ಮಂಗಳೂರು : ಎ.18, ಕರ್ನಾಟಕ ಉಲಮಾ ಕೋ – ಆರ್ಡಿನೇಷನ್ ಆಯೋಜನೆಯಲ್ಲಿ, ವಿವಿಧ ಜಿಲ್ಲೆಗಳ ಮುಸ್ಲಿಮ್ ಉಲೇಮಾ, ಖಾಝಿಗಳ ನೇತೃತ್ವದಲ್ಲಿ ಇಂದು ( ದಿನಾಂಕ 18 ಏಪ್ರಿಲ್ 2025 ) ರಂದು ಅಪರಾಹ್ನ ಗಂಟೆ 03.00 ಅಕ್ಕೆ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಷಾ ಮೈದಾನದಲ್ಲಿ, ಕೇಂದ್ರ ಸರಕಾರ ಇತ್ತೀಚೆಗೆ ಜ್ಯಾರಿಗೊಳಿಸಿದ, ಬಹು ಚರ್ಚಿತ ವಕ್ಫ್ ತಿದ್ದುಪಡಿ ಮಸೂದೆ, ಹಾಲಿ ಉಮೀದ್ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಈ ಹಿಂದೆ ಜಾರಿಯಲ್ಲಿದ್ದ ಮುಸ್ಲಿಮ್ ವಕ್ಫ್ ಕಾನೂನುಗಳಿಗೆ ಕೇಂದ್ರ ಸರಕಾರ ಹಲವು ತಿದ್ದುಪಡಿಗಳನ್ನು ತಂದು, ಸದ್ರಿ ತಿದ್ದುಪಡಿ ಗೊಳಿಸಿದ ಕಾನೂನು ಬಡ ಮುಸ್ಲಿಮ್ ರಿಗೆ ಅನುಕೂಲವಾಗಲಿದೆ ಮತ್ತು ವಕ್ಫ್ ಅಕ್ರಮಕ್ಕೆ ತಡೆ ನೀಡಲಿದೆ ಎಂದು ಕೇಂದ್ರ ಸರಕಾರ ಸಮಜಾಯಿಷಿ ನೀಡಿದೆ. ಈ ಮಧ್ಯೆ ತಿದ್ದುಪಡಿ ಗೊಳಿಸಿದ ವಕ್ಫ್ ಕಾಯ್ದೆ ಮುಸ್ಲಿಮ್ ಜನಾಂಗದ ಅಸ್ತಿತವನ್ನೇ ಬುಡಮೇಲು ಗೊಳಿಸಲಿದೆ, ಮುಸ್ಲಿಮ್ ವಕ್ಫ್ ಸೊತ್ತು ಮತ್ತು ಆರಾಧನಾಲಯ ಗಳನ್ನು ಕೇಂದ್ರ ಸರಕಾರ ತನ್ನ ಸುಪರ್ಧಿಗೆ ಪಡೆಯುತ್ತದೆ ಎಂಬ ಆರೋಪವನ್ನು ವಿವಿಧ ಮುಸ್ಲಿಮ್ ವ್ಯಕ್ತಿ, ಸಂಘಟನೆಗಳು, ಪಕ್ಷಗಳು ಹೇಳಿದೆ. ಸಂಸತ್ನಲ್ಲಿ ಈ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿರೋಧದ ಹೊರತಾಗಿಯೂ ಕೂಡ ಕೇಂದ್ರ ಸರಕಾರ ನಡು ರಾತ್ರಿ ಈ ವಕ್ಫ್ ತಿದ್ದುಪಡಿ ಮಸೂದೆ ಯನ್ನು ಅಂಗೀಕರಿಸಿದೆ. ಉಭಯ ಸದನದಲ್ಲಿ ಮಸೂದೆ ಯನ್ನೂ ಅಂಗೀಕರಿಸಿದೆ, ತುರ್ತಾಗಿ ರಾಷ್ಟ್ರ ಪತಿ ಅಂಕಿತವನ್ನು ಪಡೆದಿದೆ.
