November 21, 2024

Vokkuta News

kannada news portal

ಕಾವಳ ಮೂಡೂರು ಎಸ್.ಡಿ.ಪಿ.ಐ ಯಿಂದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಕಾವಳಕಟ್ಟೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವಳ ಮೂಡೂರು ಗ್ರಾಮ ಸಮಿತಿ (ಕಾವಳಕಟ್ಟೆ) ವತಿಯಿಂದ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇಂದು ಎನ್ ಸಿ ರೋಡ್ ಎಮ್ ಎಮ್ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷರಾದ ಹೈದರ್ ಕಾವಳಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ಕಾರ್ಯಕ್ರಮವನ್ನು ಉದ್ಘಾಟನೆಗೈದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಕಾರ್ಯಕ್ರಮವನ್ನುದ್ದೇಶಿಸಿ ಹಿತನುಡಿದರು.

21-22 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 566 ಅಂಕಗಳಿಸಿದ ಆಯಿಶತ್ ಶಮ್ನಾ, 549 ಅಂಕಗಳಿಸಿದ ಮಹಮ್ಮದ್ ಶಹದ್, 539 ಅಂಕಗಳಿಸಿದ ಮಹಮ್ಮದ್ ರಾಝೀಂ, 516 ಅಂಕಗಳಿಸಿದ ಸಯೀಮಾ, ಕಾವಳ ಮೂಡೂರು ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಜನಸೇವೆ ಸಲ್ಲಿಸುತ್ತಿರುವ ಶ್ರೀಮತಿ ಜಯಂತಿ ದಾಸ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಶ್ಕೂರಾ ಹನಾ, ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಮುಬೀನತುಲ್ ಅಸ್ಮಿಯಾ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಿಟ್ಟಿಸಿದ ಮಹಮ್ಮದ್ ಮಾಝ್ ಎನ್ ಸಿ ರೋಡ್ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಅದೇ ರೀತಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಇಲ್ಯಾಸ್ ತುಂಬೆ ಮತ್ತು ಆಲ್ಫೋನ್ಸ್ ಫ್ರಾಂಕೋ ಇವರಿಗೆ ಎಸ್ ಡಿ ಪಿ ಐ ಕಾವಳ ಮೂಡೂರು ಗ್ರಾಮ ಸಮಿತಿ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಸದಸ್ಯರುಗಳಾದ ಅಬೂಬಕ್ಕರ್ ಮದ್ದ, ಯೂಸುಫ್ ಆಲಡ್ಕ, ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಬಿಸ್ಮಿಲ್ಲಾ ಜುಮ್ಮಾ ಮಸ್ಜಿದ್ ದೂಮಳಿಕೆ ಇದರ ಅಧ್ಯಕ್ಷರಾದ ಅಬೂ ಸ್ವಾಲಿಹ್ ಎನ್ ಸಿ ರೋಡ್, ಕಾವಳ ಮೂಡೂರು ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಸದಸ್ಯೆಯೂ ಆದ ಸಫಾ ಸಲ್ಮಾ ಕಾವಳಕಟ್ಟೆ, ಎಸ್ ಡಿ ಪಿ ಐ ಸರಪಾಡಿ ಬ್ಲಾಕ್ ಅಧ್ಯಕ್ಷ ಮುಬಾರಕ್ ಜಿ.ಬಿ, ಬ್ಲಾಕ್ ಕಾರ್ಯದರ್ಶಿ ಅತಾವುಲ್ಲಾ ಪಾಂಡವರಕಲ್ಲು, ಕಾವಳ ಮೂಡೂರು ಗ್ರಾಮ ಪಂಚಾಯತ್ ಸದಸ್ಯೆ ಶೈನಾಝ್ ಎನ್ ಸಿ ರೋಡ್, ಎಸ್ ಎಸ್ ಎಫ್ ಕಾವಳಕಟ್ಟೆ ಇದರ ಅಧ್ಯಕ್ಷರಾದ ಶೌಖತ್ ಖಂಡಿಗ , ರಿಕ್ಷಾ ಚಾಲಕರ ಸಂಘ – ಕಾವಳಕಟ್ಟೆ ಇದರ ಅಧ್ಯಕ್ಷರಾದ ರಝ್ಝಾಕ್ ದೂಮಳಿಕೆ, ಕೆ ಎಮ್ ಸಿ ಆಸ್ಪತ್ರೆ ವೈದ್ಯಾಧಿಕಾರಿಯಾದ ಡಾಕ್ಟರ್ ಸಾಯಿರಾಂ ಹಾಗೂ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಇರ್ಫಾನ್ ಅರ್ಕಳಿಕೆ ಸ್ವಾಗತಿಸಿ, ಇರ್ಫಾನ್ ಅರ್ಕಳಿಕೆ ಸ್ವಾಗತಿಸಿ, ಇಮ್ರಾನ್ ಪಾಂಡವರಕಲ್ಲು ನಿರೂಪಿಸಿ, ಮುಸ್ತಫಾ ಕಾವಳಕಟ್ಟೆ ಧನ್ಯವಾದಗೈದರು.

ಇಮ್ರಾನ್ ಪಾಂಡವರಕಲ್ಲು ನಿರೂಪಿಸಿ, ಮುಸ್ತಫಾ ಕಾವಳಕಟ್ಟೆ ಧನ್ಯವಾದಗೈದರು.