುನಾವಣಾ ಆಯೋಗ ದಲ್ಲಿ ನೋಂದಾವಣೆ ಗೊಂಡ ಪಕ್ಷ, ಪ್ರಸಕ್ತ ದೇಶದಲ್ಲಿ ಹದಿನಾಲ್ಕು ರಾಜ್ಯದಲ್ಲಿ ಎಸ್ಡಿಪಿಐ ಯ ಕಾರ್ಯಚಟುವಟಿಕೆ ಚಾಲ್ತಿಯಲ್ಲಿ ಇದೆ. ಅಂತಹ ಒಂದು ಪಕ್ಷ, ತಳಮಟ್ಟದ ಒಂದು ಸಮುದಾಯದ,ಶೋಷಿತ ವರ್ಗಗಳ,ಅವರ ಸಬಲೀಕರಣ ಮಾಡುವ ದೃಷ್ಟಿಕೋನ ಇಟ್ಟುಕೊಂಡು,ನ್ಯಾಯದ ಮರು ಸ್ಥಾಪನೆಗೆ ಬೇಕಾಗಿ ನಿರಂತರ ಆಗಿ ಹೋರಾಟಕ್ಕೆ,ರಾಜಕೀಯ,ಚುನಾವಣಾ ರಾಜಕೀಯ,ಸಾಮಾಜಿಕ ರಂಗದಲ್ಲಿ ತೊಡಗಿಸಿ ಕೊಂಡಂತಹ ಪಕ್ಷ. ಹಾಲಿ ದೇಶದಲ್ಲಿ ಸುಮಾರು ಮೂರು ಸಾವಿರದಷ್ಟು ರಾಜಕೀಯ ಪಕ್ಷಗಳು ಹೀಗೆ ನೊಂದಾಯಿಸಿ ಕೊಂಡಿದ್ದರೂ,ಮುಖ್ಯವಾಹಿನಿಯಲ್ಲಿ ಇರುವ ಪಾರ್ಟಿಯ ಒತ್ತಿಗೆಯೇ ಚರ್ಚೆ ಆಗುತ್ತಿರುವ ಒಂದು ರಾಜಕೀಯ ಪಕ್ಷ ಎಸ್ ಡಿ ಪೀ ಐ. ಅಂತಹ ಒಂದು ಪಕ್ಷ ಅಂತಹ ಒಂದು ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಎಂಬ ಒಂದು ಸ್ಥಾನಮಾನ ಗೌರವ ಲಭಿಸಿದೆ ಎಂದರೆ, ಈ ದೇಶದಲ್ಲಿ ಅತ್ಯಂತ ತಳಮಟ್ಟದ ಜನರನ್ನೂ ಪರಿಗಣಿಸಲ್ಪಡುವ ನೈಜ ಆಂತರಿಕ ಪ್ರಜಾ ಪ್ರಭುತ್ವ ವ್ಯವಸ್ಥೆ ಇರುವ ಒಂದು ಪಕ್ಷ ಎಸ್.ಡಿ.ಪೀ.ಐ ಆಗಿರುತ್ತದೆ. ಅದಕ್ಕೆ ಉದಾಹರಣೆ ನಾನು ಎಂಬಂತೆ ಮತ್ತು ಮಂಗಳೂರು ಎಂಬ ಸ್ಥಳದ ಅಥವಾ ಈ ಪ್ರದೇಶದ ಸಾಮಾನ್ಯ ವ್ಯಕ್ತಿ ಆಗಿರುವ ನನ್ನನ್ನು ಇಂದು ದೇಶ ವ್ಯಾಪ್ತಿಯಲ್ಲಿ ಪರಿಚಯಿಸುವ,ಒಂದು ದೊಡ್ಡ ಗೌರವ ನನಗೆ ನೀಡಿದೆ. ಅದಕ್ಕೆ ನಾವು ಪ್ರಮಾಣಿಕ ವಾಗಿ ಸೇವೆ ಮಾಡುತ್ತಾ ಇದ್ದೇವೆ. ಅದಕ್ಕೆ ನಾನು ಎಂದಿಗೂ ಚಿರ ಋಣಿ ಅಗಿ ಇರುತ್ತೇನೆ. ಇಂತಹ ನಾಯಕತ್ವ ಬೆಳೆಸುವುದರಲ್ಲಿ ಪ್ರಾಮಾಣಿಕವಾಗಿ ಪ್ರಯತ್ನವನ್ನು ಪಕ್ಷ ಮಾಡುತ್ತದೆ ಎಂದು ಹೇಳಿದರು.
ಕಳೆದ ಹದಿನಾರು ವರ್ಷಗಳ ಪಕ್ಷ ಸಂಘಟನೆಯ ಕಾರಣದಿಂದಾಗಿ ಭಯ ಮತ್ತು ಹಸಿವು ಮುಕ್ತ ಭಾರತ,ಸ್ವಾಭಿಮಾನಿ ಬದುಕು, ಸ್ವಾಂತ್ರ್ಯತದ ಕಾವಲಾಳು, ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆ ಹೇಗೆ ಸಾಧ್ಯವಾಯಿತು?.
