July 26, 2024

Vokkuta News

kannada news portal

ದಿವ್ಯ ಗ್ರಂಥ ಕುರ್ ಆನ್ ವಿರುದ್ಧದ ವಸೀಮ್ ರಿಝ್ವಿ ನಡೆ : ಮುಸ್ಲಿಮ್ ಒಕ್ಕೂಟ ಖಂಡನೆ : ಮಾಜಿ ಮೇಯರ್ ಕೆ.ಅಶ್ರಫ್.

ಮಂಗಳೂರು,ಮಾರ್ಚ್ 16: ವಿಶ್ವ ಅಂಗೀಕೃತ ದೇವ ಅವತೀರ್ಣ ದಿವ್ಯ ಗ್ರಂಥ ಕುರ್ ಆನ್ ನ ಸೂಕ್ತ ಗಳ ಮೌಲ್ಯಗಳನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ವಸೀಮ್ ರಿಝ್ವಿ ಯವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ದಾವೆ ಸಲ್ಲಿಸಿ ಕುರಾನ್ ನ 26 ಸೂಕ್ತಗಳು ಭಯೋತ್ಪಾದನೆಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದಾಗಿ ಹೇಳಿ ಸೂಕ್ತಗಳನ್ನು ರದ್ದು ಪಡಿಸಬೇಕು ಎಂದು ವ್ಯಾಜ್ಯ ಸ್ಥಾಪಿಸಿರುವುದು ಖಂಡನೀಯ. ದಿವ್ಯ ಕುರಾನ್ ದೇವಗ್ರಂಥ ವಾಗಿದೆ. ಈ ಜಗತ್ತು ಅಂತ್ಯದವರೆಗೆ ಅಸ್ತಿತ್ವದಲ್ಲಿ ರಬೇಕಾದ ಒಂದು ಮಹಾ ಮಾರ್ಗದರ್ಶಕವಾಗಿದೆ ಕುರ್ ಆನ್. ಕುರ್ ಆನ್ ತನ್ನ ಸ್ವರಕ್ಷಣೆ ಹೊಂದಲು ಅರ್ಹವಿರುವ ದೇವ ಗ್ರಂಥವಾಗಿದೆ. ಯಾವುದೇ ಮಾನವ ನಿರ್ಮಿತ ವ್ಯವಸ್ಥೆಯಿಂದ ಕುರ್ ಆನ್ ಅನ್ನು ವ್ಯತ್ಯಯ ಗೊಳಿಸಬಹುದು ಎಂದು ನಂಬಿದವರು ಜೀವಿಸಿದ್ದರೆ ಅದು ಅವರ ಮೂರ್ಖತನದ ಬಿಂಬನೆಯಾಗಿದೆ. ವಿಶ್ವದ ಸರ್ವ ಸ್ಥಳಗಳಲ್ಲಿ ಕುರ್ ಆನ್ ವಿವಾದಾತೀತ ವಾಗಿ ಆಲಿಕೆಗೊಳ್ಳುತ್ತಿದೆ. ವಸೀಮ್ ರಿಝ್ವಿ ಯವರು ನ್ಯಾಯಾಲಯಕ್ಕೆ ಮಾಡಿರುವ ಅಪೇಕ್ಷೆ ಧರ್ಮನಿಂದನೆ ಮತ್ತು ಧರ್ಮಕ್ಕೆ ಎಸಗಿರುವ ಅವಹೇಳನವಾಗಿದೆ. ಈ ಬಗ್ಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ವಸೀಮ್ ರಿಝ್ವಿ ಯ ನಡೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತ ಪಡಿಸುತ್ತದೆ. ರಿಝ್ವಿ ಗೆ ಧರ್ಮ ಗ್ರಂಥದ ಬಗ್ಗೆಗಿನ ಜ್ಞಾನದ ಕೊರತೆಯಿದೆ. ರಿಝ್ವಿ ಯು ತನ್ನನ್ನು ಸ್ವಯಂ ಬಹಿಷ್ಕಾರ ಕ್ಕೊಳ ಪಡಿಸಿದ್ದಾರೆ. ದಿವ್ಯ ಗ್ರಂಥ ಕುರ್ ಆನ್ ಸ್ವಯಂ ನ್ಯಾಯ ಭೋದನೆ ಯಾಗಿ ದೆ. ಜಗತ್ತಿನ ಯಾವುದೇ ನ್ಯಾಯಾಲಯವು ದೇವ ಗ್ರಂಥದ ಮೌಲ್ಯಗಳನ್ನು ಗೌರವಿಸುವ ಚರಿತ್ರೆಯೆ ಇತಿಹಾಸದಲ್ಲಿ ನಡೆದು ಹೋಗಿದೆ. ಆದುದರಿಂದ ರಿಝ್ವಿಗೆ ಸೂಕ್ತ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ.