ಮಂಗಳೂರು:ಯುನಿವೆಫ್ ಕರ್ನಾಟಕ ವತಿಯಿಂದ ಇಪ್ಪತ್ತನೇ ವರ್ಷದ ‘ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ.ಅ ‘ ರವರ ಸೀರತ್ ಪ್ರಚಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಇಂದು ಸಮಾಜಿಕ ಜಾಲ ತಾಣ ವಾಟ್ಸ್ ಆ್ಯಪ್ ಅಡ್ಮಿನ್ ಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.ಮಂಗಳೂರಿನ ಫಲ್ನೀರ್ ಲುಲು ಸೆಂಟರ್ ಅಲ್ ವಹ್ದಾ ಆಡಿಟೋರಿಯಂ ನಲ್ಲಿ ಇಂದು ಸಂಜೆ 5.30 ಕ್ಕೆ ನಡೆದ ಕಾರ್ಯಕ್ರಮದಲ್ಲಿ ಸಂಸ್ತೆಯ ಮುಖ್ಯಸ್ಥರಾಗಿದ್ದ ಜ. ರಫೀಉದ್ಡೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ಪ್ರವಾದಿ ಮೊಹಮ್ಮದ್ (ಸ) ರವರು, ಇಸ್ಲಾಮ್ ಮತ್ತು ಮುಸ್ಲಿಮರ ಮೇಲಿನ ಅಪಪ್ರಚಾರ ನಿವಾರಣಾ ನಿಟ್ಟಿನಲ್ಲಿ ಸಮಾಜಿಕ ಜಾಲ ತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಯುಟ್ಯೂಬ್ ಯಾದಿ ಮಾಧ್ಯಮದ ಮೂಲಕ, ಸಾಮೂಹಿಕವಾಗಿ ಸಾರ್ವಜನಿಕರಲ್ಲಿ ಮೂಡಿರುವ ಅಪನಂಬಿಕೆ, ಶೋಷಣೆ ಮತ್ತು ನಾವು ಎಂಬ ವಿಚಾರದಲ್ಲಿ ನಿವಾರಣೆ ಹೇಗೆ ಸಾಧ್ಯ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.

ಯುನಿವೆಫ್ ಕರ್ನಾಟಕ ಸಂಸ್ಥೆಯು ಕಳೆದ ಇಪ್ಪತ್ತು ವರ್ಷಗಳಲ್ಲಿ ಆಯೋಜಿಸಿ ಕೊಂಡು ಬಂದ ಕಾರ್ಯಕ್ರಮ ಮತ್ತು ಸಾರ್ವಜನಿಕರು, ಸಹ ಸಮುದಾಯವನ್ನು ಸಂಪರ್ಕಿಸಿದ ವಿಧಾನ ಇತ್ಯಾದಿ ಮತ್ತು ಸಾಧಿಸಿದ ಫಲಿತಾಂಶ ಬಗ್ಗೆ ರಫೀಉದ್ದೀನ್ ಕುದ್ರೋಳಿ ರವರು ಮಾಹಿತಿ ನೀಡಿದರು.
ಖಾಲಿದ್ ಯು.ಕೆ.ಸ್ವಾಗತಿಸಿ ಪೂರಕ ಮಾತು ಆಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ತೆಯ ಸದಸ್ಯರಿಂದ ಕಿರಾಹತ್ ಪಠಿಸಲಾಯಿತು.
ಮುಸ್ಲಿಮ್ ವಾಯ್ಸ್ ಅಡ್ಮಿನ್ ಗಳಾದ ಮೊಹಮ್ಮದ್ ಹನೀಫ್ ಯು, ಹಾರೂನ್ ರಶೀದ್ ಆಗ್ನಾಡಿ ಮಾತನಾಡಿ ಸೋಶಿಯಲ್ ಮೀಡಿಯಾದ ಪಾತ್ರದ ಬಗ್ಗೆ ವಿವರಿಸಿದರು. ಮೊಹಮ್ಮದ್ ಹನೀಫ್ ಯು ರವರು ಈ ಅಭಿಯಾನವನ್ನು ಪೂರ್ಣ ಪ್ರಮಾಣದ ಶೈಕ್ಷಣಿಕ ಕಾರ್ಯಕ್ರಮವಾಗಿ ಪರಿವರ್ತಿಸುವ ಬಗ್ಗೆ ಸಲಹೆ ನೀಡಿದರು.
