ಮಂಗಳೂರು: ಡಿಸೆಂಬರ್ 31 ರಂದು ನಗರದಲ್ಲಿ ಅಖಿಲ ಭಾರತ ಬ್ಯಾರಿ ಮಹಾ ಸಭಾ ವತಿಯಿಂದ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವನ್ನು ಆಯೋಜಿಸಲಾಗಿದ್ದು,ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಸಮಾವೇಶ ಕಚೇರಿಯನ್ನು ಇಂದು ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಜ.ಇಬ್ರಾಹಿಮ್ ಕೋಡಿಜಾಲ್ ರವರು ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಕೋಡಿ ಜಾಲ್ ಮಾತನಾಡುತ್ತಾ ಬ್ಯಾರಿ ಸಮುದಾಯದ ಸಮಾವೇಶ ಎಂಬ ಚಿಂತನೆ ಬಹಳ ಉಪಯುಕ್ತ ವಾದದ್ದು,ಬ್ಯಾರಿ ಸಮುದಾಯ ಒಂದು ಪ್ರಬುದ್ಧ ಸಮುದಾಯ ಆಗಿದ್ದು, ಸಮುದಾಯದ ಪ್ರತಿಭೆಗಳು ಸರಕಾರಿ ನೌಕರಿಗಳ ಉನ್ನತ ಹುದ್ದೆಗೆ ಪ್ರಯತ್ನ ಪಡಬೇಕಿದೆ. ಈ ಹಿಂದೆ ಜನ ಪ್ರತಿನಿಧಿ ಗಳನ್ನು ಸಂಪರ್ಕಿಸಿದರೆ ಅವಹಾಲುಗಳಿಗೆ ತಕ್ಷಣ ಪ್ರತಿಕ್ರಿಯೆ ನಡೆಯುತ್ತಿತ್ತು. ಆದರೆ ಪ್ರಸ್ತುತ ಅಂತಹ ವ್ಯವಸ್ಥೆ ಕ್ಷೀಣವಾಗಿದೆ. ಬ್ಯಾರಿ ಸಮುದಾಯದ ಪ್ರತಿಭೆಗಳು ಸಿವಿಲ್ ಸೇವಾ ಮತ್ತು ಪೋಲೀಸು ಉನ್ನತ ಹುದ್ದೆಗಳನ್ನು ಪ್ರಯತ್ನಿಸಬೇಕಿದೆ ಎಂದರು. ಈ ನಿಟ್ಟಿನಲ್ಲಿ ಮತ್ತು ಸರಕಾರದ ವಿವಿಧ ಸವಲತ್ತುಗಳ ಬೇಡಿಕೆ ಇತ್ಯಾದಿ , ಜನಾಂಗದ ಶ್ರೇಯೋಭಿವೃದ್ಧಿ ಉದ್ದೇಶಿತ ಸಮಾವೇಶದ ಪೂರ್ವ ಸಿದ್ಧತಾ ಕಾರ್ಯಾಲಯ ಅತೀ ಅಗತ್ಯ, ಸಮಾವೇಶದ ಯಶಸ್ವಿಗಾಗಿ ಪ್ರಚಾರ ಅತೀ ಅಗತ್ಯ ಅದು ಇಂದಿನಿಂದಲೇ ಆರಂಭವಾಗಲಿ ಸರ್ವರೂ ಸಂಘಟಿತರಾಗಿ ಪ್ರಯತ್ನ ಪಡೋಣ ಎಂದರು.
ಸಭೆಯಲ್ಲಿ ಅತಿಥಿಗಳಾಗಿ ಹೈದರ್ ಪರ್ತಿಪ್ಪಾಡಿ, ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಮೊಹಮ್ಮದ್ ಹನೀಫ್ ಹಾಜಿ,ಮಂಗಳೂರು ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ಮೋನು, ಬಷೀರ್ ಅಭ್ರಾರ್ ಸಾಂದರ್ಭಿಕವಾಗಿ ಮಾತನಾಡಿದರು.
ಸದಸ್ಯರಾದ ಹಮೀದ್ ಕೀನ್ಯಾ ಸ್ವಾಗತ ಮಾಡಿದರು. ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಮಹಾ ಸಭಾದ ಮತ್ತು ಸಮಾವೇಶದ ಧ್ಯೇಯೋಧ್ಯೆಶದ ಬಗ್ಗೆ ವಿವರಿಸಿದರು, ಕಾರ್ಯದರ್ಶಿ ಮೊಹಮ್ಮದ್ ಹನೀಫ್ .ಯು ಪ್ರಾಸ್ತಾವಿಕ ವಿಷಯ ಹೇಳಿದರು.
ಸಭೆಯಲ್ಲಿ ಹುಸೈನ್ ಕಾಟಿಪಳ್ಳ,ಅಬ್ದುಲ್ ರಹೀಮಾನ್ ಕೋಡಿ ಜಾಲ್, ಮೂಡ ಸದಸ್ಯರಾದ ಅಬ್ದುಲ್ ಜಲೀಲ್(ಅದ್ದು) ಕೃಷ್ಣಾಪುರ, ಇಲ್ಲಿಯಾಸ್ ಅಹ್ಮದ್ ತುಂಬೆ, ಅದ್ದು ಹಾಜಿ, ಅಹಮದ್ ಅನ್ಸಾರ್, ಅಹ್ಮದ್ ಬಷೀರ್ ಬೈಕಂಪಾಡಿ, ಉಮರ್ ಹಾಜಿ ಕಣ್ಣೂರು, ಬಷೀರ್ ಡೆಕ್ಕನ್, ಇಕ್ಬಾಲ್ ಮುಲ್ಕಿ, ಅಬ್ದುಲ್ ರಝಾಕ್,ಇ.ಕೆ.ಹುಸೈನ್, ಅಬ್ದುಲ್ ಖಾದರ್ ಇಡ್ಮ, ಇಬ್ರಾಹಿಮ್ ಕೊಣಾಜೆ , ಇಬ್ರಾಹಿಮ್ ಬಾವ ಬಜಾಲ್, ಮೊಹಮ್ಮದ್ ರಫೀಕ್ ದರ್ಬೆ ಪುತ್ತೂರು, ಮೊಹಮದ್ ಹನೀಫ್ ಬಂದರ್, ಅಬ್ದುಲ್ ಖಾದರ್ ಅಡ್ಡೂರು, ಅಬ್ದುಲ್ ರಹೀಂ ಪ್ರಸ್ತುತ, ಮೊಹಮ್ಮದ್ ಸಮೀರ್ ಆರ್.ಕೆ. ಅಡ್ವೊಕೇಟ್, ಫಯಾಜ್, ಮೊಯ್ದೀನ್ ಕಾಚಾರು ಮುಝಾಮ್ಮಿಲ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಮಂಗಳೂರು: ಆನ್ಲೈನ್ ವಂಚಕ ಪೊಲೀಸ್ ಅಧಿಕಾರಿಯಂತೆ ನಟಿಸಿ 50 ಲಕ್ಷ ರೂ ಮಹಿಳೆಗೆ ವಂಚನೆ.
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.
ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.