ರಿಯಾಝ್ ಫರಂಗಿಪೇಟೆ: ಕಳೆದ ಹದಿನಾರು ವರ್ಷದ ಎಸ್ಡಿಪ್ಪಿಐ ರಾಜಕೀಯಡಲ್ಲಿ ಅಧಿಕ ಕ್ಕಿಂತಲೂ ಅಧಿಕವಾಗಿ ಹೋರಾಟದ ರಾಜಕೀಯ ಮಾಡಿದ್ದೇವೆ. ಚುನಾವಣಾ ರಾಜಕೀಯದ ಬಗ್ಗೆ ನಾವು ಅಧಿಕ ಕೇಂದ್ರೀಕೃತ ಮಾಡಲಿಲ್ಲ. ಒಂದು ರಾಜಕೀಯ ಪಕ್ಷ ಎಂಬ ನೆಲೆಯಲ್ಲಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೂ, ಅಧಿಕ ಹೋರಾಟದ ರಾಜಕೀಯ ಮಾಡಿದ್ದೇವೆ. ಕಾರಣ ಇಲ್ಲಿ ಇಲ್ಲಿ ಅಸ್ತಿತ್ವದಲ್ಲಿ ಇರುವ ಫ್ಯಾಸಿಸ್ಟ್ ವರ್ಗದವರು ಈ ದೇಶದ ಸಂವಿಧಾನವನ್ನು ನಾಶ ಗೊಳಿಸುವಂತಹ, ಅವರ ನಿರಂತರ ಪ್ರಯತ್ನ, ಅವರು ಮಾಡಿದ ವಿವಿಧ ಷಡ್ಯಂತ್ರ,ಅಧಿಕಾರ ದುರುಪಯೋಗ ಆಗಿರಬಹುದು, ಅಥವಾ ಸರಕಾರಿ ಇಲಾಖೆಯನ್ನು, ಅವರು ಕೈವಶ ಮಾಡಿಕೊಂಡಾಂತಃ ಪ್ರಯತ್ನ, ಹೀಗೆ ಫ್ಯಾಸಿಸ್ಟ್ ತಂತ್ರಗಾರಿಕೆ ಯನ್ನು ದೇಶದ ಮುಂದೆ ಮುಕ್ತವಾಗಿ ಹೇಳಿ ಅಂತಹ ಒಂದು ಜಾಗೃತಿ ಸೃಷ್ಟಿ ಮಾಡಲು ಸಾಧ್ಯವಾಗಿದೆ. ವಿಶೇಷವಾಗಿ ಶೋಷಿತ ಸಮುದಾಯದ ಮಧ್ಯೆ, ಅಲ್ಪ ಸಂಖ್ಯಾತ ವರ್ಗ, ದಲಿತ ಸಮುದಾಯ, ಒಟ್ಟಾರೆ ಈ ಫ್ಯಾಸಿಸ್ಟ್ ಷಡ್ಯಂತ್ರದ ಒಂದು ವಿಷಯವನ್ನು ಮುಕ್ತವಾಗಿ ಚರ್ಚೆ ಮಾಡುವಂತಹ ಅದನ್ನು ಗುರಿಯಾಗಿಸಿ ಜನರ ಮುಂದೆ ತರುವಂತಹ, ಅವರ ಒಂದೊಂದು ವಿಚಾರ ಧಾರೆಯನ್ನು ಜನರ ಮುಂದೆ ಮಾಧ್ಯಮದ ಮುಂದೆ, ಪ್ರತಿಭಟನೆಯ ಮೂಲಕ, ಜನರ ಗಮನ ಸೆಳೆಯುವ ಪ್ರಯತ್ನ ಏನಿದೆ ಇದಾಗಿರುತ್ತದೆ ಕಳೆದ ಹದಿನಾರು ವರ್ಷಗಳ ಕಾರ್ಯವಾಗಿದೆ. ಇದರಿಂದಾಗಿ ಫ್ಯಾಸಿಸ್ಟ್ ಸಿದ್ಧಾಂತದ ವಿರುದ್ಧ ಮೌನವಾಗಿ ರಾಜಕೀಯ ಲಾಭಕ್ಕಾಗಿ ಇರುವ ಕೆಲವು ರಾಜಕೀಯ ಪಕ್ಷ, ರಾಜಕೀಯ ನಾಯಕರು, ಅಥವಾ ಅಂತಹ ವ್ಯವಸ್ಥೆ ಫ್ಯಾಸಿಸ್ಟ್ ವಿರುದ್ಧ ಅನಿವಾರ್ಯವಾಗಿ ಮಾತನಾಡುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಇದು ನಮ್ಮ ಯಶಸ್ವಿ,,ಭಯ ಮುಕ್ತ , ಹಸುವು ಮುಕ್ತ ಸ್ವಾತಂತ್ರ್ಯ ಘೋಷಣೆ ಏನಿರಬಹುದು,ಇದು, ಫ್ಯಾಸಿಸ್ಟ್ ಭಯವನ್ನು ಜನರಿಗೇ ಹೇಗೆ ಕಾನೂನಾತ್ಮಕ ವಾಗಿ ಹೇಗೆ ಎದುರಿಸಬಹುದು, ನಮ್ಮ ಪ್ರಜಾ ಪ್ರಭುತ್ವ ಅದಕ್ಕೆ ಹೇಗೆಅವಕಾಶ ನೀಡಿದೆ ಒಂದು ಹೋರಾಟ ದ ದ್ವನಿ ಆಗಿ ಹೇಗೆ ಅದರ ಆಬ್ಬರತೆಯನ್ನು ಹೇಗೆ ಮಿತ ಗೊಳಿಸಬಹುದು ಎಂಬುದನ್ನು ನಾವು ವಿವಿಧ ಸಂಧರ್ಭದಲ್ಲಿ ನಾವು ತೋರಿಸಿ ಕೊಟ್ಟಿದ್ದೇವೆ.
ಕರ್ನಾಟಕದಲ್ಲಿ ಗರಿಷ್ಠ 90 ಲಕ್ಷ ಮುಸ್ಲಿಮ್ ಜನಸಂಖ್ಯೆ ಇದ್ದರೂ ಒಂದೇ ಒಂದು ಮುಸ್ಲಿಮ್ ಲೋಕ ಸಭಾ ಅಭ್ಯರ್ಥಿ ಯ ನ್ನು ಆಯ್ಕೆ ಮಾಡಿ ಕಳುಹಿಸ ಲಾಗಲಿಲ್ಲ ಈ ಬಗ್ಗೆ ನಿಮ್ಮ ಅನಿಸಿಕೆ?
ರಿಯಾಝ್ ಫರಂಗಿಪೇಟೆ: ರಾಜಕೀಯದಲ್ಲಿ ನಮಗೆ ಅನುಪಾತೀಯ ಪ್ರಾತಿನಿಧ್ಯ ನಮಗೆ ಲಭ್ಯವಾಗಿತ್ತಾ ಇಲ್ಲ.ನಮಗೆ ಲಭ್ಯವಾದ ಅಭ್ಯರ್ಥಿಯನ್ನು ವಿಜಯಿಗೂಳಿಸಲು, ಅಭ್ಯರ್ಥಿತನ ನೀಡಿದ ಪಕ್ಷವೇ ವಿಫಲ ವಾಗುತ್ತಿದೆ.