ಗಲ್ಫ್ ರಿಟಾಯಾರೀಸ್ ಅಸೋಸಿಯನ್ ಅಧ್ಯಕ್ಷರಾದ ಶಾಹುಲ್ ಹಮೀದ್ ಮಾತನಾಡಿ ವಿವಿಧ ಸಲಹೆ ನೀಡಿದರು. ಮೊಹಮ್ಮದ್ ಸಲೀಮ್, ಎಂ. ಅಬ್ದುಲ್ ಬಷೀರ್ ಕೂಳೂರು, ಕೆ. ಮೊಹಮ್ಮದ್ ಇಕ್ಬಾಲ್, ಪಬ್ಲಿಕ್ ವಾಯ್ಸ್ ನ ಶಂಶುದೀನ್, ಮುಸ್ಲಿಮ್ ವಾಯ್ಸ್ ಆಸಿಫ್ ನೂಜಿ, ಮೊಹಮ್ಮದ್ ರಫೀಕ್, ರಫಿ ಅಹ್ಮದ್ ಅಲಿ, ಅಬ್ದುಲ್ ರಶೀದ್, ವಹಾಬ್ ಕುದ್ರೋಳಿ, ಫಾರೂಕ್ ಹುಸೇನ್, ನವಾಝ್, ಅಬ್ದುಲ್ಲಾ ಪಾರೆ, ತನ್ವೀರ್ ಮೊಹಮ್ಮದ್, ಉಬೈದುಲಾ, ಎಂ. ಉದೈಫ್, ಹನೀಫ್, ರಶೀದ್, ಎಂ. ಅಬ್ದುಲ್ ರಶೀದ್, ಎ.ಆರ್.ಬಷೀರ್ ಮುಂತಾದ ವಿವಿಧ ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಸಂಪೂರ್ಣ ಕಾರ್ಯ ಕ್ರಮವನ್ನು ಮುಸ್ಲಿಮ್ ವಾಯ್ಸ್ ವಾಟ್ಸ್ ಆಪ್ ಹ್ಯಾಂಡಲ್ ಮೂಲಕ ಆನ್ ಲೈನ್ ದ್ವನಿ ಸಂದೇಶ ಪ್ರಸರಣ ಪಡಿಸಲಾಯಿತು.
ಇನ್ನಷ್ಟು ವರದಿಗಳು
ಸಾ.ಜಾಲತಾಣವವನ್ನು ಸಕಾರಾತ್ಮಕ ರಾಜ ದ್ವನಿ ಮಾದರಿ ಕಾರ್ಯಕ್ಕೆ ಬಳಸಿ: ಮು ವಾಯ್ಸ್ ಸ್ನೇಹ ಮಿಲನದಲ್ಲಿ ಸ್ಪೀಕರ್ ಯು.ಟಿ.ಕೆ.
ಇಂದು ಮು.ವಾಯ್ಸ್ ವತಿಯಿಂದ ಮಂಗಳೂರಿನಲ್ಲಿ ಸೋಷಿಯಲ್ ಮೀಡಿಯ ಡೇ ಸ್ನೇಹ ಸಮ್ಮಿಲನ.
ದ.ಕ.ಅಹಿತಕರತೆ, ಕಾಂಗ್ರೆಸ್ ಮುಖಂಡರ ರಾಜಿನಾಮೆ ಪ್ರಕ್ರಿಯೆ,ಅಧ್ಯಯನ ಸಮಿತಿ ರಚನೆ, ಸದಸ್ಯರೊಂದಿಗೆ ಆನ್ ಲೈನ್ ಸಂವಾದ.