July 27, 2024

Vokkuta News

kannada news portal

ಅ.18, ಟೋಲ್ ಮುತ್ತಿಗೆ,ಸಮಾನ ಮನಸ್ಕ ಸಂಘಟನೆಗಳಿಂದ ಪೊಲೀಸ್ ನೋಟಿಸ್ ವಿರುದ್ಧ ಪ್ರತಿಭಟನೆ.

ಮಂಗಳೂರು :ಸುರತ್ಕಲ್ ಟೋಲ್ ಗೇಟ್ ಹೋರಾಟ ಗಾರ ಮೇಲೆ,ನೋಟಿಸ್ ಜಾರಿ ಗೊಳಿಸಿದರ ವಿರುದ್ಧ ಸಮಾನಮನಸ್ಕ ಸಂಘಟನೆಗಳಿಂದ, ಮಂಗಳೂರು ಮಿನಿ ವಿಧಾನಸೌಧ ಮುಂಭಾಗ ಶಾಂತಿಯುತ ಇಂದು ಪ್ರತಿಭಟನೆ ನಡೆಸಲಾಯಿತು , ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಬಿ ಕೆ ಇಮ್ತಿಯಾಝ್, ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಬಿಜೆಪಿಯು ಪೊಲೀಸರ ಮೂಲಕ ಹೋರಾಟ ಗಾರರಿಗೆ ನೋಟಿಸ್ ಜಾರಿಗೊಳಿಸಿ ತಂತ್ರ ನಡೆಸುತ್ತಿದೆ, ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ಗೇಟ್ ಮುತ್ತಿಗೆ ಹೋರಾಟ ನಡೆಯಲಿದೆ ಎಂದು ಸಮಾನಮನಸ್ಕ ಸಂಘಟನೆಗಳು ಹೋರಾಟ, ಸಮಿತಿ ಇಂದಿನ,ಪ್ರತಿಭಟನಾ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಿಕೆ ಇಮ್ತಿಯಾಝ್, ಸೇರಿ ಸಮಾನಮನಸ್ಕ ಸಂಘಟನೆಗಳ ಮುಖಂಡರುಗಳು ಮಾತನಾಡಿದರು ,ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ಗೇಟ್ ಮುತ್ತಿಗೆ ಹೋರಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು, ಪ್ರತಿಭಟನಾ ಸಭೆಯಲ್ಲಿ ಸಿಪಿಐಎಂನ ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಿಪಿಐ-ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಹೋರಾಟಗಾರ ಎಂ ಜಿ ಹೆಗಡೆ, ಡಿಎಸ್ಎಸ್ ನ ಹಿರಿಯ ಮುಖಂಡರಾದ ಎಂ ದೇವದಾಸ್, ರಘು ಎಕ್ಕಾರು, ಮಾಜಿ ಉಪ ಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಅಲ್ತಾಪ್ ತುಂಬೆ, ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ, ಅಝೀಝ್ ಕುದ್ರೋಳಿ, ಸಿಪಿಐ-ಎಂ ನ ಕುಕ್ಯಾನ್, ಸೀತಾರಾಮ್ ಬೇರಿಂಜೆ, ಕರುಣಾಕರ್, ಸುರೇಶ್, ಸಾಮರಸ್ಯ ಮಂಗಳೂರು ಸಮರ್ಥನ್ ಭಟ್, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಮುಖಂಡರಾದ ಲಾರೆನ್ಸ್, ಯೋಗೀಶ್ ಜಪ್ಪಿನಮೊಗರು ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ರಫೀಕ್ ಹರೇಕಲ, ಸಾಧಿಕ್ ಕಣ್ಣೂರು, ಮನೋಜ್ ಊರ್ವ ಸ್ಟೋರ್, ಜಗದೀಶ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ, ಜೆ. ಎಂ ಎಸ್ ಜಿಲ್ಲಾ ಮುಖಂಡರಾದ ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಸಿ. ಐ. ಟಿ.ಯು ಮುಖಂಡರಾದ ಮುಸ್ತಫಾ ಕಲ್ಲಕಟ್ಟೆ, ವಿಲ್ಲ ವಿಲ್ಸನ್, ಮೀನುಗಾರರ ಸಂಘದ ಮುಖಂಡರಾದ ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ವಿದ್ಯಾರ್ಥಿ ಜನತಾದಳದ ಮುಖಂಡರಾದ ಬಿಲಾಲ್, ಎಮ್ ಎಚ್ ಶಾಲಿ ಬಜ್ಪೆ ಜನತಾದಳ ಮುಖಂಡರು, ಮುಂತಾದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಡಿವೈಎಫ್ಐ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ, ನಿರೂಪಿಸಿದರು. (ವರದಿ ಸೋಶಿಯಲ್ ಫಾರೂಕ್)