June 21, 2025

Vokkuta News

kannada news portal

ಹಿರಿಯ ವಕೀಲರು ಎಸ್.ಬಾಲನ್ ರವರಿಂದ ದ.ಕ ಜಿಲ್ಲೆಯ ದ್ವೇಷ ಬಾಷಣದ ಬಗ್ಗೆ ಆನ್ ಲೈನ್ ಸಂವಾದ.

ಈ ತರಹ ದ್ವೇಷ ಭಾಷಣ ಮಾಡುವವರನ್ನು ರಕ್ಷಣೆ ಮಾಡಲು ಮೂರು ವರ್ಷದಿಂದ ಏಳು ವರ್ಷದವರೆಗೆ ಟ್ರಯಲ್ ಪನಿಶ್ಮೆಂಟ್ ಇರುವ ಕೇಸ್ ಗಳಲ್ಲಿ ಬಂಧಿಸುವ ಅಧಿಕಾರ ಪೊಲೀಸರಿಂದ ಕಿತ್ತುಕೊಂಡು ಬಿಟ್ಟಿದ್ದಾರೆ

ವೆಬ್: ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ಹ್ಯಾಂಡಲ್ ಪಬ್ಲಿಕ್ ವಾಯ್ಸ್ ನಲ್ಲಿ ನಿನ್ನೆ 26. ಮೇ 2025 ರಂದು ಭಾರತೀಯ ಕಾಲ ಮಾನ ಘಂಟೆ 8.30 ಕ್ಕೆ ಹಿರಿಯ ಹೈ ಕೋರ್ಟು ವಕೀಲರಾದ ಎಸ್.ಬಾಲನ್ ದ.ಕ.ಜಿಲ್ಲೆಯ ಮತೀಯ ವಿದ್ವೇಷ ಮತ್ತು ಬಂದ್ ಕರೆ ವಿಶಯದಲ್ಲಿ ಆನ್ ಲೈನ್ ಸಂವಾದ ನಡೆಯಿತು. ವಕೀಲರಾದ ಜೀಶಾನ್ ಆಲಿ ವಿಷಯ ಪ್ರಸ್ತಾಪ ಮಾಡಿದರು, ರಫೀಕ್ ಪರ್ಲಿಯ ನಿರೂಪಿಸಿದರು, ಅಬ್ದುಲ್ ರಹಿಮಾನ್ ಮೇಲ್ಕಾರ್ ಸ್ವಾಗತಿಸಿದ್ದರು ಕೊನೆಯಲ್ಲಿ ಇಮ್ತಿಯಾಜ್ ಕೆದಂಬಾಡಿ ಧನ್ಯವಾದ ಅರ್ಪಿಸಿದರು.

