ಮಂಗಳೂರು: ಜಾಗತಿಕ ಸೋಷಿಯಲ್ ಮೀಡಿಯ ಸ್ಮರಣಾರ್ಥ ನಿನ್ನೆ ಮುಸ್ಲಿಮ್ ವಾಯ್ಸ್ ಗ್ರೂಪ್ ಸಾಮಾಜಿಕ ಜಾಲ ತಾಣ ವಾಟ್ಸ್ ಯಾಪ್ ಹ್ಯಾಂಡಲ್ ಆಧಾರಿತ ಸ್ನೇಹ ಸಮ್ಮಿಲನ ವನ್ನು ಮಂಗಳೂರಿನ ಹೋಟೆಲ್ ಇರಾ ಇಂಟರ್ ನ್ಯಾಶನಲ್ ನಲ್ಲಿ ಆನ್ಲೈನ್ ಮತ್ತು ನಾನ್ ಆನ್ಲೈನ್ ಮೂಲಕ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷರ ರಾದ ಶ್ರೀ ಯು. ಟಿ. ಖಾದರ್ ರವರು ಮಾತನಾಡಿ ಕಾರ್ಯಕ್ರಮಕ್ಕೆ ಆಯೋಜಕ ರಿಗೆ ಧನ್ಯವಾದ ಸಲ್ಲಿಸಿ,ಇದು ಸಹೋದರತೆಯ ಸಮಾರಂಭ, ಸಾಮಾಜಿಕ ಜಾಲ ತಾಣದ ಈ ಒಂದು ತಂಡ ವಿವಿಧ ಸಂದೇಶವನ್ನು ನೀಡುತ್ತಿದೆ, ಜನರು ಅದನ್ನು ಸ್ವೀಕರಿಸಬಹುದು ಇಲ್ಲದೆ ಇರಬಹುದು, ವಿವಿಧ ಜನರ ಅನಿಸಿಕೆ ಭಿನ್ನ ಇರಬಹುದು,ಇದು ಸಾಮಾನ್ಯ, ಸಾಮಾಜಿಕ ಜಾಲ ತಾಣದ ಕಾಲದ ಅನಿವಾರ್ಯ ಆಗಿದೆ, ಹಿಂದೆ ಜನರ ಮಾತಿಗೆ ಇತರರು ಒಪ್ಪುತ್ತಿದ್ದರು, ಪ್ರಸಕ್ತ ಸನ್ನಿವೇಶದಲ್ಲಿ ಪ್ರತೀ ಒಬ್ಬರ ಮಾತು ತಕ್ಷಣ ವಿಮರ್ಶೆಗೆ ಒಳಗಾಗುತ್ತದೆ.ನ್ಯೂಸ್ ಮಾತ್ರ ನ್ಯೂಸ್ ಆಗುತ್ತದೆ, ನಾವು ಆಲಿಸಿದ್ದು ಎಲ್ಲಾ ನ್ಯೂಸ್ ಆಗಲಾರದು, ಚರ್ಚೆಗಳು ಸಕಾರಾತ್ಮಕ ಆಗಿ ಮೂಡಿ ಬರಬೇಕಿದೆ, ಆಗ ಮಾತ್ರ ಅದು ಸಮಾಜಕ್ಕೆ , ಸಮುದಾಯಕ್ಕೆ , ಇಡೀ ದೇಶಕ್ಕೆ ಬೃಹತ್ ಮಟ್ಟದ ಪ್ರಯೋಜನ ಆಗುತ್ತದೆ. ಆದುದರಿಂದ ನಮ್ಮಲ್ಲಿ ನಕಾರಾತ್ಮಕ ಚಿಂತನೆಗಳು ಮೂಡಿ ಬರಬಾರದು, ಚರ್ಚೆಯಲ್ಲಿ ರಚನಾತ್ಮಕ ಮನೋಭೂಮಿಕೆ ಇರಬೇಕು, ನಮ್ಮಲ್ಲಿ ನಿರ್ನಾಮ ಕ ಚಿಂತನೆ ಬರಬಾರದು, ನಮ್ಮಲ್ಲಿ ಇರುವ ಸಂಪನ್ಮೂಲಗಳು ಆ ರೀತಿಯ ರಚನಾತ್ಮಕ ಉದ್ದೇಶಗಳಿಗೆ ವಿನಿಯೋಗ ಆಗಬೇಕು, ಸಮಯಸ್ಯೆ ಉಂಟಾದಾಗ ಅದನ್ನು ಸಮರ್ಪಕವಾಗಿ ಬಗೆ ಹರಿಸುವ ಪ್ರಯತ್ನ ಆಗಬೇಕಿದೆ, ಸಮಸ್ಯೆ ಚರ್ಚೆಯ ಭಾಗವಾಗಬಾರದು, ಚರ್ಚೆ ಸಮಸ್ಯೆಗೆ ಪರಿಹಾರದ ಭಾಗವಾಗಬೇಕು, ನಮ್ಮ ಊರಿನಲ್ಲಿ ಸೃಷ್ಟಿಯಾದ ಸಮಸ್ಯೆಗೆ ಉತ್ತರ ಹುಡುಕಿ ಪರಿಹಾರ ಕಂಡು ಹಿಡಿಯುವ ತಂಡ ಆಗಬೇಕಿದೆ.ಅಂತಹ ಮನೋಭಾವ ಬೆಳೆಸಬೇಕಿದೆ. ನಮ್ಮಲ್ಲಿ ಇಂದು ಎಲ್ಲರೊಂದಿಗೆ ಸೌಹಾರ್ಧ , ಸಹೋದರತೆ ಸಮಾಜ ಮೂಡುವ ಸಂದರ್ಭ ಸೃಷ್ಟಿ ಮಾಡುವ ವಾತಾವರಣ ನಿರ್ಮಾಣ ಆಗಬೇಕು, ಸಮಾಜವನ್ನು ಒಟ್ಟು ಗೂಡಿಸುವ ಆದ್ಯತೆ ಮೊದಲು ಆಗಬೇಕು, ನಮಗೆ ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಹೋಗಿ ಉತ್ತಮ ಸಮಾಜ ನಿರ್ಮಾಣ ಬಲಿಷ್ಠ ಭಾರತವನ್ನು ಕಟ್ಟುವುದು ಎಂಬುದು ಸುಲಭದ ಮಾತಲ್ಲ, ಬಹು ಕಷ್ಟದ ಕೆಲಸ ಅದು ಆಗಬೇಕಿದೆ.ಇಂತಹ ಕೆಲಸವನ್ನು ಮುಸ್ಲಿಮ್ ವಾಯ್ಸ್ ಮಾಡುತ್ತದೆ ಎಂದು ನಂಬುತ್ತೇನೆ. ನಮ್ಮಿಂದ ಕಮ್ಮುನಿಟಿ ಹೆಲ್ಪ್ ರೀತಿಯಲ್ಲಿ ಕೆಲಸ ಆಗಬೇಕು, ಓರ್ವ ಶಾಸಕನಾಗಿ, ಓರ್ವ ಜನ ಪ್ರತಿನಿಧಿ ಆಗಿ ನಾನು ಏನು ಮಾಡಬೇಕಿದೆ ಅದನ್ನು ಖಂಡಿತ ನಾನು ಮಾಡಲು ಪ್ರಯತ್ನಿಸುತ್ತೇನೆ.ನನ್ನ ಮುಂದೆ ಬಂದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ನನ್ನ ಹೆಚ್ಚಿನ ಸಂದೇಶಗಳು ನೇರ ಆಗಿರುತ್ತದೆ.ಮುಂದುವರಿದು ಅವರು ತನ್ನ ವಿಧ್ಯಾರ್ಥಿ ಜೀವನ ಮತ್ತು ಹಿಂದಿನ ಸಮಾಜ ಸೇವೆ, ವಿಧ್ಯಾರ್ಥಿ ಬದುಕಿನ ಹೋರಾಟದ ಬಗ್ಗೆ ನೆನಪಿಸಿದರು.

