January 8, 2025

Vokkuta News

kannada news portal

ಬ್ಯಾರಿ ಸಮಾವೇಶ: ಮೂಡಬಿದ್ರೆಯಲ್ಲಿ ಪ್ರಮುಖರಿಂದ ಧ್ವಜ ಬಿಡುಗಡೆ,

ಮೂಡಬಿದ್ರೆ: ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ದಿನಾಂಕ 08/01/2025 ರ ಬುಧವಾರ ಬೆಳಿಗ್ಗೆ ಸಮಯ 10ರಿಂದ ನಡೆಯಲಿರುವ “ದ ಕ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ” ಪ್ರಚಾರಾರ್ಥ, ಮೂಡಬಿದ್ರಿಯ ಸಮಾಜಮಂದಿರದಲ್ಲಿ ಮೂಡಬಿದ್ರಿ ತಾಲೂಕಿಗೂ ಳಪಟ್ಟ ಬ್ಯಾರಿ ಪ್ರತಿನಿಧಿಗಳ ಸಭೆಯನ್ನು ಇಂದು ಅಪರಾನ್ಹ 3 ಗಂಟೆಗೆ ಸರಿಯಾಗಿ ನಡೆಸಲಾಯಿತು.ಸಭೆಯ ಅಧ್ಯಕ್ಷತೆಯನ್ನು” ABBMS” ಇದರ ಅಧ್ಯಕ್ಷರಾದ
ಜನಾಬ್ ಹಾಜಿ ಅಬ್ದುಲ್ ಅಝೀಜ್ ಬೈಕಂಪಾಡಿ ವಹಿಸಿದ್ದರು. ಬ್ಯಾರಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಆರ್ಥಿಕವಾಗಿ ಸುಧಾರಿಸಲು ರಾಜ್ಯ ಸರಕಾರದಿಂದ “ಬ್ಯಾರಿ ಅಭಿವೃದ್ಧಿ ನಿಗಮ” ಸ್ಥಾಪಿಸುವ ಸಲುವಾಗಿ ವಿಧಾನಸಭಾ ಸಭಾಪತಿಯವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರನ್ನು, ವಿಧಾನ ಸಭಾಧ್ಯಕ್ಷ ಯು .ಟಿ.ಖಾದರ್, ಡಿ .ಕೆ.ಶಿವ ಕುಮಾರ್, ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮದ್ ಖಾನ್ ರವರನ್ನೂ ಭೇಟಿಮಾಡಿ ಮನವಿಯನ್ನು ಸಲ್ಲಿಸಿದ್ದು, ಅದಕ್ಕೆ ಮುಖ್ಯಮಂತ್ರಿಯವರು ಮತ್ತು ಸಚಿವರು ಉತ್ತಮವಾಗಿ ಸ್ಪಂದಿಸಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂಬುದನ್ನು ಸಭೆಗೆ ತಿಳಿಸಿದರು ಬ್ಯಾರಿ ಜನಾಂಗ ಅಭಿವೃದ್ಧಿಗೊಳ್ಳಬೇಕಾದರೆ ಕೇಂದ್ರ ಸರಕಾರದ ಲೋಕ ಸೇವಾ ಆಯೋಗವು ನಡೆಸುತ್ತಿರುವ
ಐ ಏ ಎಸ್ / ಐ ಪಿ ಎಸ್ ಪರೀಕ್ಷೆಗೆ, ಪ್ರತಿಯೊಂದು ಜಮಾತಿನಲ್ಲಿ 2 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ತರಭೇತಿಯನ್ನು ನೀಡುವ ಉನ್ನತ ಶಿಕ್ಷಣ ಉತ್ತೇಜನ ಕಾರ್ಯಯೋಜನೆಯನ್ನು ಸಿದ್ದಪಡಿಸಲಾಗಿದ್ದು ಇದು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೂಡಬಿದ್ರಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಜನಾಬ್ ಅಬ್ದುಸ್ಸಲಾಮ್ ABBMS ಇದರ ಧ್ವಜ ಬಿಡುಗಡೆ ಮಾಡಿ, ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಪೋಸ್ಟರನ್ನು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಂದ ಬಿಡುಗಡೆ ಮಾಡಿಸಲಾಯಿತು. ಮೂಡಬಿದ್ರಿ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ Adv ಇರ್ಷಾದ್, ಮೂಡಬಿದ್ರಿ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮಯ್ಯದ್ದಿ ಗುಂಡುಕಲ್ಲು, SKSSF ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಮರೋಡಿ, ಉದ್ಯಮಿ ರಝಕ್ ಸಚ್ಚೇರಿಪೇಟೆ ಹಾಗು ಅಲ್ – ಬಿರ್ರ್ ಶಿಕ್ಷಣಾ ಸಂಸ್ಥೆಯ ಉಸ್ಮಾನ್ ಸೂರಿಂಜೆ, ABBMS ಕಾರ್ಯದರ್ಶಿ ಅಬ್ದುಲ್ ಜಲೀಲ್, ABBMS ಕೋಶಾಧಿಕಾರಿ ಅಶ್ರಫ್ ABBMS ಸದಸ್ಯರಾದ ಹನೀಫ್ ಬೆಂಗರೆ ಹಾಗು ಇಬ್ರಾಹಿಂ ಬಾವ ಬಜಾಲ್ ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು. AIKMCC ಜಿಲ್ಲಾಧ್ಯಕ್ಷ ಹಾಗು ABBMS ಸದಸ್ಯರಾದ ಸಲೀಮ್ ಹಂಡೇಲ್ ಸ್ವಾಗತ ಹಾಗು ಧನ್ಯವಾದ ಸಮಾರ್ಪಿಸಿದರು. AIKMCC ಜಿಲ್ಲಾಧ್ಯಕ್ಷ ಹಾಗು ABBMS ಸದಸ್ಯರಾದ ಸಲೀಮ್ ಹಂಡೇಲ್ ಸ್ವಾಗತ ಹಾಗು ಧನ್ಯವಾದ ಸಮರ್ಪಿಸಿದರು.