ಎಸ್.ಬಾಲನ್: ಮೊದಲು ಎಲ್ಲಾ 153 ಏ ಮತ್ತು 153 ಬೀ ಈ ಕಲಂಗಳನ್ನೂ 196 ಎಂಬ ಕಲಂ ಮಾಡಿ ಬಿಟ್ಟಿರುತ್ತಾರೆ. ಇದಕ್ಕೆಲ್ಲಾ ಪನಿಶ್ಮೆಂಟ್ ಮೂರು ವರ್ಷದಿಂದ ಹಿಡಿದು ಏಳು ವರ್ಷ ಇದೆ. ಹೊಸ ಕಾನೂನನ್ನು ಬಿಜೆಪಿ ಸರಕಾರ ತಂದಿದೆ. ಈ ತರಹ ದ್ವೇಷ ಭಾಷಣ ಮಾಡುವವರನ್ನು ರಕ್ಷಣೆ ಮಾಡಲು ಮೂರು ವರ್ಷದಿಂದ ಏಳು ವರ್ಷದವರೆಗೆ ಟ್ರಯಲ್ ಪನಿಶ್ಮೆಂಟ್ ಇರುವ ಕೇಸ್ ಗಳಲ್ಲಿ ಬಂಧಿಸುವ ಅಧಿಕಾರ ಪೊಲೀಸರಿಂದ ಕಿತ್ತುಕೊಂಡು ಬಿಟ್ಟಿದ್ದಾರೆ. ಪೊಲೀಸರು ಎಫ್ ಐ.ಆರ್ ಕೂಡಾ ದಾಖಲು ಮಾಡಲಿಕ್ಕೆ ಆಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಅವರು ನೋಟೀಸು ಕೊಡಬೇಕು. ಎಫ್ ಐ ಆರ್ ಕೂಡಾ ನೋಂದಣಿ ಮಾಡುವುದಿಲ್ಲ, ಬಹುಷ್ಯ, ನನ್ನ ಪ್ರಕಾರ ಈ.ತರಹ ದ್ವೇಷ ಭಾಷಣ ಮಾಡುವವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ಕಾನೂನಲ್ಲಿ ತಂದು, ಪೊಲೀಸರಿಗೆ ಇರುವ ಅರೆಷ್ಟ್ ಮಾಡುವ ಮತ್ತು ಎಫ್ ಐ.ಆರ್ ದಾಖಲು ಮಾಡುವ ಎರಡು ಅಧಿಕಾರಗಳನ್ನು ಕಿತ್ತು ಕೊಂಡಿದ್ದಾರೆ. ದ್ವೇಷ ಭಾಷಣ ಅಂದರೆ ಡೈರೆಕ್ಟ್ ಅಟ್ಟ್ಯಾಕ್. ಇದರಲ್ಲಿ ಎಫ್ ಐ ಆರ್ ರಿಜಿಸ್ಟ್ರಿ ಆದ ತಕ್ಷಣ ಹೈ ಕೋರ್ಟಿಗೆ ಹೋಗಿ ತಡೆ ಪಡಿಯುತ್ತಾರೆ. ಸುಮಾರು ಪ್ರಕರಣದಲ್ಲಿ ಪೂಂಜಾ ಎಂ.ಎಲ್. ಏ ಸ್ಟೇಶನ್ ನಲ್ಲಿ ನುಗ್ಗಿ ಗಲ್ಲಾ ಪಟ್ಟಿ ಹಿಡಿಯುತ್ತಾರೆ.ತಹಶೀಲ್ದಾರರ ತಲೆಯನ್ನು ಕಡಿಯಬೇಕು ಎಂದು ಹೇಳುತ್ತಾರೆ, ದ್ವೇಷ ಭಾಷಣ ಮಾಡುತ್ತಾರೆ, ಅರೇಷ್ಟ್ ಮಾಡಿದರೆ ಸ್ಟೇಶನ್ ಗೆ ಒಳಗಡೆ ನುಗ್ಗಿ ಅವರನ್ನು ಹೊರಗಡೆ ಹಾಕುತ್ತಾರೆ. ಏಳು ಪ್ರಕರಣದಲ್ಲಿ ಕೂಡ ಅವರಿಗೆ ಹೈ ಕೋರ್ಟ್ನಿಂದ ಸ್ಟೇ ಸಿಗುತ್ತದೆ. ಮೊನ್ನೆ ಒಂದು