ಹಲವು ವ್ಯಕ್ತಿಗಳು ಸಂಘಟನೆ ಪಕ್ಷಗಳು ವಕ್ಫ್ ತಿದ್ದುಪಡಿ ಮಸೂದೆಯ ಅನುಷ್ಠಾನದ ವಿರುದ್ಧ ಕಾನೂನಾತ್ಮಕ ಹೋರಾಟದ ಭಾಗವಾಗಿ, ಸುಪ್ರೀಮ್ ಕೋರ್ಟಿನಲ್ಲಿ ಮಸೂದೆ ತಡೆ ಕೋರಿ ರಿಟ್ ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ಮನವರಿಕೆ ಮಾಡಿ ತಾತ್ಕಾಲಿಕ ತಡೆ ಪಡೆದಿದೆ. ದಿನವಹಿ ಆಲಿಕೆ ನಡೆಯುತ್ತಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಹಲವು ರಾಜ್ಯಗಳಲ್ಲಿ ಜೀವಹಾನಿ, ಮತ್ತು ಕಾನೂನು ಸುವ್ಯವಸ್ಥೆ ಭಂಗ ಆಗುವ ಸ್ಥಿತಿ ಇತ್ತೀಚೆಗೆ ನಿರ್ಮಾಣವಾಗಿತ್ತು. ಬೆಂಗಾಲ್ ಸರಕಾರ ಮಸೂದೆ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಹಿಂದೆ ಕರ್ನಾಟಕ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕರಿಸಿದೆ.
ಈ ಮಧ್ಯೆ ಮಂಗಳೂರಿನಲ್ಲಿ ಉಲೇಮಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಇಂದು ಸಂಜೆ ಬೃಹತ್ ಜನ ಜಮಾವನೆ ಆಗಲಿದ್ದು,ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು ಸ್ಥಗಿತ ಗೊಳ್ಳುವ ಸಾಧ್ಯತೆ ಇದೆ.
ಈ ಮಧ್ಯೆ ಖಾಸಗಿ ರಿಟ್ ವ್ಯಾಜ್ಯ ಒಂದರಲ್ಲಿ ನಿನ್ನೆ ಕರ್ನಾಟಕ ಉಚ್ಚ ನ್ಯಾಯಾಲಯ ಕರ್ನಾಟಕ ಸರಕಾರವನ್ನು ಪ್ರಶ್ನಿಸಿ, ಹಾಲಿ ಸುಪ್ರೀಮ್ ಕೋರ್ಟಿನಲ್ಲಿ ತಿದ್ದುಪಡಿ ಮಸೂದೆ ತಡೆಯ ಹೊರತಾಗಿಯೂ ಸರಕಾರ ಇಂತಹ ಪ್ರತಿಭಟನೆಗೆ ಅನುಮತಿ ನೀಡಿದ ಬಗ್ಗೆ ಸಮಜಾಯಿಶಿ ಅಪೇಕ್ಷಿಸಿದೆ.ಉಚ್ಚ ನ್ಯಾಯಾಲಯ ಮುಂದುವರಿದು,
ಜಿಲ್ಲಾ ಪೋಲಿಸು ಇಲಾಖೆ, ಪ್ರತಿಭಟನೆಯ ಪ್ರಯುಕ್ತ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕ್ರಮವಾಗಿ ಘನ ಸರಕು ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸರ್ವ ಬೆಳವಣಿಗೆಗಳ ಮಧ್ಯೆ ಇಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.
ಅ – ಜನಿವಾರಿಕೆ ಘಟನೆ, ಖಂಡಿಸಿ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಮಂಗಳೂರಿನಲ್ಲಿ ಪ್ರತಿಭಟನೆ.
ಇಂದು ನಗರದಲ್ಲಿ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ.