June 22, 2024

Vokkuta News

kannada news portal

ಕೋಯಿಕ್ಕೊಡ್ ನಲ್ಲಿ ಚಂದ್ರದರ್ಶನ,ದ.ಕ.ಜಿಲ್ಲೆಯಲ್ಲಿ ಎ.13 ರಿಂದ ರಂಝಾನ್ ವ್ರತಾಚರಣೆ.

ಮಂಗಳೂರು ಎ.12. ಉತ್ತರ ಕೇರಳದ ಕೊಯಿಕ್ಕೋ ಡ್ ನಲ್ಲಿ ಇಂದು ಸಂಜೆ ಚಂದ್ರದರ್ಷನವಾದ ನಿಖರ ಬಲ್ಲ ಮಾಹಿತಿ ಮೇರೆಗೆ, ಚಂದ್ರದರ್ಶನ ವಾದ ವ್ಯಾಪ್ತಿ ಮಿತಿಯಲ್ಲಿ ದ.ಕ. ಜಿಲ್ಲೆಯು ಒಳಪಡುವುದರಿಂದ ಇಂದು ಮಂಗಳೂರು ಕೇಂದ್ರೀಯ ಜುಮ್ಮಾ ಮಸೀದಿ ಆಡಳಿತ ಮಂಡಳಿಯು ಏಪ್ರಿಲ್ 13 ರಿಂದ ಆರಂಭವಾಗುವಂತೆ ರಂಝಾನ್ ವೃತಾಚರಣೆಯನ್ನು ಘೋಷಿಸಿದೆ. ಕೇಂದ್ರೀಯ ಹೆಡ್ ಕ್ವಾರ್ಟರ್ಸ್ ಖಾಝಿ ಯವರಾದ ತ್ವಾಕ ಅಹ್ಮದ್ ಮುಸ್ಲಿಯಾರ್ ರವರ ಶಿಫಾರಸು ಮೇರೆಗೆ ಇಂದು ಕೇಂದ್ರ ಜುಮ್ಮಾ ಮಸೀದಿ ಆಡಳಿತವು ಈ ನಿರ್ಧಾರ ಪ್ರಕಟಿಸಿದ್ದು, ಜಿಲ್ಲೆಯಾದ್ಯಂತ ನಾಳೆಯಿಂದ ಆರಂಭ ಗೊಳ್ಳುವಂತೆ ರಂಝಾನ್ ವೃತಾಚಾರಣೆ ನಡೆಯಲಿದೆ.

ಕಳೆದ ವರ್ಷ 2020 ನೇ ಸಾಲಿನ ರಂಝಾನ್ ದೇಶದಾದ್ಯಂತ ಲಾಕ್ ಡೌನ್ ಕಾರಣದಿಂದ ಮಸೀದಿ ಯೇತರ ಆರಾಧನಾ ಕ್ರಿಯೆಯಾಗಿ, ಸರ್ವ ಧಾರ್ಮಿಕ ಚಟುವಟಿಕೆಗಳು ಸರ್ವರ ಸ್ವಂತ ಮನೆಗೇ ಸೀಮಿತವಾಗಿ ದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಿರಂತರ ಹಲವು ವಾರಗಳವರೆಗೆ ಮಸೀದಿ ಚಟುವಟಿಕೆಗಳು ಲಾಕ್ ಡೌನ್ ಕಾರಣದಿಂದಾಗಿ ಸ್ಥಗಿತ ಹೊಂದಿದ್ದವು. ಈ ಬೆಳವಣಿಗೆ ಪ್ರಸಕ್ತ ಪೀಳಿಗೆಗೆ ಹೊಸ ಅನುಭವವಾಗಿದ್ದವು.

ಪ್ರಸಕ್ತ ವರ್ಷವೂ ಕೂಡ ಕೋರೋಣ ವ್ಯಾಪಕತೆ ಯಿಂದಾಗಿ ಸರಕಾರವು ಆಂಶಿಕ ಪ್ರತಿಭಂದಕ ನಿಯಮಗಳನ್ನು ಜಾರಿಗೊಳಿಸಿದ್ದು, ಈ ಕಾರಣಗಳಿಂದ ಪ್ರಸಕ್ತ ಸಾಲಿನ ರಂಝಾನ್ ಕೂಡ ಮಸೀದಿಯೇತರ ಚಟುವಟಿಕೆಗೆ ಸೀಮಿತವಾಗಬಾರದು ಎಂಬ ಬೇಡಿಕೆ ರಾಜ್ಯದ ಸರ್ವ ಮುಸ್ಲಿಮ್ ಸಮುದಾಯದ್ದಾಗಿದೆ.