ಭಾಷಣದಲ್ಲಿ ಕಂತ್ರೀ ಬ್ಯಾರಿಗಳು ನಾವು ನೀವು ಅಂದು ಕೋಮು ಗಲಭೆ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ, ಅದು ಎಫ್ ಐ ಆರ್ ಆಗಿದೆ ಅವರನ್ನು ಬಂಧಿಸಿಲ್ಲ. ಹೈ ಕೋರ್ಟ್ನಲ್ಲಿ ರಿಟ್ ಪಿಟೀಶನ್ ಹಾಕುತ್ತಾರೆ, ನಾವು ಕೂಡ ವಾದ ಮಾಡಿದ್ದೀವಿ,ಹೈ ಕೋರ್ಟ್ನಲ್ಲಿ ಅವರಿಗೆ ಸ್ಟೇ ಸಿಕ್ಕಿತು.ಈಗ ಸುಪ್ರೀಮ್ ಕೋರ್ಟಿನವರು ಕೆಲವು ಸಂದರ್ಭದಲ್ಲಿ ಹೇಳುತ್ತಾರೆ. ಈ ತರ ಭಾಷಣ ಮಾಡಿದರೆ ಸ್ವಯಮ್ ಪ್ರೇರಿತ ಎಫ್ ಐ ಆರ್ ಮಾಡಬೇಕು ಎಂದು. ಈಗ ಕಾನೂನಿನಲ್ಲಿ ಮೂರರಿಂದ ಏಳು ವರ್ಷದವರೆಗೆ ಇರುವ ಪ್ರಕರಣದಲ್ಲಿ ಎಫ್ ಐ ಆರ್ ಹಾಕುವ ಅಧಿಕಾರ ಮತ್ತು ಬಂಧಿಸುವ ಅಧಿಕಾರಗಳನ್ನು ಕಿತ್ತುಕೊಂಡು ಬಿಟ್ಟಿದ್ದಾರೆ. ಪೋಲೀಸರಿಗೆ ಪವರ್ ಲೆಸ್ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಯಾಂಟಿ ಕಮುನಲ್ ಟಾಸ್ಕ್ ಪೂರ್ಸು ಮಾಡುತ್ತೇವೆ ಎಂದು ಹೇಳಿದ್ದಾರೆ.ಕೇಂದ್ರ ಸರಕಾರ ಯಾಂಟಿ ಕಮುನಲ್ ಸ್ಪೇಶಲ್ ಯಾಕ್ಟ್ ಮಾಡಬೇಕಾಗುತ್ತದೆ.ಅದರಲ್ಲಿ ಬೇಲ್ ಇರಬಾರದು, ಹೇಗೆ ಯು ಏ ಪಿ ಏ ಮಾಡಿದ್ದಾರೆ ಅ ರೀತಿ ಬಂದರೆ ಮಾತ್ರ ಪೋಲೀಸರಿಗೆ ಅಧಿಕಾರ ಸಿಗುತ್ತದೆ. ಆದರೆ ನನ್ನ ಪ್ರಕಾರ ಹೊಸ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಈ ತರಹ ದ್ವೇಷ ಭಾಷಣ ಮಾಡುವವರನ್ನು ರಕ್ಷಣೆ ಮಾಡುವುದಕ್ಕೆ ಮಾತ್ರಾ ಇಂತಹ ಪ್ರಾವಿಷನ್ ಇಟ್ಟಿದ್ದಾರೆ ಎಂದು ಕಾಣುತ್ತಾ ಇದೆ. ಇದು ವೈಡರ್ ರ್ಯಾಮಿಫೀಕರ್ಶನ್ ನಡೆಯುತ್ತಾ ಇದೆ.ಪೊಲೀಸರ ಅಧಿಕಾರವನ್ನು ಕಿತ್ತಿದ್ದಾರೆ. ಆದುದರಿಂದ ಯಾರು ದ್ವೇಷ ಭಾಷಣ ಮಾಡಬಹುದು, ಎಫ್ ಐ ಆರ್ ಕೂಡಾ ಆಗುದಿಲ್ಲ, ಆದರೂ ಕೂಡಾ ಸ್ಟೇ ಆಗುತ್ತದೆ.

