ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ಅನುಷ್ಠಾನ ವಿರೋಧಿಸಿ ಮತ್ತು ವಿವಾದಿತ ಕೃಷಿ ಕಾಯಿದೆಯನ್ನು ಹಿಂಪಡೆ ಯಬೇಕೆಂದು ಆಗ್ರಹಿಸಿ ದೇಶದ ರೈತ ಸಂಘಟನೆಗಳು ಕಳೆದ ಒಂದು ವರ್ಷದಿಂದೀಚೆಗೆ ದೆಹಲಿಯಲ್ಲಿ ಬೀಡು ಬಿಟ್ಟು ಪ್ರತಿಭಟನೆಯಲ್ಲಿ ತೊಡಗಿದ್ದು, ಕೇಂದ್ರ ಸರಕಾರ ತನ್ನ ನಿಲುವಿನಲ್ಲೀ ಯಾವುದೇ ವ್ಯತ್ಯಯ ಹೊಂದದ ಪರಿಣಾಮ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ಸೆಪ್ಟೆಂಬರ್ 27 ರಂದು ದೇಶದಾದ್ಯಂತ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಬಂದ್ ಪ್ರತಿಭಟನೆಗೆ ದೇಶದಾದ್ಯಂತ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಆಪ್, ವೈ ಎಸ್ ಆರ್ ಕೆ, ತೆಲುಗು ದೇಶಂ, ಡಿ ಎಂ.ಕೆ, ಬೀ.ಎಸ್. ಪೀ, ಆರ್. ಜೇ.ಡಿ, ಎಡ ಪಕ್ಷಗಳು, ಕೇರಳ,ತಮಿಳು ನಾಡು ಮತ್ತು ಆಂಧ್ರ ಪ್ರದೇಶ ರಾಜ್ಯ ಸರಕಾರಗಳು ಮತ್ತು ವಿವಿಧ ಬ್ಯಾಂಕ್ ಸಂಘಟನೆಗಳು ವ್ಯಾಪಕ ಬೆಂಬಲ ಸೂಚಿಸಿವೆ.
ರೈತರ ಪ್ರಮುಖ ಬೇಡಿಕೆಗಳನ್ನು ಬೆಂಬಲಿಸಿ ಸರ್ವ ಪಕ್ಷ ನಿಯೋಗವು ಬಂದ್ ಗೆ ಬೆಂಬಲ ನೀಡುವುದರೊಂದಿಗೆ ಭಾರತೀಯ ಕಾಂಗ್ರೆಸ್ ಪಕ್ಷ ತನ್ನ ರಾಜ್ಯವಾರು ಪ್ರಾದೇಶಿಕ ವಿಭಾಗ ಮತ್ತು ಘಟಕಗಳಿಗೆ ಕರೆ ನೀಡಿ ಭಾರತ್ ಬಂದ್ ಯಶಸ್ವಿ ಗೊಳಿಸಲು ಹೇಳಿದೆ. ಈ ಬಗ್ಗೆ ಪಕ್ಷದ ಮುಖ್ಯಸ್ಥ ಕೆ.ಸಿ. ವೇಣುಗೋಪಾಲ್ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಮುಂದುವರಿದು,ದೇಶದಾದ್ಯಂತ ವಿವಿಧ ರೈತ ಸಂಘಟನೆಗಳು,ಕಾರ್ಮಿಕ ವರ್ಗ ಬೆಂಬಲ ನೀಡಿದ್ದು,ಪಂಜಾಬ್ ಮುಖ್ಯ ಮಂತ್ರಿ ಚರಣ್ ಜಿತ್ ಯಾದವ್ ಮತ್ತು ಬಿಹಾರ್ ರಾಜ್ಯ ವಿರೋಧ ಪಕ್ಷ ನಾಯಕ ತೇಜಸ್ವಿ ಯಾದವ್ ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಬಂದ್ ಗೆ ಬೆಂಬಲ ಸೂಚಿಸಿದೆ, ಎಡ ಪಕ್ಷಗಳು ಮಂಗಳೂರಿನಲ್ಲಿ ಮುಂಜಾನೆಯಿಂದ ಸಂಜೆವರೆಗೆ ಹರತಾಳ ಆಚರಿಸಲು ಕರೇ ನೀಡಿದ್ದು,ಎಸ್.ಡಿ.ಪೀ.ಐ ಸಾರ್ವಜನಿಕ ಪ್ರತಿಭಟನೆ, ಭೀದಿ ನಾಟಕ ಮತ್ತು ಪಿಕೆಟಿಂಗ್ ಗೆ ಕರೆ ನೀಡುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಲಿದೆ. ಹಾಗಿದ್ಯೂ ರಾಜ್ಯ ಸರಕಾರ ಕರ್ನಾಟಕದಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದು,ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಘೋಷಿಸಿದೆ.
ಇನ್ನಷ್ಟು ವರದಿಗಳು
ಮಣಿಪುರ ಹಿಂಸೆ, ಬಿರೇನ್ ಸಿಂಗ್ ಸರ್ಕಾರಕ್ಕೆ 24 ಗಂಟೆಗಳ ಗಡುವು : ಮೈತಿಯಿ ಗುಂಪು; ಮೋದಿ ಭೇಟಿಗೆ ರಾಹುಲ್ ಗಾಂಧಿ ಆಗ್ರಹ.
ಅವರನ್ನು ನ್ಯಾಯಾಲಯಕ್ಕೆ ಎಳೆದು ತರುತ್ತೇವೆ’: ‘ಸಿಖ್’ ಹೇಳಿಕೆ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ಎಚ್ಚರಿಕೆ.
ಆರೋಗ್ಯ ವಿಮೆಯ ಮೇಲಿನ ತೆರಿಗೆ ದರವನ್ನು ಇಳಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಕರ್ನಾಟಕವು ಇತರ ರಾಜ್ಯಗಳನ್ನು ಕೋರಿದೆ: ರಾವ್.