January 20, 2025

Vokkuta News

kannada news portal

ಜ.8 ನಗರದಲ್ಲಿ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ,ಸುರತ್ಕಲ್ ನಲ್ಲಿ ಪ್ರಚಾರ ಬ್ಯಾನರ್ ಬಿಡುಗಡೆ.

ಸುರತ್ಕಲ್: ಜನವರಿ 8 ರಂದು ಮಂಗಳೂರು ನಗರದ ಪುರಭವದಲ್ಲಿ ಅಖಿಲ ಭಾರತ ಬ್ಯಾರಿ.ಮಹಾಸಭಾದ ವತಿಯಿಂದ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ ಜರುಗಲಿದ್ದು, ಸಮಾವೇಶದ ಪ್ರಚಾರಾರ್ಥ ಇಂದು ಕೃಷ್ಣಾಪುರದಲ್ಲಿ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಬದ್ರಿಯಾ ಅವರು ಸಮಾವೇಶದ ಬ್ಯಾನರ್ ಬಿಡುಗಡೆ ಮಾಡಿದರು.

ಸುರತ್ಕಲ್ ಕೃಷ್ಣಾಪುರದ 6 ನೇ ಬ್ಲಾಕ್ ನ ಹಿರಾ ಸಭಾಂಗಣದಲ್ಲಿ ಇಂದು ನಡೆದ ಕಿರು ಸಮಾರಂಭದಲ್ಲಿ ಸಮಾವೇಶದ ಬ್ಯಾನರ್ ಬಿಡುಗಡೆ ಮಾಡಿ ಮಾತನಾಡಿದ ಮೊಹಮ್ಮದ್ ಅಶ್ರಫ್ ಬದ್ರಿಯಾ ಅವರು ಈ ಸಮಾವೇಶದ ಪ್ರಚಾರದ ಅಗತ್ಯದ ಬಗ್ಗೆ ವಿವರಿಸಿದರು.

ಅಖಿಲ ಭಾರತ ಬ್ಯಾರಿ ಮಹಾ ಸಭಾದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಸಮಾವೇಶದ ಧ್ಯೇಯ ಉದ್ದೇಶ ಮತ್ತು ಪ್ರಮುಖ‌ ಅಥಿತಿಗಳ ಭಾಗವಹಿಸುವಿಕೆಯ ಬಗ್ಗೆ ವಿವರಿಸಿದರು. ಮಹಾ ಸಭಾ ಸಂಘಟನೆಯ ರಾಜ್ಯಾದ್ಯಂತ ಹಾಲಿ ಇರುವ ಬ್ಯಾರಿ ಮೂಲನಿವಾಸಿ ಜನಾಂಗದ ಶ್ರೇಯೋಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದೆ ಎಂದು , ಅವರ ಸಾಮೂಹಿಕ ಅಭಿವೃದ್ಧಿ ಮತ್ತು ಸರಕಾರದ ಸವಲತ್ತುಗಳ ಬೇಡಿಕೆ ಬಗ್ಗೆ ವಿವರಿಸಿದರು. ಸುರತ್ಕಲ್ ಕೊ ಆರ್ಡಿನೇಟರ್ ಷರೀಫ್ ಸುರತ್ಕಲ್ ಸ್ವಾಗತಿಸಿದರು.

ಸಭೆಯಲ್ಲಿ ಮಹಾಸಭಾ ಪದಾಧಿಕಾರಿಗಳಾದ ಮತ್ತು ಮೂಡಾ ಸದಸ್ಯರಾದ ಅಬ್ದುಲ್ ಜಲೀಲ್ ಕೃಷ್ಣಾಪುರ ( ಅದ್ದು), ಮೊಹಮ್ಮದ್ ಶಾಕಿರ್ ಹಾಜಿ, ಕೆ.ಡಿ.ಪಿ ಸದಸ್ಯ ಹಮೀದ್ ಕಿನ್ಯ, ಅಬ್ದುಲ್ ರಹಿಮಾನ್ ಕೋಡಿಜಾಲ್, ಇ.ಕೆ.ಹುಸೈನ್, ಅಬ್ದುಲ್ ಖಾದರ್ ಇಡ್ಮ,ಇಬ್ರಾಹಿಮ್ ಬಾವ ಬಜಾಲ್,ಬಷೀರ್ ಸಿದ್ಧಕಟ್ಟೆ ಮತ್ತು ಸ್ಥಳೀಯ ಪ್ರಮುಖರಾದ ಹಸನಬ್ಬ ಮಂಗಳಪೇಟೆ, ಸಯ್ಯದ್ ಹಾಜಿ ಸೂರಿಂಜೆ, ರಝಾಕ್ ಸೂರಿಂಜೆ, ಮೊಹಮ್ಮದ್ ಬಾವ ಸೂರಿಂಜೆ, ಹಮೀದ್ ಸುರತ್ಕಲ್, ಅಝೀಝ್ ಸುರತ್ಕಲ್, ಅಹ್ಮದ್ ಕಾಟಿಪಳ್ಳ, ಕಲಾಮ್ ಕಾನ ಮತ್ತಿತರರು ಉಪಸ್ಥಿತರಿದ್ದರು.