ವೆಬ್: ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಿನ್ನೆ ರಾತ್ರಿ ಬಾ. ಕಾ ಘಂಟೆ 09.00 ರಿಂದ ನಡೆದ ಮಾದರಿ ಜಮಾತ್ ನಿರ್ವಹಣೆ ಎಂಬ ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿ, ಪ್ರೇರಣಾ ತಜ್ಞ, ಮೋತಿವೇಶನಲ್ ಎಕ್ಸ್ಪರ್ಟ್ ಆದ ರಫೀಕ್ ಮಾಸ್ಟರ್ ಅವರು ಮಾತನಾಡಿ ಒಂದು ಜಮಾತ್ ಸಂಸ್ಥೆ ವ್ಯವಸ್ಥೆ ಹೇಗೇ ಕಾರ್ಯ ನಿರ್ವಹಿಸಬೇಕು ಎಂದು ಆನ್ಲೈನ್ ಸಂವಾದ ನಡೆಸಿದರು
ಆರಫೀಕ್ ಮಾಸ್ಟರ್: ಮಾದರಿ ಜಮಾಹತ್ ಅಂದರೆ ನಾವು ಅವಲೋಕನ ಮಾಡಬೇಕಾಗಿರುವುದು 1400 ವರ್ಷ ಹಿಂದಿನ ಪ್ರಶ್ನೆ, ಅಲ್ಲಾಹನ ಪ್ರವಾದಿ ಮದೀನಕ್ಕೆ ಪ್ರವಾಸ ಹೋದಾಗ ಅವರೊಂದಿಗೆ ಇದ್ದ ಜನರು ಮುಹಜೀರ್ ಮತ್ತು ಮದೀನದಲ್ಲಿ ಇದ್ದ ಅನ್ಸಾರ್ ಗಳು ಎಂಬ ಎರಡು ಜನಾಂಗ,ಅತ್ಯಂತ ಗೌರವಯುತ,ಮಾನವೀಯತೆ ಇರುವ ಸಮುದ್ದಾಯ, ಪ್ರವಾದಿಯನ್ನು ಸ್ವೀಕರಿಸಿ ಅವರಿಗೆ ಬೆಂಬಲ ನೀಡುತ್ತಾರೆ, ಪ್ರವಾದಿ ಅವರು ಕ್ರಿಶ 622 ರಲ್ಲಿ ಮಸ್ಜಿದ್ ನಬವಿ ನಿರ್ಮಿಸುತ್ತಾರೆ. ಆ ಮಸೀದಿ ಆರಾಧನಾ ಕೇಂದ್ರ, ಇಲ್ಮ್ ಕೇಂದ್ರ ಆಗಿತ್ತು.
ನಾವು ನಮ್ಮ ಆರಾಧನೆಯಲ್ಲಿ ನಾವು ಉಭಯ ಲೋಕಗಳಿಗೆ ಬೇಕಾದ ಜ್ಞಾನವನ್ನು ಅಭ್ಯಸಿಸಲು ಅಗತ್ಯ ಇರುವ ಇಲ್ಮ್ ಅನ್ನು ಯಾಚಿಸುತ್ತೀವೆ. ಮುಂದುವರಿದು ಅದು ಒಂದು ಸರಕಾರದ ಕೇಂದ್ರ ಆಗಿತ್ತು.ಮದೀನದಲ್ಲಿ ಒಂದು ಸಂವಿಧಾನ ಇತ್ತು, ಜೀವನ ಕ್ರಮ, ಭಿನ್ನ ಸಮುದಾಯದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬಿತ್ಯಾದಿ, ನಿಯಮ ನಿಭಂದನೆಗಳು, ಹಕ್ಕು ಮತ್ತು ಬಾಧ್ಯತೆ, ಕರ್ತವ್ಯದ ಬಗ್ಗೆ ಇರುವ ಒಂದು ಕರಡು ಸಂವಿಧಾನ ಮಸ್ಜಿದ್ ನಭವಿ ಯಲ್ಲಾಗಿತ್ತು. ಪ್ರಥಮ.ಇಸ್ಲಾಮಿಕ್ ರಾಷ್ಟ್ರ , ಪ್ರಥಮ ಪ್ರವಾದಿಯ ಸರಕಾರಿ ಪೀಠ ಅದು ಆಗಿತ್ತು. ಕ್ಷೇಮಾಭಿವೃದ್ಧಿ ಮತ್ತು ದತ್ತಿ ಕೇಂದ್ರ ಆಗಿತ್ತು, ಸಾಂತ್ವನ, ಸಹಾಯ ಕೇಂದ್ರ ಆಗಿತ್ತು ಪರಿಹಾರ ಮತ್ತು ಗಂಜಿ ಕೇಂದ್ರ ,ಆರೋಗ್ಯ ಕೇಂದ್ರ ಮದೀನ ಮಸೀದಿಯಲ್ಲಿ ಪ್ರವಾದಿಯವರಲ್ಲಿ ಜನರು ಬಂದು ತಮ್ಮ ಅವಹಾಲು ಹೇಳುತ್ತಿದ್ದರು. ಅದು ಕೇವಲ ಆರಾಧನೆಗೆ ಸೀಮಿತ ಆದ ಸ್ಥಳ ಮಾತ್ರ ಆಗಿರಲಿಲ್ಲ. ಅದು ಪುನರ್ವಸತಿ ಕೇಂದ್ರ ಕೂಡ ಆಗಿತ್ತು.
ಮದೀನ ಮಸ್ಜಿದ್ ಒಂದು ಸಮುದಾಯದ ಅಭಿವೃದ್ಧಿ ಕೇಂದ್ರ ಆಗಿತ್ತು. ಒಂದು ಸಮುದಾಯದ ಸರ್ವತೋಮುಖ ಅಭಿವೃದ್ಧಿ ಶೈಕ್ಷಣಿಕ, ಸಾಮಾಜಿಕ,ರಾಜಕೀಯ,ಆರ್ಥಿಕ ಔದ್ಯೋಗಿಕ,ಸಾಂಸ್ಕೃತಿಕ ಪ್ರತೀ ರಂಗದಲ್ಲೂ ಅಭಿವೃದ್ಧಿ ಕೇಂದ್ರ ಆಗಿತ್ತು. ಇದು ನಮಗೆ ಉದಾಹರಣೆ ಆಗಿದೆ.
ದುರಂತ ಎಂದರೆ ನಮ್ಮ ಮಸೀದಿಗಲು ಈ ಎಲ್ಲವನ್ನೂ ಬಿಟ್ಟು ಆರಾಧನೆಗೆ ಮಾತ್ರ ಸೀಮಿತ ಆದದ್ದು ನಾವು ನೋಡುತ್ತೇವೆ. ಮತ್ತು ಮಾದರಸ ಶಿಕ್ಷಣಕ್ಕೆ ಸೀಮಿತ ಆಗಿದ್ದು ನೋಡುತ್ತೀವೆ.
ಮಸೀದಿ ಅನ್ನುವುದು ನಮ ಒಂದು ಸಂಸತ್ ಇದ್ದ ಹಾಗೆ, ಜಮಾತ್ ವ್ಯವಸ್ಥೆ ಅನ್ನುವುದು ಅಲ್ಲಾಹನು ಮುಸ್ಲಿಮರಿಗೆ ನೀಡಿದ ಮಹಾ ಅನುಗ್ರಹ. ಮಸೀದಿ ಅಧೀನದಲ್ಲಿ ಇನ್ನೂರು ಸಾವಿರ ಸದಸ್ಯ ಜಮಾತ್ ಇರುತ್ತದೆ, ಮಸೀದಿಯ ಸುತ್ತ ಮುತ್ತ ಇರುವ ಎಲ್ಲಾ ಕುಟುಂಬ ಈ ವ್ಯವಸ್ಥೆಗೆ ಸೇರುತ್ತದೆ. ಐದು ಹೊತ್ತು ಮತ್ತು ವಾರಕೇ ಒಂದು ಜುಮಾ ಮತ್ತು ವರ್ಷ ಪ್ರತೀ ಎರಡು ಈದ್ ನಮಾಝ್ ಇರುತ್ತದೆ. ವಿವಿಧ ಕಾರ್ಯಗಳಿಗೆ ಬಂದು ಸೇರುವ ವ್ಯವಸ್ಥೆ ಇದೆ. ಇದು ಇಂದು ಬೃಹತ್ ಕೊಂಡಿ ಜಾಲ ಆಗಿದೆ.ಒಂದು ಸಂಪರ್ಕ ವ್ಯವಸ್ಥೆ ಇದೆ. ಈ ಮಸೀದಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದರು.
ಮಸೀದಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ವರ ಆರ್ಥಿಕ ನೆರವು ಅಗತ್ಯ ಇದೆ, ಧನಿಕರ ದೇಣಿಗೆ ಯೊಂದಿಗೆ, ಬಡವನ ಕಿರು ಕೊಡುಗೆಗೂ ಅಲ್ಲಾಹನ ಎದುರಿಗೆ ಬಹು ಮಹತ್ವ ಇದೆ.
ಧನಿಕನು ತಾನು ನೀಡುವ ಕೊಡುಗೆ ಅದು ಅವನಿಗೆ ಅಲ್ಲಾಹನು ತೆರೆ ಮರೆಯಲ್ಲಿ ನೀಡುವ ಪರೀಕ್ಷೆ ಆಗಿದೆ.
