June 22, 2024

Vokkuta News

kannada news portal

ಅ.21, ಯುನಿವೆಫ್ ನಿಂದ ಅರಿಯಿರಿ ಮನುಕುಲದ ಪ್ರವಾದಿಯನ್ನು:ಉದ್ಘಾಟನಾ ಸಮಾರಂಭ: ರಫೀಯುದ್ದೀನ್ ಕುದ್ರೋಳಿ.

ಮಂಗಳೂರು: ಹಲವಾರು ವರ್ಷದಿಂದ ಪ್ರವಾದಿ ಸಂದೇಶ ಮತ್ತು ಜೀವನಕ್ರಮ ಅಭಿಯಾನವನ್ನು ನಡೆಸುತ್ತಿರುವ ಯೂನಿವರ್ಸಲ್ ವೆಲ್ಫೇರ್ ಕರ್ನಾಟಕ ಸಂಘಟನೆ ಪ್ರತೀ ವರ್ಷದಂತೆ ಈ ವರ್ಷವೂ ತನ್ನ ಅಭಿಯಾನವನ್ನು ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಸಂದೇಶ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು ಅಭಿಯಾನದ ಉದ್ಘಾಟನೆ ಸಮಾರಂಭವನ್ನು ತಾರೀಕು 21 ಅಕ್ಟೋಬರ್ 2022 ರಂದು ಶುಕ್ರವಾರ ಸಂಜೆ 6,45 ಕ್ಕೆ ನಡೆಸಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ವನ್ನು ಮಂಗಳೂರು ಕಂಕನಾಡಿ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಸಲಿದೆ.

ಪ್ರಮುಖ ದಿಕ್ಸೂಚಿ ಭಾಷಣ ಕಾರರಾಗಿ ಸಂಸ್ಥೆಯ ಮುಖ್ಯಸ್ಥರಾದ ರಫೀಯುದ್ದೀನ್ ಕುದ್ರೋಳಿ ರವರು ಬ್ಯಾರಿ ಭಾಷೆಯಲ್ಲಿ ಪ್ರವಾದಿ ಮೊಹಮ್ಮದ್ ಸ.ಆ ರವರ ಬಗ್ಗೆ ಪರಿಚಯ ಬಾಷಣ ಮಾಡಲಿದ್ದಾರೆ,ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.