November 21, 2024

Vokkuta News

kannada news portal

ಉಳ್ಳಾಲ: ದ್ವಿತೀಯ ಬ್ಯಾರಿ ಸಾಹಿತ್ಯ ಸಮ್ಮೇಳನ ವಿದ್ಯುಕ್ತ ಶುಭಾರಂಭ,ಗಣ್ಯರ ಪಾಲ್ಗೊಳ್ಳುವಿಕೆ.

ಮಂಗಳೂರು: ಉಳ್ಳಾಲ ತಾಲೂಕು ವ್ಯಾಪ್ತಿಯ ಬ್ಯಾರಿ ಸಾಹಿತ್ಯ ಸಮ್ಮೇಳನ ಇಂದು ದೇರಳಕಟ್ಟೆ ಕಣಚೂರ್ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ಸಿನಲ್ಲಿ ವಿದ್ಯುಕ್ತವಾಗಿ ಶುಭಾರಂಭವಾಗಿ ಉದ್ಘಾಟನೆ ಗೊಂಡು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಸಮ್ಮೇಳನಾಧ್ಯಕ್ಷರಾಗಿ ಅಡ್ವಕೇಟ್ ಬಿ. ಎ. ಮುಹಮ್ಮದ್ ಹನೀಫ್ ಭಾಗವಹಿಸಿರುತ್ತಾರೆ . ಮೇಲ್ತೆನೆ ಸಾಹಿತ್ಯ ಸಂಸ್ಥೆಯ ಆಶ್ರಯದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮಾರಂಭದಲ್ಲಿ, ಸ್ವಾಗತ ಸಮಿತಿ ಅಧ್ಯಕ್ಷರಾದ ನಝೀರ್ ಉಳ್ಳಾಲ್, ಕಣಚುರು ಸಂಸ್ಥೆಯ ಮುಖ್ಯಸ್ಥರಾದ ಹಾಜಿ.ಯು.ಮೋನು ಹಾಜಿ ಕನಚೂರು, ಉಳ್ಳಾಲ ದರ್ಗಾ ಪಧಾಧಿಕಾರಿಗಳಾದ ಫಾರೂಕ್ ಉಳ್ಳಾಲ್, ಉದ್ಯಮಿ ಅಬೂಬಕ್ಕರ್ ನಾಟಿಕಲ್, ನಾಟಿಕಲ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ನಾಟೆ ಕಲ್, ಪದ್ಮಶ್ರೀ ಪುರಸ್ಕೃತ ಮತ್ತು ಹರೇಕಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೇಕಳ ಹಾಜಬ್ಬ,ಸ್ವಾಗತ ಸಮಿತಿ ಉಪಾಧ್ಯಕ್ಷ ರಾದ ಅಬ್ಬಾಸ್ ಉಚ್ಚಿಲ್, ಆಲಿ ಕುಂಞ ಪಾರೆ,ಯೂಸುಫ್ ವಕ್ತಾರ್, ಹಂಝ ಮಲಾರ್,ಬಶೀರ್ ಬೈಕಂಪಾಡಿ ಮತ್ತಿತರರು ಭಾಗವಹಿಸಿ ಕಾರ್ಯಕ್ರಮ ಶುಭಾರಂಭ ಗೊಂಡಿದೆ. ಮೇಲ್ತೆಣೆ ಬುಲೆಟಿನ್ ಅನ್ನು ಸ್ವಾಗತ ಸಮಿತಿ ಉಪಾಧ್ಯಕ್ಷ ರಾದ ಅಬ್ಬಾಸ್ ಉಚ್ಚಿಲ್ ಬಿಡುಗಡೆ ಗೊಳಿಸಿದರು.

ಸಮ್ಮೇಳನದಲ್ಲಿ ವಿದ್ಯುಕ್ತ ಅತಿಥಿಗಳನ್ನು ಸಾಂಸ್ಕೃತಿಕ ತಂಡ ಸಮ್ಮೇಳನಾ ವೇದಿಕೆಗೆ ಕರೆತರುವ ದೃಶ್ಯ