ಎಸ್.ಬಾಲನ್ : 3.33 ನಿಮಿಷಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರೇ ಕಮ್ಮುನಲೈಸಿ ಆಗಿದ್ದಾರೆ, ಪೋಲೀಸ್ ಆಫೀಸರ್ಸ್ ಹಿಂದುತ್ವವಾದಿಗಳಾಗಿ, ಬ್ರ್ಹಾಮನತ್ವ, ಹಿಂದುತ್ವ ವಾದಿ ಗಳಾಗಿ ಇರುತ್ತಾರೆ, ಯಾಂಟೀ ಮುಸ್ಲಿಮ್, ಯಾಂಟಿ ಮೈನಾರಿಟಿ ಮೈಂಡ್ ಸೆಟ್ ಇರುವ ಪೊಲೀಸರು ಅಡ್ಮಿನ್ ಸ್ಟ್ರೇಶನ್. ನಾವು ಅರ್ಥ ಮಾಡಿಕೊಳ್ಳುವ ಏನಂದರೆ ಈಗ ಎಸ್ಕ್ಯೂಟಿವ್ಸ್ ಕೊಲೆಕ್ಟರ್ ಡಿಸಿ ಎಸಿ, ಕಮಿಷನರ್, ಡಿಸಿಪಿ, ತಹಶೀಲ್ದಾರರ, ಇನ್ಸ್ಪೆಕ್ಟರ್ ಇವರುಗಳು. ಇವರಲ್ಲಿ ಸಂಘ ಪರಿವಾರ ಮೈಂಡ್ ಸೆಟ್ ಬಂದಿದೆ. ಎಬಿವಿಪಿ, ಸಂಘ ಪರಿವಾರದಿಇಂದ ಬಂದು ಮತ್ತು ದ.ಕ.ಜಿಲ್ಲೆಯ ಎಂ.ಎಲ್. ಏ ಮತ್ತು ಎಂಪಿಗಳು ಸಂಘ ಪರಿವಾರದಿನದ ಬಂದಿದ್ದಾರೆ ಅವರು ಕೂಡಾ ಈ ಕೋಮುವಾದ ಮಾತನಾಡುತ್ತಾ, ಮುಸ್ಲಿಮರ ವಿರುದ್ದ ನ್ಮಾತನಾಡುವುದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವುದಿಲ್ಲ. ದೇವಸ್ತನಕ್ಕೆ ಹೋಗುಗುವುದು ಮುಸ್ಲಿಮರನ್ನು ಅತ್ಯಾಕ್ ಮಾಡುವುದು. ಅಲ್ಲಿ ಅಂಗಡಿ ಇಡಬಾರದು ಜಾತ್ರೆಗಳಲ್ಲಿ ಅವರು ಬರಬಾರದು, ಹಲಾಳ ಕಟ್ ಮಾಡಿದ ಮಾಂಸ ಖರೀದಿ ಮಾಡಬಾರದು. ನೀವು ಗಮನಿಸಬೇಕಾದ್ದು, ದುಡ್ಡು, ಕೂಲಿ ಕೆಲಸ ಮಾಡುವ ಹಿಂದೂಗಳು,ಕಾಂಟ್ರ್ಯಾಕ್ಟ್ ಕೆಲಸ ಮಾಡುವವರು, ಆಸ್ಪತ್ರೆಯಲ್ಲಿ ಇರುವ ನರ್ಸ್ ವಾರ್ಡ ಬಾಯ್ಸ್ ಕಾಂಪೌಂಡ್ ರಸ್ “108 ಯಾಂಬುಲೆನ್ಸ್ ಡ್ರೈವರ್ಸ್ ನರ್ಸ್ಗ್ ಗಳು, ಕಂಪ್ಯೂಟರ್ ಆಪರೇಟರ್ ಡಿಸ್ಟ್ರಿಕ್ ಎಂಟಿಮಟ್ಟದ ಅಧಿಕಾರಿಗಳು, ಪೌರ ಕಾರ್ಮಿಕರು ಎಲ್ಲರಿಗು ಗುತ್ತಿಗೆ ಪದ್ಧತಿಯಲ್ಲಿ ಇದ್ದಾರೆ ಸಂಬಳ ಹತ್ತರಿಂದ ಹನ್ನೆರಡು ಸಾವಿರ ಮಾತ್ರಾ ಇವರ ಕಾಂಟಾರಾಕ್ ದಾರರೆಲ್ಲ ಸಂಘ ಪರಿವಾರದವರ ಆಗಿದ್ದಾರೆ ಎಂದರು.

ರಾಜಕೀಯ ವ್ಯಕ್ತಿಗಳು ಲಾ ಮೆಕೆರ್ಸ್, ಪೊಲೀಸರು ಲಾ ಕೀಪರ್ಸ್ ಇವರು ಒಂದಾಗಿದ್ದಾರೆ.ದ.ಕ.ಜಿಲ್ಲೆಯಲ್ಲಿ ಆರ್.ಎಸ್.ಎಸ್ ಅಧಿಕಾರ ಪಡೆದಿದೆ ಕಳೆದ ಹದಿನೈದು ವರ್ಷ ದಿಂದ ಕೋಮು ವಿದ್ವೇಶ ನಡೆಯುತ್ತಾ ಇದೆ, ಜನ ಅಭಿಪ್ರಾಯ ಬದಲಾಗ ಬೇಕಿದೆ, ಸಂವಿದಾನದ ಮೌಲ್ಯಗಳು ಮತ್ತು ಪ್ರಜಾ ಪ್ರಭುತ್ವ ಮನಸ್ಥಿತಿ ಉಳಿಯಬೇಕಾಗಿದೆ.