January 11, 2025

Vokkuta News

kannada news portal

ವಕ್ಫ್ ಕಚೇರಿಯಿಂದ ವಿವಾಹ ಪ್ರಮಾಣ ಪತ್ರ ಲಭ್ಯತೆ ಪುನರಾರಂಭ.

ಮಂಗಳೂರು: ಈ ಹಿಂದೆ ಮುಸ್ಲಿಮ್ ವಿವಾಹಿತ ಜೋಡಿಗೆ ವಕ್ಫ್ ಕಚೇರಿಯಿಂದ ಅಪೇಕ್ಷಿಸಲಾಗುತಿದ್ದ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಣೆಯು ದ.ಕ.ಜಿಲ್ಲಾ ವಕ್ಫ್ ಕಚೇರಿಯು ಪುನರಾರಂಭ ಗೊಳಿಸಿದೆ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್ ರವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಹಿಂದೆ ಉತ್ತರಕರ್ನಾಟಕದ ಮೌಲ್ವಿ ಒಬ್ಬರು ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಣೆಯ ವ್ಯಾಪ್ತಿ ವಕ್ಫ್ ಇಲಾಖೆಗೆ ಇಲ್ಲ ಎಂಬುದಾಗಿ ಕರ್ನಾಟಕ ಉಚ್ಚನ್ಯಾಯಾಲಯ ವನ್ನು ಸಂಪರ್ಕಿಸಿ ತಡೆಯಾಜ್ಞೆ ಪಡೆದಿದ್ದರು.

ಕರಾವಳಿ ಜಿಲ್ಲೆಗಳಲ್ಲಿನ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡುವ ಅಸಂಖ್ಯಾತ ವಿವಾಹಿತ ಕುಟುಂಬಕ್ಕೆ ವಕ್ಫ್ ಪ್ರಮಾಣ ಪತ್ರದ ಅಲಭ್ಯತೆಯಿಂದಾಗಿ ಸಮಸ್ಯೆ ಸೃಷ್ಟಿಯಾಗಿತ್ತು.

ಪ್ರಸ್ತುತ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಇರುವ ಅಡೆತಡೆ ನಿವಾರಣೆ ಆಗಿದ್ದು, ವಕ್ಫ್ ಕಚೇರಿ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವುದನ್ನು ಪುನರ್ ಆರಂಭ ಗೊಳಿಸಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷರು,ಸಲಹಾ ಸಮಿತಿ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.