ಇಂದು ಲಕ್ನೋ ದಲ್ಲಿ ಸಲ್ಲಿಸಿದ ಮನವಿ ಪತ್ರದಲ್ಲಿ, “… ಇಸ್ಲಾಮಿನ ಪ್ರಚಾರಕರ ಇತ್ತೀಚಿನ ಬಂಧನಗಳು, ಮೌಲಾನಾ ಕಲೀಂ ಸಿದ್ದಿಕಿ ಮತ್ತು ಡಾ ಉಮರ್ ಗೌತಮ್ ಅವರನ್ನು ಒಳಗೊಂಡಂತೆ ಮಾತ್ರವಲ್ಲದೆ ಅಸ್ಸಾಂನ ದುರದೃಷ್ಟಕರ ಮುಸ್ಲಿಮರನ್ನು ಕೊಲ್ಲುವುದು ಮತ್ತು ಅವರ ಬಲವಂತದ ಉಚ್ಚಾಟನೆ ಯಂತಹ ಕೃತ್ಯಗಳನ್ನು ಮುಸ್ಲಿಮರು ಒಪ್ಪಿಕೊಳ್ಳಲಾಗದು ಎಂದು ನಾವು ಈ ಮೂಲಕ ಹೇಳುತ್ತೇವೆ. ಇಂತಹ ಕೃತ್ಯಗಳು ಭಾರತದ ಮತ್ತು ಇತರ ಸಮುದಾಯವನ್ನು ಕೆರಳಿಸುತ್ತದೆ ಎಂದು ಎ ಎಂ ಯು ಸಂಘಟನೆ ಒತ್ತಿ ಹೇಳಿತು.
“ಅಸ್ಸಾಂನ ಮುಸ್ಲಿಮರ ಮೇಲೆ ದಾಳಿ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು” ಮತ್ತು ಉತ್ತರ ಪ್ರದೇಶದಲ್ಲಿ ಮುಸ್ಲಿಂ ಬೋಧಕರನ್ನು ಬಂಧಿಸಿರುವುದನ್ನು ಆಕ್ಷೇಪಿಸಿ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶುಕ್ರವಾರ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಜನರನ್ನು ತೆರವು ಗೊಳಿಸುವ ಸಮಯದಲ್ಲಿ ಪೊಲೀಸರು ಮತ್ತು “ಅತಿಕ್ರಮಣಕಾರರ” ನಡುವಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್, ಎಎಂಯುನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಶೋಧನಾ ವಿದ್ವಾಂಸರು, ರಾಜ್ಯದಲ್ಲಿ ಮುಸ್ಲಿಂ ಧರ್ಮಗುರುಗಳು ಮತ್ತು ಬೋಧಕರನ್ನು ಗುರಿಯಾಗಿಸಿದ ಕೃತ್ಯದ ವಿರುದ್ಧ ವಿದ್ಯಾರ್ಥಿಗಳು ಒಟ್ಟು ಗೂಡಿದ್ದಾರೆ ಎಂದು ಹೇಳಿದರು.
“ನಾವು ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದ್ದೇವೆ, ಅದನ್ನು ಭಾರತದ ರಾಷ್ಟ್ರಪತಿಯವರಿಗೆ ಕೂಡಾ ತಿಳಿಸಲಾಯಿತು” ಎಂದು ಪ್ರತಿಭಟನಾಕಾರರಲ್ಲಿದ್ದ ಖಾನ್ ಹೇಳಿದರು
ಮನವಿ ಪತ್ರದಲ್ಲಿ,. ಇಸ್ಲಾಮಿನ ಪ್ರಚಾರಕರ ಇತ್ತೀಚಿನ ಬಂಧನಗಳು, ಮೌಲಾನಾ ಕಲೀಂ ಸಿದ್ದಿಕಿ ಮತ್ತು ಡಾ ಉಮರ್ ಗೌತಮ್ ಅವರನ್ನು ಒಳಗೊಂಡಂತೆ ಮಾತ್ರವಲ್ಲದೆ ಅಸ್ಸಾಂನ ದುರದೃಷ್ಟಕರ ಮುಸ್ಲಿಮರನ್ನು ಕೊಲ್ಲುವುದು ಮತ್ತು ಅವರ ಬಲವಂತದ ಉಚ್ಚಾಟನೆಯನ್ನು ಮುಸ್ಲಿಮ್ ಸಮುದಾಯ ಒಪ್ಪಿಕೊಳ್ಳಲಾಗದು ಎಂದು ನಾವು ಈ ಮೂಲಕ ಹೇಳುತ್ತೇವೆ.ಇದು ಭಾರತದ ಮತ್ತು ಇತರ ಸಮುದಾಯವನ್ನು ಕೆರಳಿಸುತ್ತದೆ. ಸಿದ್ದಿಕಿ ಮತ್ತು ಗೌತಮ್ ಜೊತೆಗೆ ಇತರರನ್ನು ಅಕ್ರಮ ಮತಾಂತರ ಆರೋಪದಲ್ಲಿ ಬಂಧಿಸಲಾಯಿತು.
ಮನವಿ ಪತ್ರದಲ್ಲಿ, ವಿದ್ಯಾರ್ಥಿಗಳು ಅಸ್ಸಾಂನಲ್ಲಿ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಎಎಂಯುನ ಸಾರ್ವಜನಿಕ ಸಂಪರ್ಕದ ಉಸ್ತುವಾರಿ ಶಾಫಿ ಕಿದ್ವಾಯಿ, ಎಎಂಯುನಲ್ಲಿರುವ ಜಾಮಾ ಮಸೀದಿಯಿಂದ ಬಾಬ್-ಇ-ಸೈಯದ್ ಗೇಟ್ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿತ್ತು. “ಪ್ರತಿಭಟನೆ ಯನ್ನು ಕ್ಯಾಂಪಸ್‌ನಲ್ಲಿ ನಡೆಸಲಾಯಿತು ಮತ್ತು ವಿದ್ಯಾರ್ಥಿಗಳು ನಗರ ಮ್ಯಾಜಿಸ್ಟ್ರೇಟ್‌ಗೆ ಮನವಿ ಪತ್ರವನ್ನು ಸಲ್ಲಿಸಿದರು” ಎಂದು ಕಿದ್ವಾಯಿ ಹೇಳಿದರು.
ಇನ್ನಷ್ಟು ವರದಿಗಳು
ಮಹಾರಾಷ್ಟ್ರ, ಡಿ.6 ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸ್ ರಜೆ: ಇಂದು ಶಾಲೆಗಳು, ಬ್ಯಾಂಕ್ಗಳಿಗೆ ರಜೆ? .
ಶಾಂತಿ ಮತ್ತು ಸೌಹಾರ್ದತೆಗಾಗಿ’: ಧಾರ್ಮಿಕ ರಚನೆಗಳ ಸಮೀಕ್ಷೆ ತಡೆ, ಪೂಜಾ ಸ್ಥಳ ಕಾಯ್ದೆ ಜಾರಿಗೆ ಸುಪ್ರೀಂ ಕೋರ್ಟ್ನಲ್ಲಿ ಮನವಿ
” ಟಿಪ್ಪು ಸುಲ್ತಾನ್ ವಾಸ್ತವವಾಗಿ ಇತಿಹಾಸದಲ್ಲಿ ಬಹಳ ಸಂಕೀರ್ಣ ವ್ಯಕ್ತಿ”: ಕೃತಿ ಬಿಡುಗಡೆ ಸಮಾರಂಭದಲ್ಲಿ ಎಸ್ ಜೈಶಂಕರ್.