ಕಾರಣ ಏನು ಅಂದರೆ, ನಾವೆಲ್ಲರೂ ಒಟ್ಟಾಗಿ ಜಾತ್ಯಾತೀತ ಎಂದು ಹೇಳಲ್ಪಡುವ ಆ ಒಂದು ಪಕ್ಷದ ಎಲ್ಲ ಜಾತಿಯ ಅಭ್ಯರ್ಥಿಗೆ ನಾವು ಮತ ಚಲಾಯಿಸಬೇಕು, ಆವರ ಪಾರ್ಟಿಯ ಅವರೇ ಅಂತಿಮ ಗೋಳಿಸಿದ ನಮ್ಮ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಅವರ ಪಕ್ಷದ ಕಾರ್ಯಕರ್ತರು, ನಾಯಕರು ಮತ ಚಲಾಯಿಸಲು ಸಿದ್ದರಿಲ್ಲ. ಹಾಗೆ ಜಾತ್ಯಾತೀತ ಎಂಬುದು ನಮಗೆ ಮಾತ್ರ ಸೀಮಿತವಾಗಿ ಇರುವ ಒಂದು ವಸ್ತು ಆಗಿ ಇಲ್ಲಿ ಬೆಳೆಯುತ್ತಿರುವುದು ಇಂದು ಅಪಾಯಕಾರಿ ಬೆಳವಣಿಗೆ ಆ ಕಾರಣದಿಂದಾಗಿ ತೊಂಬತ್ತು ಲಕ್ಷ ಮುಸ್ಲಿಮರ ಪ್ರತಿನಿಧಿ ಆಗಿ ನಮಗೆ ಓರ್ವ ಮುಸ್ಲಿಮ್ ಸಂಸದರನ್ನು ಕರ್ಣಾಟಕದಿಂದ ಲೋಕ ಸಭೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಇದು ವೈಫಲ್ಯ, ಇಲ್ಲಿರುವ ಜಾತ್ಯಾತೀತ ಪಕ್ಷದ ನಾಯಕತ್ವದ ವೈಫಲ್ಯ ಆಗಿದೆ.ಮುಸ್ಲಿಮ್ ಶಾಸಕರಾಗಿರುವ ಅಭ್ಯರ್ಥಿಗಳು ಮುಸ್ಲಿಮ್ ಪ್ರಾಬಲ್ಯ ಇರುವ ಕ್ಷೇತ್ರದಿಂದ ವಿಜಯಿಯಾಗಿ ಹೋಗುತ್ತಾರೆ ಹೊರತು ಇತರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಜಯಿ ಆಗದ ಪರಿಸ್ಥಿತಿ ನಿರ್ಮಾಣ ಮಾಡಿ ಇಡಲಾಗಿದೆ. ಆದುದರಿಂದ ನಮ್ಮ ಓಟಿನ ಶಕ್ತಿತನವನ್ನು ನಾವು ಇತರ ಕ್ಷೇತ್ರದಲ್ಲಿ ಪ್ರದರ್ಶಿಸಬೇಕಿದೆ. ನೀವು ಹೀಗೆ ರಾಜಕೀಯ ಹಿನ್ನಡೆ ಮಾಡುವುದಾದರೆ ನಾವು ಡ್ಯಾಮೇಜ್ ಪೊಲಿಟಿಕ್ಸ್ ಗೆ ನಾವು ಸಿದ್ದರಾಗುತ್ತೇವೆ ಎಂಬ ಒಂದು ಸಂದೇಶ ಕೊಟ್ಟರೆ ಮಾತ್ರಾ ನಮಗೆ ನಮ್ಮ ರಾಜಕೀಯ ಪ್ರಾತಿನಿಧ್ಯ ಹಿಂಪಡೆಯಲು ಸಾಧ್ಯ, ಆದರೆ ದುರಂತ ಏನೆಂದರೆ ಇಲ್ಲಿರುವ ರಾಜಕೀಯ ಪಕ್ಷಕ್ಕೆ ಹೆದರಿಕೆ ಮೂಡಿಸುವ ಕಾರ್ಯ ನಮ್ಮಿಂದ ಆಗುತ್ತಾ ಇಲ್ಲ.ನಾವು ನಮ್ಮ ಅನಿವಾರ್ಯತೆ, ಸೋಲು, ಬಿಜೆಪಿ ಬರುತ್ತದೆ ಎಂಬಂತಹ ಕೆಲವು ಘೋಷಣೆಗೆ ನಾವು ಬಲಿ ಆಗಿ ನಾವು ನಮ್ಮ ರಾಜಕೀಯ ಪ್ರಬುದ್ಧತೆ,ಸಬಲೀಕರಣ ಮಾಡಿ ನಮ್ಮ ಮತವನ್ನು ಕೂದ್ರೀಕರಿಸಿ ನಾಯಕರನ್ನು ಗುರುತಿಸುವ ಕಾರ್ಯದಲ್ಲಿ ನಾವು ವಿಫಲ ಆಗುತ್ತಿದ್ದೇವೆ.
ಭಾರತದ ಮುಸ್ಲಿಮ್ ಸಮುದಾಯ ಚುನಾವಣೆಯಲ್ಲಿ ಒಂದು ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ಈ ಬಾರಿ ಹಲವು ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿ ಮತ ಚಲಾಯಿಸಿದೆ ಈ ಬಗ್ಗೆ ನಿಮ್ಮ ಅನಿಸಿಕೆ?
ರಿಯಾಝ್ ಫರಂಗಿಪೇಟೆ: ಮುಸ್ಲಿಮರಾಗಿದ್ದಾರೆ,2024 ನೆ ಲೋಕಸಭೆ ಚುನಾವಣೆಯಲ್ಲಿ ಬಹು ಆಕರ್ಷಿತ ಕೇಂದ್ರ ಬಿಂದು, ಇವತ್ತು ನರೇಂದ್ರ ಮೋದಿ ಎಂಬ ಸರ್ವಾಧಿಕಾರಿ ಅಥವಾ ಅವರು ಪ್ರತಿನಿಧಿಸುವ ಪಕ್ಷ ಬಿಜೆಪಿ ಅಥವಾ ಒಟ್ಟಾರೆ ಸಂಘ ಪರಿವಾರ ಇಂದು ದೇಶದ ಮುಂದೇ, ಸರ್ವಾಧಿಕಾರ ಈ ದೇಶದಲ್ಲಿ ನಡೆಯುವುದಿಲ್ಲ ಎಂದು ಒಂದು ಸಂದೇಶ ರವಾನೆ ಆಗಿದ್ದರೆ, ಅದಕ್ಕೆ ನಿರ್ಣಾಯಕ ಮತ,ಸಂಘಟಿತ ಹೋರಾಟ,ಮತ ವಿಕೇಂದ್ರೀಕರಣ ಇದರಲ್ಲಿ ಮುಸ್ಲಿಮರ ಇಂದು ಮಹಾ ಪಾತ್ರ ಆಗಿರುತ್ತದೆ ಈ ದೇಶದಲ್ಲಿ ನಾವು ನೋಡುತ್ತಿದ್ದೇವೆ. ಇತರ ಎಲ್ಲವನ್ನೂ ಬದಿಗೆ ಸರಿಸಿ, ಈ ಸಂಧರ್ಭದಲ್ಲಿ ನಾವು ಫ್ಯಾಸಿಸ್ಟ್ ಸಿದ್ಧಾಂತವನ್ನು ಸೋಲಿಸಿಯೇ ಸಿದ್ದ ಎಂಬ ಆ ಒಂದು ಸಂಘಟಿತ ಪ್ರಯತ್ನ ಏನಿದೆಯೋ ಅದರ ಒಂದು