January 20, 2025

Vokkuta News

kannada news portal

ಮಾರಣಾಂತಿಕ ಗುಂಡಿನ ಧಾಳಿ ಸಂತ್ರಸ್ತ ಸಫ್ವಾನ್ ಇರ್ಫಾನಿಯನ್ನು ಭೇಟಿಯಾದ ಕೆ.ಅಶ್ರಫ್ ತಂಡ.

ಮಂಗಳೂರು: ಇತ್ತೀಚೆಗೆ ಖಾಸಗಿ ವಿಷಯಕ್ಕೆ ಸಂಬಂಧಿಸಿ ಉಂಟಾದ ವಾಗ್ವಾದದ ಪರಿಣಾಮವಾಗಿ ವಾಮಂಜೂರಿನ ಎದುರು ಪದವು ಎಂಬಲ್ಲಿನ ಖತೀಬ್ ರವರಿಗೆ ದುಷ್ಕರ್ಮಿ ಓರ್ವರು ನಡೆಸಿದ ಮಾರಣಾಂತಿಕ ಗುಂಡಿನ ಧಾಳಿ ಸಂತ್ರಸ್ತ ಸಫ್ವಾನ್ ಇರ್ಫಾನಿ ರವರನ್ನು ಇಂದು ಕೆ.ಅಶ್ರಫ್ ನೇತ್ರತ್ವದ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ತಂಡ ಖಾಸಗಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಮಾರಣಾಂತಿಕ ಹಲ್ಲೆಯನ್ನು ಎದುರಿಸಿ ತೀವ್ರ ಗಾಯ ಆದ ಇರ್ಫಾನಿಗೆ ಸರಕಾರದ ವತಿಯಿಂದ ಅಗತ್ಯ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಕೆ.ಅಶ್ರಫ್ ಹೇಳಿದರು. ತಂಡದಲ್ಲಿ ಅಬ್ದುಲ್ ಜಲೀಲ್ ಕೃಷ್ಣಾಪುರ (ಅದ್ದು), ಮೊಹಮ್ಮದ್ ಅಶ್ರಫ್ ಬದ್ರಿಯಾ, ಮೊಹಮ್ಮದ್ ಸಾಲಿಹ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.