December 22, 2024

Vokkuta News

kannada news portal

ಕಂಬಳ ಕ್ರೀಡೆ ಜೊತೆಗೆ ಸಾಮರಸ್ಯ ಸೃಷ್ಟಿ: ಬಂಟ್ವಾಳ ಕಂಬಳದಲ್ಲಿ ಬಿ.ರಮಾನಾಥ ರೈ.

ಬಂಟ್ವಾಳ: ಸರ್ವ ಧರ್ಮೀಯರ ಪಾಲುದಾರಿಕೆಯ ಭೂಮಿ ಯಾಗಿರುವ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಕಳೆದ ಬಾರಿಯಿಂದ ಮೂಡೂರು-ಪಡೂರು ಜೋಡುಕರೆ ‘ಬಂಟ್ವಾಳ ಕಂಬಳ’ ಸರ್ವ ಧರ್ಮೀಯರ ಕೂಡುವಿಕೆಯ ಕಾರಣದಿಂದಾಗಿ ಉತ್ಸವ ರೂಪದಲ್ಲಿ ಅತ್ಯಂತ ಯಶಸ್ವಿಯಾಗಿ ಸಾಗಿ ಬರುತ್ತಿದ್ದು, ಕಂಬಳದ ಮೂಲಕ ಇಂತಹ ಜಾನಪದ ಕ್ರೀಡೆಯ ಉಳಿವಿನ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು ಬರುವ ಮಹತ್ವದ ಉದ್ದೇಶ ಇಟ್ಟುಕೊಂಡು ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ, ಮೂಡೂರು-ಪಡೂರು ಜೋಡಕರೆ ಬಂಟ್ವಾಳ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.

ರಮಾನಾಥ ರೈ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯ ಕಂಬಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 12ನೇ ವರ್ಷದ ಮೂಡೂರು-ಪಡೂರು ‘ಬಂಟ್ವಾಳ ಕಂಬಳ’ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲವನ್ನೂ ವಿಭಾಗಿಸಿ ನೋಡುವ ಇಂದಿನ ದಿನಗಳಲ್ಲಿ ಕಂಬಳ, ಗಣೇಶೋತ್ಸವ ಗಳನ್ನು ಆಯೋಜಿಸಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸರ್ವರ ಒಗ್ಗೂಡಿಕೆ ಮರಳಿ ಬಂದು ಹಿಂದಿನ ಸಂಭ್ರಮ-ಸಡಗರ ಉಂಟು ಮಾಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗಿದೆ ಎಂದರು.
ಇದೇ ವೇಳೆ ಕೃಷಿ ಕ್ಷೇತ್ರದ ಸಾಧಕ ಲಿಯೋ ಫೆರ್ನಾಂಡಿಸ್ ಅಲ್ಲಿಪಾದೆ, ಪ್ರಗತಿಪರ ಕೃಷಿಕ, ಧಾರ್ಮಿಕ, ಸಾಮಾಜಿಕ ಮುಂದಾಳು ಕಾಂತಣ್ಣ ಶೆಟ್ಟಿ ಕುಕ್ಕಿಪಾಡಿ, ನಿವೃತ್ತ ಸರಕಾರಿ ನೌಕರ, ಕಂಬಳ ಓಟಗಾರ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್, ಹಿರಿಯ ರಾಜಕಾರಣಿ, ರಾಜಕೀಯ, ಧಾರ್ಮಿಕ, ಸಾಮಾಜಿಕ ಧುರೀಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಗಿಬೆಟ್ಟು ವೆಂಕಪ್ಪ ಕಾಜವ ಮಿತ್ತಕೋಡಿ, ಹಿರಿಯ ಕ್ರೀಡಾಪಟು, ಕಂಬಳ ತೀರ್ಪುಗಾರ ಕೆ ಸುಧೀಶ್ ಕುಮಾರ್ ಆರಿಗ ಬೊಳ್ಳಾರು ಗುತ್ತು ಬಂಗಾಡಿ ಕೋಣಗಳ ಯಜಮಾನ ಕಕ್ಯಪದವು ಮುದಲಾಡಿ ಅಣ್ಣಿ ಪೂಜಾರಿ ಹಾಗೂ ಕಂಬಳ ಓಟಗಾರ ಮತ್ತು ಕೋಣಗಳ ಮಾಲಿಕ ಮುಹಮ್ಮದ್ ಕುಂಞಿ ಪಂಜರಕೋಡಿ ಅವರನ್ನು ಸನ್ಮಾನಿಸಲಾಯಿತು.
ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೋ, ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ ಜಿನರಾಜ ಅರಿಗ, ಶಾಸಕರಾದ ಯು ಟಿ ಖಾದರ್, ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ ಆರ್ ಲೋಬೋ, ವಸಂತ ಬಂಗೇರ, ಮಾಜಿ ವಿ.ಪ.ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಳ, ಮಂಗಳೂರು ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ ಆರ್,
ಜಿ.ಪಂ.ಮಾಜಿ ಸದಸ್ಯರಾದ ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಧರಣೇಂದ್ರ ಕುಮಾರ್, ಅಕ್ರಮ-ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ದ ಕ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾದ್ಯಕ್ಷ ಅರ್ಶದ್ ಸರವು, ತಾ ಪಂ ಮಾಜಿ ಸದಸ್ಯೆ ಫ್ಲೋಸಿ ಡಿಸೋಜ, ಬುಡಾ ಮಾಜಿ ಅಧ್ಯಕ್ಷ ದಾಶಿವ ಬಂಗೇರ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಸಜಿಪ ಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪ್ರಮುಖರಾದ ಧನಭಾಗ್ಯ ಆರ್ ರೈ, ಚಂದ್ರಹಾಸ ಶೆಟ್ಟಿ ಉಪ್ಪಿನಂಗಡಿ, ಕಾವು ಹೇಮನಾಥ ಶೆಟ್ಟಿ, ವೆಂಕಪ್ಪ ಗೌಡ ಸುಳ್ಯ, ಪ್ರಶಾಂತ ಕಾಜವ, ಸುರಯ್ಯಾ ಅಂಜುಂ, ಚಂದ್ರಹಾಸ ಶೆಟ್ಟಿ ರಂಗೋಲಿ, ಚಂದ್ರಶೇಖರ ಭಂಡಾರಿ, ಕೆ ಕೆ ಶಾಹುಲ್ ಹಮೀದ್, ಅವಿಲ್ ಮೆನೇಜಸ್, ಫಿಲಿಪ್ ಫ್ರಾಂಕ್, ದೇವಿಪ್ರಸಾದ್ ಪೂಂಜಾ, ಸ್ಟೀವನ್ ಡಿಸೋಜ, ಪ್ರಶಾಂತ್ ಕುಲಾಲ್, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಮಲ್ಲಿಕಾ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಮಹಾಬಲ ಆಳ್ವ, ಬಿ ಮೋಹನ್, ಮೆಲ್ವಿನ್ ಡಯಾಸ್, ಜಗದೀಶ್ ಕೊಯಿಲ, ನಾರಾಯಣ ನಾಯ್ಕ, ಸಿದ್ದೀಕ್ ಸರವು, ಸಿರಾಜ್ ಮದಕ, ರಮೇಶ್ ಪಣೋಲಿಬೈಲು, ಸಿ .ಎಂ ಮುಸ್ತಾಫಾ,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ ,ಅಶ್ರಫ್ ಬದ್ರಿಯಾ ಮೊದಲಾದವರು ಭಾಗವಹಿಸಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.