ಯಶಸ್ವಿ ಆಗಿರುತ್ತದೆ. ಆಗ ಇದು ನಿರಂತರ ಆಗ ಕಳೆದ ಇಪ್ಪತೈದು ವರ್ಷದ ರಾಜಕೀಯ ಇತಿಹಾಸದಲ್ಲೇ ಮುಸ್ಲಿಮ್ ಸಮುದಾಯ ನಿಸ್ವಾರ್ಥ ಆಗಿ ಈ ಕೆಲಸವನ್ನು ಮಾಡುತ್ತಾ ಬಂದಿದೆ. ಆದುದರಿಂದ ಅಷ್ಟೂ ಕಾಳಜಿ ಉಳ್ಳ ಅಂತಹ ಜಾತ್ಯತೀತತೆ, ಪ್ರಜಾ ಪ್ರಭುತ್ವದ ಕಾಳಜಿ ಹೊಂದಿರುವ ಈ ಒಂದು ಸಮುದಾಯಕ್ಕೆ ವಿವಿಧ ಪಕ್ಷಗಳು ನೀಡುವ ರಾಜಕೀಯ ಪ್ರಾತಿನಿಧ್ಯ ಇದು ಏನೂ ಅಲ್ಲ ಎಂಬುದು ನನ್ನ ಒಂದು ಅಭಿಪ್ರಾಯ ಕನಿಷ್ಠ ಪಕ್ಷ ಈ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸುಮಾರು ಐವತ್ತಕ್ಕಿಂತಲೂ ಅಧಿಕ ಅಭ್ಯರ್ಥಿತನ ನೀಡಬೇಕಿದೆ. ರಾಜೇಂದ್ರ ಸಿಂಗ್ ಸಾಚಾರ್ ರವರೂ ಅವರ ವರದಿಯಲ್ಲಿ ಮುಸ್ಲಿಮರಿಗೆ ಕನಿಷ್ಠ ಪಕ್ಷ ಹತ್ತು ಶೇಕಡಾ ದಷ್ಟು ರಾಜಕೀಯ ಮೀಸಲಾತಿ ನೀಡಬೇಕಿದೆ ಎಂದು ಹೇಳಿದ ಹಾಗೆ ಇಂದು ನೀಡಿದ್ದರೂ ಸುಲಭವಾಗಿ ಐವತ್ತು ಸ್ಥಾನಗಳು ಲಭ್ಯವಾಗುತ್ತಿತ್ತು. ಈ ದೇಶದಲ್ಲಿ ಜಾತ್ಯತೀತ ರು ಅಥವಾ ಅಲ್ಪ ಸಂಖ್ಯಾತರ ಸಂರಕ್ಷಕ ಎನ್ನುವ ಕಾಂಗ್ರೆಸ್ ಪಕ್ಷ ಅವರು ಖುದ್ದು ಆಳ್ವಿಕೆಯಲ್ಲಿ ಇರುವ ಸಂಧರ್ಭದಲ್ಲಿ ಅವರೇ ಸ್ಥಾಪಿಸಿದ ಕಮಿಷನ್ ವರದಿಯನ್ನು ಅನುಷ್ಠಾನಕ್ಕೆ ತರದೇ ಇರುವ ವಿಫಲತೆ ಆಗಿದೆ ಇಂದು ಮುಸ್ಲಿಮರು ರಾಜಕೀಯ ಪ್ರಾತಿನಿಧ್ಯ ಕಳೆದು ಕೊಳ್ಳಲು ಕಾರಣ. ಒಂದು ಹತ್ತು ಶೇಕಡಾ ನೀಡಿದರೂ ಇಂದು ಪ್ರಾತಿನಿಧ್ಯ ಸಂಖ್ಯೆ ಅಧಿಕ ಇರಬಹುದಿತ್ತು.
ಕಳೆದ ಹದಿನಾರು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಪಕ್ಷ ಕೇವಲ 0.4 ಶೇಕಡಾ ಮತ ಗಳಿಕೆಗೆ ತಮ್ಮ ಪಕ್ಷ ಸೀಮಿತವಾಗಿದೆ? ಈ ಬಗ್ಗೆ ನಿಮ್ಮ ಅಭಿಪ್ರಾಯ?
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಳೆದ ಹದಿನಾರು ವರ್ಷಗಳಲ್ಲಿ ಹೋರಾಟ ರಾಜಕೀಯಕ್ಕೆ ಅಧಿಕ ಒತ್ತು ಕೊಟ್ಟು ಚುನಾವಣಾ ರಾಜಕೀಯಕ್ಕೆ ಅಧಿಕ ಗಮನ ನೀಡದ ಕಾರಣ ಹೀಗಾಯ್ತು.ಹಾಲಿ ಇಲ್ಲಿರುವ ಅಬ್ಬರತೆಯ ರಾಜಕೀಯ, ಹಣಬಲ , ಗೂಂಡಾ ಯಿಸಂ ರಾಜಕೀಯ, ಆಮಿಷ ರಾಜಕೀಯ, ಇದರಿಂದ ನಮ್ಮ ಸೀಮಿತ ಸಂಪನ್ಮೂಲದ ಕಾರಣದಿಂದಾಗಿ ನಮಗೆ ನಮ್ಮ ಮಿತಿ ಯನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ.ನಮಗೆ ಇನ್ನೂ ನಂಬಿಕೆ ಇದೆ ನಿಸ್ವಾರ್ಥ ಸೇವೆ ಮೂಲಕ ಈ ಸೇವಾ ಹೋರಾಟವನ್ನು ಒಂದಲ್ಲ ಒಂದು ದಿನ ಇಲ್ಲಿರುವ ಜನರು ಅದನ್ನು ಗುರುತಿಸುತ್ತಾರೆ ಮಾತ್ರವಲ್ಲ ಒಂದು ಸ್ಪಷ್ಟ ಬಹುಮತದ ಮೂಲಕ ನಮ್ಮನ್ನು ಗೌರವಿಸುತ್ತಾರೆ ಎಂಬ ನಿರೀಕ್ಷೆ ಇದೆ.ಮುಂದೆಯೂ ಇತರ ರಾಜಕೀಯ ಪಕ್ಷದ ಅಬ್ಬರತೆ,ಬ್ರಿಷ್ಟಾಚರ, ಹಣಬಲತೆ ರಾಜಕೀಯಕ್ಕೆ ಬಲಿ ಬೀಳದೆ, ನಿಸ್ವಾರ್ಥ ಪಾರದರ್ಶಕ ರಾಜಕೀಯದ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇವೆ.
ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯದ ಪ್ರಸಕ್ತ ಸನ್ನಿವೇಶ ಏನು? ಆಡಳಿತ ಮತ್ತು ಪೋಲೀಸು ಇಲಾಖೆ ನ್ಯೂಟ್ರಲ್ ಸ್ಟ್ಯಾಂಡ್ ತೆಗೆಯುತ್ತಿದ್ದಾರೆಯೇ?
ರಿಯಾಝ್ ಫರಂಗಿಪೇಟೆ:
ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶ್ನೆ ತುಂಬಾ ಮಹತ್ವದ ಪ್ರಶ್ನೆ, ನೋಡಿ ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯ ಯಾವ ರೀತಿಯಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ ಒಂದು ಬದಿ ನಿಂತು ಮತ ಚಲಾವಣೆ ಮಾಡಿತ್ತೋ, ಅದೇ ಶೈಲಿಯಲ್ಲಿ ಕಳೆದ 2023 ರ ಕರ್ನಾಟಕದ ಚುನಾವಣೆಯಲ್ಲಿ ಒಂದು ಬದಿ ನಿಂತು ಮುಸ್ಲಿಮ್ ಸಮುದಾಯ ಮತ ಚಲಾಯಿಸಿದೇ. ಆದುದರಿಂದ ಮುಸ್ಲಿಮ್ ಸಮುದಾಯದ ಆಧಾರದಲ್ಲಿಯೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಆಳ್ವಿಕೆಗೆ ಬಂದಿದೆ ಇದರಲ್ಲಿ ಎರಡು ಮಾತಿಲ್ಲ,ಇದಕ್ಕೆ ಬೇಕಾಗಿ ಕಾಂಗ್ರೆಸ್ ನಾಯಕರು,ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಸ್ಥಾನ ಪಡೆದ ನಾಯಕರು ಮುಸ್ಲಿಮ್ ಸಮುದಾಯದ ಜನರ ಕಾಲು ತೊಳೆದು ನೀರು ಕುಡಿದರೂ ಕಡಿಮೆಯೇ. ಅಂತಹ ಸಂಧರ್ಭದಲ್ಲಿ ಇವರು ಇದೆ ಸಮುದಾಯವನ್ನು ನಗಣ್ಯವಾಗಿ ಕಾಣುತ್ತಿದ್ದಾರೆ.ಅದು ಅವರಿಗೆ ಸೂಕ್ತ ಸ್ಥಾನ ಮಾನ ಕೊಡುವ ವಿಷಯ ಇರಬಹುದು,ಅನ್ಯಾಯ ಆದಾಗ ಅದರ ಮೇಲೆ ಕ್ರಮ ಜರುಗಿಸುವ ವಿಶಯದಲ್ಲಿ ಇರಬಹುದು.ಪ್ರತೀ ಘಟ್ಟದಲ್ಲಿ ಕೇವಲ ಸಂಘ ಪರಿವಾರದ,ಅಥವಾ ಫ್ಯಾಸಿಸ್ಟ್ ನ ಭಯ, ಒಂದು ವೇಳೆ ಇವರು ಈ ಒಂದು ಮುಸ್ಲಿಮ್ ಸಮುದಾಯದ ಪರವಾಗಿ ಒಂದು ನಿರ್ಧಾರ ಕೈ ಗೊಂಡಿದ್ದಾರೆ ಎಂದಾದರೆ ಅದು ನಮಗೆ ತಿರುಗು ಬಾಣ ಆಗುವ ಸಾದ್ಯತೆ ಇರಬಹುದು.ಅದು ನಮ್ಮ ರಾಜಕೀಯ ಪಯಣಕ್ಕೆ ಮಾರಕ ಆಗಬಹುದು ಎಂಬಂತಹ ಒಂದು ಭಯದ ಹಿನ್ನೆಲೆಯಲ್ಲಿ ಪದೇ ಪದೇ ಮುಸ್ಲಿಮರಿಗೆ ಅನ್ಯಾಯವೇಸಾಗುತ್ತಾ ಇದ್ದಾರೆ. ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ನಡೆದ ಒಂದೊಂದೂ ವಿಷಯ ಕಂಕನಾಡಿ ಮಸೀದಿಯಲ್ಲಿ ರಸ್ತೆ ನಮಾಝ್ ನಿರ್ವಹಣೆ ಮಾಡಿದ ವಿಷಯ ಇರಬಹುದು, ಅಥವಾ ಬೋಲಿಯಾರು ಘಟನೆ ಇರಬಹುದು, ಇದೆಲ್ಲ ನೋಡುವಾಗ ಏನೂ ಅಂದ್ರೆ, ಮೊನ್ನೆ ಬಿಜೆಪಿ ಮಾಡಿದ ಪ್ರತಿಭಟನೆ ಎಷ್ಟು ಶಾಂತವಾಗಿ ಇಲ್ಲಿನ ಪೋಲೀಸು ಇಲಾಖೆ ವರ್ತನೆ ಮಾಡಿದೆ.
ಅದೇ ಸಿಏಏ.ಎನ್ ಆರ್ ಸಿ ಸಮಯದಲ್ಲಿ ಎಸ್ ಕೆ ಎಸ್ ಎಸ್ ಎಫ್ ಸಂಘಟನೆಯವರು ಕರೆ ಕೊಟ್ಟ ಪ್ರತಿಭಟನೆಯಲ್ಲಿ ಒಂದು ಮುಲಾಜು ಇಲ್ಲದೆ ಇವರು ಗೋಲಿಬಾರ್ ಮಾಡಿ ಎರಡು ಅಮಾಯಕ ಮುಸ್ಲಿಮ್ ಕೊಂದು ಹಾಕಿದರು. ಹಾಗೆ ಇದು ಇವರ ಸ್ಟ್ಯಾಂಡ್ ಅನ್ನು ಸ್ಪಷ್ಟ ಮಾಡುತ್ತಿದೆ. ಮಾತ್ರಾ ಈ ಸ್ಟ್ಯಾಂಡ್ ಕೇವಲ ಪೋಲೀಸು ಇಲಾಖೆಯ ಸ್ಟ್ಯಾಂಡ್ ಎಂದು ಹೇಳಲಿಕ್ಕೆ ಆಗುವುದಿಲ್ಲ ಇದು ಇಲ್ಲಿ ಇರುವ ಆಡಳಿತ ವ್ಯವಸ್ಥೆಯ ಒಂದು ಕ್ಲಾರಿಟಿ ಇರುವ ಸ್ಟ್ಯಾಂಡ್. ಪೊಲೀಸರಿಗೆ ಇದೆ ರೀತಿಯಲ್ಲಿ ಡೈರೆಕ್ಷನ್ ನೀಡುತ್ತಾರೆ. ಇಲ್ಲಿ ಬಿಜೆಪಿ ಸರಕಾರ ಇರುವಾಗ ಬೆಜೆಪಿಯ ಕಾರ್ಯಕರ್ತರಿಗೆ ಅದೇ ರೀತಿಯಲ್ಲಿ ಸಂಘ ಪರಿವಾರದ ಜನರಿಗೆ ಪೂರಕವಾಗಿ ಇದೆ ಬಿಜೆಪಿಯವರು ಅಷ್ಟೂ ವಿಷಯದಲ ಬೆಂಬಲ ಮಾಡಿದ್ದು, ಘೋಷಣೆ ಮಾಡಿದ ಪರಿಹಾರ ಮೊತ್ತವನ್ನು ಕೂಡಾ ಹಿಂಪಡೆದ ಉದಾಹರಣೆ ಇದೆ. ಕೇವಲ ಒತ್ತಡದ ಕಾರಣಕ್ಕಾಗಿ, ರಾಜಕೀಯಕ್ಕೆ ಅಷ್ಟೂ ಶಕ್ತಿ ಇದೆ ಎಂದು ಅದರ ಅರ್ಥ, ಅಂತಹ ಶಕ್ತಿ ಇರುವ ಸ್ಥಾನದಲ್ಲಿ ಇವರು ಕುಳಿತು ಒಂದು ಕನಿಷ್ಟವಾದಂತಹ ಒಂದು ನಮ್ಮ ಪರವಾದ ಅಲ್ಲ, ನಮಗೆ ನ್ಯಾಯ ಒದಗಿಸಿ ಎಂದು ಹೇಳುವ, ನಮ್ಮಲ್ಲಿ ನ್ಯಾಯ ಇದೆ ಎಂದಾದ್ರೆ ಅದನು ಒದಗಿಸಿ ಎಂದು. ನ್ಯಾಯ ಒದಗಿಸಲು ತಯಾರಿಲ್ಲ ಎಂದಾದರೆ ನಮಗೆ ಇವರು ಪರ ಆಗಲಿಕೆ ಸಾಧ್ಯ ಇದೆಯಾ, ಆದುದರಿಂದ ಇದು ನ್ಯೂಟ್ರಲ್ ಸ್ಟ್ಯಾಂಡ್ ಅಲ್ಲ, ಉದ್ದೇಶ ಪೂರಕ ಆಗಿ ಬಹುಸಂಖ್ಯಾತ ಜನರ ಓಲೈಕೆ ಮಾಡುವ ದೃಷ್ಟಿಯಿಂದ ಮುಸಲ್ಮಾನರನ್ನು ಮೂಲೆ ಗುಂಪು ಮಾಡುವುದಾಗಿದೆ. ಮುಸಲ್ಮಾನರ ನ್ನು ನಗನ್ಯವಾಗಿ ನೋಡುವುದು, ಇದನ್ನು ನಮ್ಮ ಸಮುದಾಯ ಅರ್ಥ ಮಾಡಬೇಕಾಗಿದೆ. ಇದನ್ನು ಅರ್ಥ ಮಾಡಿ ನಮ್ಮ ಮತ ವಿಕೇಂದ್ರೀಕರಣ ಇಲ್ಲಿ ಆಗಬೇಕಿದೆ. ನೀವು ನಮ್ಮ ಪರ ನಿಲ್ಲುವುದಿಲ್ಲ ಎಂದಾದರೆ ನಾವು ನಿಮ್ಮ ವಿರುದ್ಧ ನಿಲ್ಲುತ್ತೇವೆ ಎಂಬ ಸಂದೇಶ ಸಮರ್ಪಕವಾಗಿ ನಾವು ಅನುಷ್ಠಾನಕ್ಕೆ ತಂದರೆ ಒಂದು ಎರಡು ಬಾರಿ ಇಂತಹ ಮನಸ್ಥಿತಿ ಇರುವ ನಾಯಕರನ್ನು, ಅವರು ಉದ್ದೇಶ ಪೂರಕವಾಗಿ ನಮ್ಮನ್ನು ಮಾಡುವುದಾದರೆ, ನಾವು ಉದ್ದೇಶ ಪೂರಕವಾಗಿ ಅವರನ್ನು ಸೋಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ, ನಮ್ಮ ಸೋಲಿಗೆ ಕಾರಣ ಏನು ಎಂದು ಪರಾಮರ್ಶೆ ಮಾಡುವಾಗ ಅವರಿಗೆ ನಾವು ನ್ಯಾಯ, ಮುಸ್ಲಿಮರಿಗೆ ನಾವು ನ್ಯಾಯ ಒದಗಿಸಲಿಲ್ಲಾ ಎಂಬ ಜ್ಞಾನೋದಯ ಆಗುತ್ತದೆ. ಆಗ ನಮಗೆ ನಮ್ಮ ನ್ಯಾಯವನ್ನು ಪಡೆಯಲು ಸಾಧ್ಯ ಎಂದು ನಿಮಗೆ ನೆನಪು ಮಾಡುತ್ತಿದ್ದೇನೆ. ಇದಾಗಿರುತ್ತದೆ, ಇವರ ಈ ನಡೆ ಘೋರವಾಗಿರುವ ಅನ್ಯಾಯ. ಇದಕ್ಕೆ ನಮ್ಮ ಮತದಾರರು ಒಂದು ಪ್ರಬುದ್ಧವಾದ ತೀರ್ಮಾನ ಮಾಡ್ಬೇಕಾಗಿದೆ. ಲೋಕ ಸಭೆ ಚುನಾವಣಾ ಯಲ್ಲಿ ಉಪ ಮುಖ್ಯಮಂತ್ರಿ ರೀತಿಯ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವ ಒಕ್ಕಲಿಗ ಸಮುದಾಯ ಲೋಕಸಭಾ ಚುನಾವಣೆಯಲ್ಲಿ ಇವರನ್ನು ತಿರಸ್ಕಾರ ಮಾಡಿದರು. ತಿರಸ್ಕಾರ ಮಾಡಿದ ಕಾರಣಕ್ಕೆ ಇಂದು ಬಿಜೆಪಿ ಈ ಮಟ್ಟಕ್ಕೆ ಸ್ಥಾನ ಬರಲು ಕಾರಣ,ಅವರಿಗೆ ನೀಡಂತಹ ಕೊಡುಗೆ ಎಂತಹದು, ಅವರಿಗೆ ಮಾಡಿ ಕೊಟ್ಟ ವ್ಯವಸ್ಥೆ ಏನು! ಅಷ್ಟೂ ಕೊಟ್ಟು ಇವರಿಗೆ ಸಾಕಾಗಲಿಲ್ಲ ಎಂದಾದರೆ, ಏನು ನೀಡದ ನಮಗೆ ಇವರ ವಿರುದ್ಧ ಬಂಡಾಯದ ದ್ವನಿ ಆಗುವುದು ತಪ್ಪಲ್ಲ ಎಂದು ನನ್ನ ಅಭಿಪ್ರಾಯ.
ರಿಯಾಝ್ ರವರೆ ನಿಮ್ಮ ಪಕ್ಷ,ಮುಸ್ಲಿಮ್ ಲೀಗ್, ನ್ಯಾಶನಲ್ ಕಾನ್ಫರೆನ್ಸ್, ಸಮಾಜವಾದಿ ಪಕ್ಷಗಳು ಭಾರತದ ಮುಸ್ಲಿಮರ ಕನಿಷ್ಠ ಹದಿನೈದು ಶೇಕಡಾ ಮತ ವಿಕೇಂದ್ರೀಕರಿಸಿ ಹಿಡಿತ ರಾಜಕೀಯ ಮಾಡುತ್ತಿದದ್ದೀರಿ ಈ ಬಗ್ಗೆ ನಿಮ್ಮ ಅನಿಸಿಕೆ ಏನು?.
