November 21, 2024

Vokkuta News

kannada news portal

ಶಾಸಕ ಹರೀಶ್ ಪೂಂಜಾ ಧಾಳಿ ಹೇಳಿಕೆ,ಜಿಲ್ಲೆಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ:ಖಂಡನೀಯ: ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ.

ಶಾಸಕ ಹರೀಶ್ ಪೂಂಜಾ ರವರ ಮೇಲೆ ತಲವಾರು ಧಾಳಿ ಎಂಬ ಘಟನೆಯನ್ನು,ಶಾಸಕ ಹರೀಶ್ ಪೂಂಜಾ ರವರು ತಾನು ಹಿಂದುತ್ವ ಪರ ಕಾರ್ಯನಿರ್ವಹಿಸುತ್ತೇನೆ ಎಂಬ ಕಾರಣಕ್ಕೆ ಮಾಡಲಾಗಿದೆ ಎಂಬುದನ್ನು, ಪೊಲೀಸು ಅಧೀಕ್ಷಕರು ಇದೊಂದು ಸಾಂದರ್ಭಿಕ ರಸ್ತೆ ತಗಾದೆ ಅಷ್ಟೇ ಎಂದು ಹೇಳಿಕೆ ನೀಡಿದ್ದಾರೆ.

ಆದರೆ, ಹರೀಶ್ ಪೂಂಜಾ ರವರು ಈ ಘಟನೆಯನ್ನು ಮತೀಯ ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸಿರುವುದು ಖಂಡನೀಯ. ಓರ್ವ ಜವಾಬ್ದಾರಿ ಜನ ಪ್ರತಿನಿಧಿಯಾಗಿ ಹರೇಶ್ ಪೂಂಜಾ ರವರು ಈ ಘಟನೆಯನ್ನು ಅತ್ಯಂತ ನಾಜೂಕಾಗಿ ಪರಿಹರಿಸಲು ಪ್ರಯತ್ನಿಸದೇ, ಮತೀಯ ಘಲಬೆ ಸೃಷ್ಟಿಸಿ ರಾಜಕೀಯ ಮಾಡಲು ಹೊರಟಂತಿದೆ , ಪೊಲೀಸರು ನಿಷ್ಪಕ್ಷಪಾತ ನಿಲುವು ಹೊಂದಿದರೆ ಜಿಲ್ಲೆಯಲ್ಲಿ ಸುಳ್ಳು ದೂರು ನಿಯಂತ್ರಣ ಗೊಳಿಸಿ ಸಂಭಾವ್ಯ ಮತೀಯ ಗಲಭೆಗಳನ್ನು ಶ್ಲಾಘನಾರ್ಹವಾಗಿ ನಿಯಂತ್ರಿಸಬಹುದು. ವಾಮಂಜೂರು ಬ್ಯಾನರ್ ಹಾನಿ,ಘಟನೆಗಳಿಂದ ಅಂತಿಮವಾಗಿ ತನಿಖೆಯ ಪಲಿತಾಂಶ ಏನು ನಡೆದಿದೆ ಎಂಬ ಬಗ್ಗೆ ಈಗಾಗಲೇ ಜನರು ಅರಿವು ಹೊಂದಲು ಪ್ರಯತ್ನ ಪಡುತ್ತಿದ್ದಾರೆ.

ಕೆ.ಅಶ್ರಫ್.
ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.