December 22, 2024

Vokkuta News

kannada news portal

ಮತೀಯ ದ್ವೇಷ ಪ್ರಕರಣ ಪರಿಗಣನೆಯಲ್ಲಿ ತಾರತಮ್ಯ, ಎಂ.ಜೆ.ಎಫ್ ನಿಯೋಗದಿಂದ ಪೊಲೀಸ್ ಅಧಿಕಾರಿಗಳ ಭೇಟಿ.

ಮಂಗಳೂರು : ಅ 16.ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷ ಭಾಷಣ ಹಾಗೂ ಇನ್ನಿತರ ಕಾನೂನುಬಾಹಿರ ಕೃತ್ಯಗಳ ಬಗ್ಗೆ ವಿವರಣೆಯನ್ನು ನೀಡಿ ದ.ಕ. ಜಿಲ್ಲೆಯಲ್ಲಿ ಕೋಮುಸಾಮರಸ್ಯ ಕದಡಲು ಅವಕಾಶ ನೀಡಬಾರದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಾಗೂ
ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುವವರು ಯಾರೇ ಆಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ನಿಯೋಗವು ಬಂದರ್ ಪೊಲೀಸ್ ಅಧಿಕಾರಿ ಯನ್ನು ಭೇಟಿಯಾಗಿ ಆಗ್ರಹಿಸಿತು.

ಅದೇ ರೀತಿ ಇತ್ತೀಚೆಗೆ ಹಮಾಸ್ ಪರ ವಿಡಿಯೋವನ್ನು ಹರಿಯಬಿಟ್ಟ ಕಾರಣದಿಂದ ಬಂಧನಕ್ಕೊಳಗಾದ ಝಾಕೀರ್ ಬಂದರ್ ಇವರ ಬಂಧನದ ಬಗ್ಗೆ ಮಾಹಿತಿಯನ್ನು ಪಡೆಯಿತು.

ನಿಯೋಗದಲ್ಲಿ ಎಂ ಜೆ ಎಫ್ ಇದರ ಸ್ಥಾಪಕಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಉಪಾಧ್ಯಕ್ಷರಾದ ಇಕ್ಬಾಲ್ ಸಾಮ್ನಿಗ , ಅಲಿ ಹಸನ್ ಸದಸ್ಯರಾದ ಆಸೀಫ್ ಬೆಂಗ್ರೆ, ಎ. ಆರ್ ಇಮ್ರಾನ್, ಇದ್ದಿನ್ ಕುಂಞ ಉಪಸ್ಥಿತರಿದ್ದರು.