ರಿಯಾಝ್ ಫರಂಗಿಪೇಟೆ:
ಇದು ಒಂದು ಹಿಡಿತ ರಾಜಕೀಯ ಅಲ್ಲ ಒಂದು ಮತ ವಿಕೇಂದ್ರೀಕರಣ ಅದು ಆಗಿರುತ್ತದೆ ಒಂದು ಸರಿಯಾದ ಸ್ಪಷ್ಟತೆ. ನಮಗೆ ಈ ಒಂದು ಸಮುದಾಯ ನಮ್ಮ ಹಿಡಿತದಲ್ಲಿರಬೇಕೆಂದು ನಮಗೆ ಯಾವುದೇ ಪರಿಕಲ್ಪನೆ ಇಲ್ಲ, ಇನ್ನೊಂದು ಪರಿಕಲ್ಪನೆ ಅಂದರೆ ಕಳೆದ ಎಪ್ಪತ್ತರಿಂದ ಎಪ್ಪತ್ತೈದು ವರ್ಷ ಗಳಿಂದ ಇತಿಹಾಸದಲ್ಲಿ ನಮ್ಮ ಸಮುದಾಯ ನಾವು ಮನವಿ ಪತ್ರ ಹಿಡಿದು ಬೇರೆ ಬೇರೆ ರಾಜಕೀಯ ನ್ಯಕರೊಂದಿಗೆ, ಇಲ್ಲಿ ಆಡಳಿತ ಮಾಡಿದ ಪಕ್ಷದೊಂದಿಗೆ ಸೇರಿ ನಾವು ಮನವಿ ಸಮರ್ಪಣೆ ಮಾಡಿದ್ದು ಬಿಟ್ಟರೆ, ನಮ್ಮ ಕಷ್ಟವನ್ನು ಅವರ ಕಾಲಿನಡಿ ಹೋಗಿ ಹೇಳಿದ್ದು ಬಿಟ್ಟರೆ,ನಮಗೆ ಡಾಕ್ಟರ್ ಬೀ.ಆರ್.ಅಂಬೇಡ್ಕರ್ ನೀಡಿದ ಮೌಲ್ಯಯುತವಾದ ಮತವನ್ನು ನಾವು ಅವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಅದರ ಬದಲಿಗೆ ನಾವು ನಮ್ಮ ಮತವನ್ನು ಒಂದು ಬದಿಯಲ್ಲಿ ಕೂಡ್ರೀಕರಿಸಿ ಇಟ್ಟರೆ ಅವರಿಗೆ ಅಗತ್ಯ ಬಿದ್ದರೆ ಅವರು ನಮ್ಮನ್ನು ಸಂಪರ್ಕಿಸುವಂತೆ ರಾಜಕೀಯ ನೀತಿ ತಂತ್ರ ಮಾಡಬೇಕಿದೆ.ಆಗ ನಮಗೆ ರಾಜಕೀಯದಲ್ಲಿ ಸಿಂಹ ಪಾಲು ಸಿಕ್ಕುತ್ತದೆ. ಎಲ್ಲಿ ಎಲ್ಲಾ ನಾವು ಈ ಒಂದು ಕಾರ್ಯತಂತ್ರವನ್ನು ಮಾಡಲು ಸಾಧ್ಯವಿದೆಯೇ ಅಲ್ಲಿ ಎಲ್ಲಾ ನಮಗೆ ಒಂದು ಪರಿಗನಾನಾತ್ಮಕ ರಾಜಕೀಯ ಪ್ರಾತಿನಿಧ್ಯ ಲಭ್ಯವಾಗುತ್ತದೆ ಎಂಬುದು ನಮ್ಮ ಉದ್ದೇಶ,ಅದರಲ್ಲಿ ಮುಸ್ಲಿಮ್ ಲೀಗ್ ಎಂಬ ಪಕ್ಷ ಕೇರಳದಲ್ಲಿ ಯಶಸ್ವಿ ಕಂಡಿದೆ. ಬೇರೆ ಯಾವ ರಾಜ್ಯದಲ್ಲಿ ಯಶಸ್ವಿ ಆಗಿಲ್ಲ.ಮುಸ್ಲಿಮರ ಮತ ನಿಮಗೆ ಉಚಿತವಾಗಿ ಸಿಗುವುದಿಲ್ಲ, ಮುಸ್ಲಿಮರಿಗೆ ಪ್ರಾತಿ ನಿಧ್ಯ ನೀಡಿದರೆ ಮಾತ್ರ ಅಧಿಕಾರ ಸ್ಥಾನಮಾನ ನಿಮಗೆ ಸಿಗುತ್ತದೆ ಎಂಬ ಸಂದೇಶ ಕೇರಳ ರಾಜ್ಯದಲ್ಲಿ ನೀಡಲಾಗಿದೆ. ಅಂತಹ ಒಂದು ಸಂದೇಶ ಮುಸ್ಲಿಮರನ್ನು ಪರಿಗಣಿಸಬೇಕು ಎಂಬ ಸಂದೇಶ ನಾವು ಕರ್ನಾಟಕ ರಾಜ್ಯದಲ್ಲಿ ಮಾಡುವ ಪ್ರಯತ್ನ ಮಾಡಬೇಕು ಅದು ಒಂದು ಸಮುದಾಯವನ್ನು ಹಿಡಿತದಲ್ಲಿ ಇರಿಸುವುದಲ್ಲ, ಸಮುದಾಯಕ್ಕೆ ರಾಜಕೀಯ ಅವಕಾಶವನ್ನು, ಈ ಸಮುದಾಯಕ್ಕೆ ಇರುವಂತಹ ಒಂದು ಓಟಿನ ಗೌರವವನ್ನು ತಿಳಿಸಿಕೊಡುವಂತಃ ಪ್ರಾಮಾಣಿಕ ವಾ ಗಿರುವ ಒಂದು ಪ್ರಯತ್ನ, ಅದನ್ನು ಎಸ್.ಡಿ.ಪೀ. ಐ ಮಾಡುತ್ತಿದೆ.
ದ.ಕ.ಜಿಲ್ಲೆ ಕರ್ನಾಟಕ ದ್ಯದ್ಯಂತ ಮುಂದಿನ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಪಾಲಿಕೆ ಚುನಾವಣೆಯಲ್ಲಿ ನಿಮ್ಮ ಪಕ್ಷ ಮುಸ್ಲಿಮ್ ಸಮುದಾಯದ ಮತ ವಿಕೇಂದ್ರೀಕರಣ ಮಾಡಿ ಅಧಿಕಾರ ಅಥವಾ ಪ್ರಾಬಲ್ಯ ಸಾಧಿಸಲಿದೆಯೇ?.
ರಿಯಾಝ್ ಫರಂಗಿಪೇಟೆ:
ಖಂಡಿತವಾಗಿಯೂ, ಒಂದು ರಾಜಕೀಯ ಪಕ್ಷವಾಗಿ ಪ್ರತೀ ಒಂದು ಚುನಾವಣೆಯಲ್ಲಿ ನಮ್ಮ ಸ್ಫರ್ಧೆ ಬಾರಿ ಮಹತ್ವದಿಂದ ಕೂಡಿದೆ, ಮುಂಬರುವ ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್, ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ, ದ.ಕ.ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾತಂತ್ರ್ಯ ವಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತದೆ ಅತ್ಯಧಿಕವಾಗಿ ಸ್ಥಾನವನ್ನು ಗೆಲ್ಲುವ ತಂತ್ರಗಾರಿಕೆ, ರೂಪುರೇಷೆ ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ತೆಯನ್ನು ನಾವು ಮಾಡುತ್ತಾ ಇದ್ದೇವೆ.ಸಾಂದರ್ಭಿಕವಾಗಿ, ದೇಶದ ಮತ್ತು ಪ್ರದೇಶದ ಹಿತ ಕಾಯುವ ದೃಷ್ಟಿಯಲ್ಲಿ ನಾವು ತಾತ್ಕಾಲಿಕವಾಗಿ ಕೆಲವು ಒಕ್ಕೂಟಕ್ಕೆ ಬೆಂಬಲ ನೀಡಿ ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಯಲ್ಲಿ ತಾತ್ಕಾಲಿಕವಾಗಿ ತೀರ್ಮಾನ ಕೈಗೊಳ್ಳಲಾಗಿದ್ದರೂ ಅದು ಶಾಶ್ವತವಾಗಿ ಅದೇ ರೀತಿಯಲ್ಲಿ ಮುಂದುವರಿಯುತ್ತದೆ ಎಂದು ಅದರರ್ಥ ಅಲ್ಲ. ಕಾಲಕ್ಕೆ ಅನುಗುಣ ಆಗಿ ನಮ್ಮ ಈ ದೇಶದ ವ್ಯವಸ್ಥೆಯ ಸ್ಥಿತಿಗೆ ಅನುಗುಣವಾಗಿ ನಮ್ಮ ನಾಯಕರು ತಳೆಯುವ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ. ಮುಂದೆ ಬರುವಂತಹ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ನಮ್ಮ ಪಕ್ಷದ ಹೆಸರಿನಲ್ಲಿ ಅಭ್ಯರ್ಥಿಗಳನ್ನೂ ಕಣಕ್ಕೆ ಇಳಿಸಿ ಒಂದು ರಾಜಕೀಯ ಸಬಲೀಕರಣಕ್ಕೆ ಆ ಒಂದು ಹೋರಾಟದ ಹಾದಿ ಏನಿದೆಯೋ ಅದರಲ್ಲಿ ನಾವು ಮುಂದುವರಿಯುವುದು ಎಂದು ಈ ಸಂದರ್ಭದಲ್ಲಿ ಹೇಳುವುದಾಗಿದೆ.
ಕಳೆದ ಲೋಕ ಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷ ಇಂಡಿಯಾ ಒಕ್ಕೂಟಕ್ಕೆ ನೀವು ಬೆಂಬಲ ಸೂಚಿಸಿದ ಕಾರಣಕ್ಕೆ ಇಂಡಿಯಾ ಒಕ್ಕೂಟ ಹದಿನೈದು ಶೇಕಡಾ ಸೀಟು ಅಧಿಕ ಪಡೆಯಲು ಕಾರಣ ? ಈ ಬಗ್ಗೆ ನಿಮ್ಮ ಅನಿಸಿಕೆ ಏನು?.
ರಿಯಾಝ್ ಫರಂಗಿಪೇಟೆ:
ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಮಾಡಿದ ಕಾರಣಕ್ಕೆ 15 ಶೇಕಡಾ ಸ್ಥಾನಗಳು ಅಧಿಕ ಲಭಿಸಿದೆ ಎನ್ನುವ ಈ ಅಭಿಪ್ರಾಯಕ್ಕೆ ಯಾವುದೇ ಹುರುಳಿಲ್ಲ.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ ಕರ್ನಾಟಕ ವಿಭಾಗದಲ್ಲಿ ಸೀನಿಯಾರಿಟಿ ಇರುವ ನಾಯಕರ ಸಂಖ್ಯೆ ಕಡಿಮೆ, ನಿಮ್ಮ ಪಕ್ಷ ಪ್ರಾದೇಶಿಕವಾಗಿ ಹಿರಿಯ ಮುಸ್ಲಿಮ್ ನಾಯಕರನ್ನು ಸೆಳೆಯಲು ಪ್ರಯತ್ನ ಪಟ್ಟಿದೆಯೇ?.
ರಿಯಾಝ್ ಫರಂಗಿಪೇಟೆ:
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಲ್ಲಿ ಹಿರಿಯ ವಿಭಾಗದ ಜನರ ಕೊರತೆಯಿದೆ ಎಂಬುದನ್ನು ನಾವು ಖಂಡಿತವಾಗಿಯೂ ಒಪ್ಪುತ್ತೇವೆ. ಆದರೂ, ಒಂದು ದೊಡ್ಡ ಸಂಖ್ಯೆಯ ಹಿರಿಯ ವಿಭಾಗದ ಜನ ವಿಭಾಗ ನಮ್ಮೊಂದಿಗೆ ಪಕ್ಷ ಸ್ಥಾಪನೆಯ ನಂತರ ನಾಯಕತ್ವದಲ್ಲಿ ಗುರುತಿಸಲು ಇಲ್ಲದಿದ್ದರೂ , ನಮ್ಮ ಜೊತೆಗೆ ಇದ್ದಾರೆ, ಅವರ ಬೆಂಬಲ, ಹಾರೈಕೆ, ಹಿತ ಚಿಂತನೆ ನಮಗಿದೆ. ಅದಕ್ಕೆ ಒಂದು ಕಾರಣ ಆಗಿದೆ ಕಳೆದ ಬಾರಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮಗೆ ಶೇಕಡಾ 9 ರಷ್ಟು , ಹದಿನೈದು ಸಾವಿರ ಸುಮಾರಿನಷ್ಟು ಮತವನ್ನು ಗಳಿಸಲು ಸಾಧ್ಯವಾದದು ಈ ಕ್ಷೇತ್ರದ ಹಳೆಯದರಲ್ಲಿ ಹಳೆಯ ತಲೆಮಾರಿನ ಹಿರಿಯ ಜನರ ಬೆಂಬಲದಿಂದ ಆಗಿದೆ.
ಇನ್ನಷ್ಟು ವರದಿಗಳು
ವಖ್ಫ್ ವಿವಾದ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರನ್ನು ಬೇಟಿಯಾದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ನಿಯೋಗ
ಬ್ಯಾರಿ ಜನಾಂಗದವರು ಒಗ್ಗಟ್ಟಾಗಿ ಸವಲತ್ತುಗಳನ್ನು ಅಪೇಕ್ಷಿಸಬೇಕಿದೆ: ಸಮಾಲೋಚನಾ ಸಭೆಯಲ್ಲಿ ಸ್ಪೀಕರ್ ಯು.ಟಿ.ಕಾದರ್.
ಮು.ವಾಯ್ಸ್ ನಲ್ಲಿ ಇಂದು ರಿಯಾಝ್ ಫರಂಗಿಪೇಟೆ,ಆನ್ ಲೈನ್ ಸಂವಾದ.