ಕಾರ್ಯಕ್ರಮವನ್ನು ಅಕ್ಬರ್ ಅಲಿ ಕಿರಾಹ ತ್ ಮೂಲಕ ಆರಂಭಿಸಲಾಯಿತು, ಸ್ನೇಹ ಮಿಲನವನ್ನು ನ್ಯಾಯವಾದಿ ಮುಝಾಫರ್ ಅಹಮದ್ ಕಿರು ಸಂದೇಶದ ಮೂಲಕ ಉದ್ಘಾಟಿಸಿದರು, ಜಾಫರ್ ಫೈಝೀ, ಕೆ.ಅಶ್ರಫ್, ಸುಹೈಲ್ ಕಂದಕ್, ಎನ್.ಎಸ್.ಕರೀಮ್, ರಫಿಉದ್ಧೀನ್ ಕುದ್ರೋಳಿ, ವಹಾಬ್ ಕುದ್ರೋಳಿ, ಅಬ್ದುಲ್ ಜಲೀಲ್ ಕೃಷ್ಣಾಪುರ, ರಹೀಮ್ ಉಚ್ಚಿಲ, ಮೊಹಮ್ಮದ್ ಕುಂಞಿ ಮಾಸ್ಟರ್,ಸಿರಾಜ್ ಬಜ್ಪೆ, ಹನೀಫ್ ಖಾನ್ ಕೊಡಾಜೇ ( ಆನ್ ಲೈನ್ ವಾಯ್ಸ್ ಮತ್ತು ಉಪಸ್ಥಿತಿ) , ಅಬ್ದುಲ್ ಮಜೀದ್ ಕೊಡಗು, ಮೊಹಮ್ಮದ್ ಕಾಜೂರು, ರಿಜ್ವಾನ್ ಸಜೀಪ, ಹಕ್ ಕಂದಕ್,ಅಬ್ದುಲ್ ಗಫೂರ್ ಉಡುಪಿ,ಅಬ್ದುಲ್ ಸಲಾಂ ಉಚ್ಚಿಲ್,ಲತೀಫ್ ಕೋಡಿಜಾಲ್, ಹಂಝ ಕೀನ್ಯಾ, ಇಕ್ಬಾಲ್ ಬಾಳಿಲ,ಹಾರೂನ್ ರಶೀದ್ ಅಗ್ನಾಡಿ, ಇಬ್ರಾಹಿಂ ಕೊಣಾಜೆ, ಸಿದ್ದೀಕ್ ಆರ್ಕಾಣ,ಸಂಶುದ್ದೀನ್ ಉಚ್ಚಿಲ, ಜಲೀಲ್ ಉಳ್ಳಾಲ, ಶಾಹುಲ್ ಹಮೀದ್,ಸಾದಿಕ್ ಉಳ್ಳಾಲ್ ಮತ್ತು ಅಬ್ದುಲ್ ರಶೀದ್ ( ಆನ್ ಲೈನ್ ಸಂದೇಶ) ಮತ್ತು ಉಪಸ್ಥಿತಿ, ಫಾರುಕ್ ಉಜಿರೆ, ಹಾರಿಸ್ ತೋಡರ್,ರಫೀಕ್ ಪರ್ಲಿಯ, ಕೆ.ಏಚ್ ಅಬೂಬಕ್ಕರ್, ಉಬೈದ್,ರಿಜ್ವಾನ್ ಸಜೀಪ, ಮುಂತಾದವರು ಸಾಮಾಜಿಕ ಜಾಲ ತಾಣ ಮತ್ತು ಗ್ರೂಪ್ ಬಗ್ಗೆ ನೇರ ಅಂತ್ತು ಅನಿಸಿಕೆ ವ್ಯಕ್ತ ಪಡಿಸಿದರು. ಗ್ರೂಪ್ ಮುಖ್ಯಸ್ಥರು, ಅಡ್ಮಿನ್ ಬಳಗ, ವಾಲಂಟೀರ್ ಬಳಗ,ಸೋಷಿಯಲ್ ಫಾರುಕ್ ಮುಖ್ಯ ಅಡ್ಮಿನ್ ಅಶ್ಫಾಕ್ ತೋಟಾಲ್ ಉಪಸ್ಥಿತರಿದ್ದು ಗ್ರೂಪ್ ಸದಸ್ಯರು ಭಾಗವಹಿಸಿದರು, ಮೊಹಮ್ಮದ್ ಹನೀಫ್ ಯು ಕಾರ್ಯಕ್ರಮ ನಿರೂಪಿಸಿದರು.
ಇನ್ನಷ್ಟು ವರದಿಗಳು
ಇಂದು ಮು.ವಾಯ್ಸ್ ವತಿಯಿಂದ ಮಂಗಳೂರಿನಲ್ಲಿ ಸೋಷಿಯಲ್ ಮೀಡಿಯ ಡೇ ಸ್ನೇಹ ಸಮ್ಮಿಲನ.
ದ.ಕ.ಅಹಿತಕರತೆ, ಕಾಂಗ್ರೆಸ್ ಮುಖಂಡರ ರಾಜಿನಾಮೆ ಪ್ರಕ್ರಿಯೆ,ಅಧ್ಯಯನ ಸಮಿತಿ ರಚನೆ, ಸದಸ್ಯರೊಂದಿಗೆ ಆನ್ ಲೈನ್ ಸಂವಾದ.
ಹಿರಿಯ ವಕೀಲರು ಎಸ್.ಬಾಲನ್ ರವರಿಂದ ದ.ಕ ಜಿಲ್ಲೆಯ ದ್ವೇಷ ಬಾಷಣದ ಬಗ್ಗೆ ಆನ್ ಲೈನ್ ಸಂವಾದ.