January 22, 2025

Vokkuta News

kannada news portal

ಬ್ಯಾರಿಗಳು ಸರಕಾರದ ಸವಲತ್ತುಗಳ ಬೇಡಿಕೆಗೆ ಅರ್ಹರು: ಜ.8 ಸಮಾವೇಶ ಭಿತ್ತಿಪತ್ರ ಬಿಡುಗಡೆ: ಬಿ.ಎಚ್.ಅಬ್ದುಲ್ ಖಾದರ್.

ಬಂಟ್ವಾಳ: ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಇನ್ನಿತರ ಜನಾಂಗಕ್ಕೆ ಸರಕಾರದಿಂದ ಲಭ್ಯವಾಗುತ್ತಿರುವ ಸವಲತ್ತುಗಳಂತೆ ಕರ್ನಾಟಕ ರಾಜ್ಯದಾದ್ಯಂತ ಹಂಚಿಕೆ ಆಗಿರುವ ಬ್ಯಾರಿ ಜನಾಂಗಕ್ಕೆ ಸರಕಾರದಿಂದ ಲಭ್ಯವಾಗಲಿರುವ ಸರ್ವ ಸವಲತ್ತುಗಳಾದ ನಿಗಮ, ಭವನ, ಶೈಕ್ಷಣಿಕ ತರಭೇತಿ ಇತ್ಯಾದಿಗಳಿಗೆ ಅರ್ಹರು. ಈ ನಿಟ್ಟಿನಲ್ಲಿ ಬ್ಯಾರಿಗಳು ಒಂದಾಗಿ ಅಪೇಕ್ಷಿಸುವ ಅಗತ್ಯವಿದೆ. ಜ.8 ರಂದು ಅಖಿಲ ಭಾರತ ಬ್ಯಾರಿ ಮಹಾ ಸಭಾ ಆಯೋಜನೆಯ ದ .ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವನ್ನು ಯಶಸ್ವಿ ಗೊಳಿಸಬೇಕಿದೆ ಎಂದು ಸಮಾವೇಶದ ಪ್ರಚಾರ ಭಿತ್ತಿಪತ್ರ ಬಿಡುಗಡೆ ಗೂಳಿಸಿ ಮಾತನಾಡಿದರು.

ಬಂಟ್ವಾಳದ ಕೆಳಗಿನ ಪೇಟೆಯ ಮುಸ್ಲಿಮ್ ವೆಲ್ಫೇರ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಭಿತ್ತಿಪತ್ರ ಬಿಡುಗಡೆ ಕಿರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾ ಸಭಾದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಸಮಾವೇಶದ ಧ್ಯೇಯ ಉದ್ದೇಶವನ್ನು ವಿವರಿಸಿದರು. ಮಂಗಳೂರು ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ ಬ್ಯಾರಿ ಜನಾಂಗ ಸವಲತ್ತು ಪಡೆಯುವುದರಲ್ಲಿ ಹಿಂಜರಿಕೆ ಸಲ್ಲದು, ಹಾಲಿ ಪೀಳಿಗೆ ಒಂದು ವೇಳೆ ಸರಕಾರಿ ಸವಲತ್ತುಗಳನ್ನು ಸಂಪೂರ್ಣ ವಾಗಿ ಪಡೆಯಲು ಸಫಲ ರಾಗದಿದ್ದರೂ ಕೂಡಾ, ಮುಂದಿನ ಪೀಳಿಗೆ ಸಫಲರಾಗ ಬೇಕು ಎಂದರು. ಕರ್ನಾಟಕ ರಾಜ್ಯ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕೋಡಿಜಾಲ್ ಸಾಂದರ್ಭಿಕವಾಗಿ ಸಮಾವೇಶದ ಆಯೋಜನೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಲತೀಫ್ ಲತೀಫ್ ಸ್ವಾಗತ ಮಾಡಿದರು, ಮೌಲ್ವಿ ಉಮರ್ ದಾರಿಮಿ ದುವಾ ನೆರವೇರಿಸಿದರು.

ಜಮಾತ್ ಅಧ್ಯಕ್ಷ ಇಸ್ಮಾಯಿಲ್ ಅರಬಿ, ಉಪಾಧ್ಯಕ್ಷ ಇಸ್ಮಾಯಿಲ್ ಪೀ ಬೀ, ಮುಸ್ಲಿಮ್ ವೆಲ್ಫೇರ್ ಸಂಸ್ಥೆಯ ಇಪ್ಸಾ ಬಿ. ಎಚ್ಚ್ , ಖಾದರ್ ಮಾಸ್ಟರ್, ಮಹಮ್ಮದ್ ಬಿಕಾಂ,ನಾಮ ನಿರ್ದೇಶಿತ ಸದಸ್ಯ ರಿಯಾಝ್, ತೌಹೀದ್ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಮ್ ಸಲೀಮ್,ಅಬ್ದುಲ್ ಜಲೀಲ್ ಕೃಷ್ಣಾಪುರ ( ಅದ್ದು), ಅಶ್ರಫ್ ಬದ್ರಿಯಾ, ಅಬ್ಬಾಸ್ ಆಲಿ, ಇ.ಕೆ.ಹುಸೈನ್, ಮೊಹಮ್ಮದ್ ಹನೀಫ್.ಯು, ಇಬ್ರಾಹಿಮ್ ಬಾವ ಬಜಾಳ್, ಹನೀಫ್ ಬಂದರ್ ಮುಂತಾದವರು ಉಪಸ್ಥಿತಿತರಿದ್ದರು, ಹಾರೂನ್ ರಶೀದ್ ಧನ್ಯವಾದ ಸಲ್ಲಿಕೆ ಮಾಡಿದರು.