ಮಸ್ಜಿದ್ ನಿರ್ಮಾಣದ ನಂತರ ಅಂತಹ ಮಸೀದಿಯನ್ನು ಆಡಳಿತ ನಡೆಸುವ ವಿಧ ಅದು ಪ್ರಜಾ ಪ್ರಭುತ್ವ ರೀತಿಯ ಆಯ್ಕೆಯ ಮೂಲಕ ಮೊಹಲ್ಲಾದ ಯ ಜಮಾತ್ ನ ಸರ್ವ ಜನರ ಪ್ರತಿನಿಧಿಗಳು ಇದರಲ್ಲಿ ನೇಮಕವಾಗಬೇಕಿದೆ. ಕಾರ್ಯಕಾರಿ ಸಮಿತಿಯಲ್ಲಿ ಪ್ರತೀ ಕರಿಯದ ಜನರ ಪಾಲ್ಗೊಳ್ಳುವಿಕೆ ಅನಿವಾರ್ಯ. ಸಾಂಪ್ರಾದಾಯಿಕ ತಲೆಮಾರು ರೀತಿಯಲ್ಲಿ ಮುಖ್ಯಸ್ಥ ಹುದ್ದೆಗೆ ಆಯ್ಕೆ ಆಗುವುದು ಸರಿಯಲ್ಲ.
ವ್ಯಕ್ತಿಯ ಧನಿಕ ಸ್ಥಿತಿಯನ್ನು ನೋಡಿ ಜಮಾತ್ ಮುಖ್ಯಸ್ಟಿಕೆ ನೀಡುವುದು ಸರಿಯಲ್ಲ. ಅಂತಹ ಪ್ರಯತ್ನ ಅವ್ಯವಸ್ಥೆ ಗೆ ಕಾರಣ ಆಗುತ್ತದೆ ಮತ್ತು ಮುಖ್ಯಸ್ಥ ರಾಗಲು ಹಲವು ಅರ್ಹತೆ ಅಗತ್ಯ.ಮಸೀದಿಯ ಅಧಿಕಾರ ಒಂದು ಮಹತ್ವದ ಜವಾಬ್ದಾರಿ ಆಗಿರುತ್ತದೆ. ಈ ವಿಷಯದಲ್ಲಿ ನಮಗೆ ಒಂದು ಮಹಾ ಉದಾಹರಣೆ ಹಜ್ರತ್ ಉಮರ್ ರ. ಆ ರವರು ಆಗಿದ್ದಾರೆ, ಇಸ್ಲಾಮಿನ ದ್ವಿತೀಯ ಖಲೀಫಾ ಆಗಿದ್ದಾರೆ. ಅವರ ಚರಿತ್ರೆ ನಾವು ಅಧ್ಯಯನ ಮಾಡಿದರೆ ನಮಗೆ ತಿಳಿಯಲಿದೆ ಅವರ ರಾಜನೀತಿ, ಆಡಳಿತದ ವೈಕರಿಗಳು. ಮಹಾತ್ಮ ಗಾಂಧಿ, ಅರವಿಂದ ಕೇಜ್ರಿವಾಲ್ ಇಂದು ಹಜ್ರತ್ ಉಮರ್ ರವರ ಆಡಳಿತವನ್ನು ಶಿಫಾರಸು ಮಾಡುತ್ತಾರೆ.
ಹಾರೂನ್ ರಶೀದ್ ಅಗ್ನಾಡಿ ಸ್ವಾಗತಿಸಿದರು. ಮೊಹಮ್ಮದ್ ಕುಂಞಿ ಮಾಸ್ಟರ್ ಪ್ರಾಸ್ತಾವಿಕ ಮಾತು ಆಡಿದರು. ಮೊಹಮ್ಮದ್ ಹನೀಫ್ ಯು ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಇಮ್ತಿಯಾಜ್ ಕೆದಂಬಾಡಿ ಧನ್ಯವಾದ ಅರ್ಪಿಸಿದರು. ಅಡ್ಮಿನ್ ಅಶ್ಫಾಕ್ ತೋಟಾಲ್ ಸಂವಾದದ ಪ್ರಯೋಜನವನ್ನು ವಿವರಿಸಿದರು.
ಇನ್ನಷ್ಟು ವರದಿಗಳು
ಪೌರತ್ವ ನಿರ್ಧರಿಸುವ ಚುನಾವಣಾ ಆಯೋಗದ ಪ್ರಕ್ರಿಯೆ ಅಸಂವಿಧಾನಿಕ: ಆನ್ಲೈನ್ ಸಂವಾದದಲ್ಲಿ ಚಿಂತಕ ರಾ ಚಿಂತನ್.
ದುಡಿಯುವ ವರ್ಗದ ಹಿತವೇ ದೇಶದ ಅಭಿವೃದ್ಧಿ, ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕಿದೆ: ಆನ್ಲೈನ್ ಸಂವಾದದಲ್ಲಿ ಸುನಿಲ್ ಕುಮಾರ್ ಬಜಾಲ್.
ಯುನಿವೆಫ್ ಕರ್ನಾಟಕ,’ ಅರಿಯಿರಿ ಮನುಕುಲದ ಪ್ರವಾದಿ ‘ ಅಭಿಯಾನ ಭಾಗವಾಗಿ ವಾಟ್ಸ್ ಆಪ್ ಅಡ್ಮಿನ್ ಚರ್ಚಾ ಸಮ್ಮಿಲನ.