December 8, 2024

Vokkuta News

kannada news portal

ವಕ್ಫ್ ವಿಚಾರದಲ್ಲಿ ಮುಸ್ಲಿಮ್ ನಾಯಕರು ದ್ವನಿ ಎತ್ತಲೇ ಬೇಕಿದೆ: ಆನ್ ಲೈನ್ ಸಂವಾದದಲ್ಲಿ ಡಾ. ನಾಝಿಯಾ ಕೌಸರ್.

ವೆಬ್: ಇಂದಿನ ರಾಜಕೀಯದಲ್ಲಿ ಮುಸ್ಲಿಮರ ಅಧೋಗತಿ ಮತ್ತು ಮುಸ್ಲಿಮರ ಮುಂದಿರುವ ಸವಾಲುಗಳು ಎಂಬ ವಿಚಾರದಲ್ಲಿ ನಿನ್ನೆ 15 ನವಂಬರ್ 2024 ರಂದು ಭಾರತೀಯ ಕಾಲ ಮಾನ ರಾತ್ರಿ 09.00 ಕ್ಕೆ ಸಮಾಜಿಕ ಜಾಲ ತಾಣ ಪಬ್ಲಿಕ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಡೆದ ಆನ್ ಲೈನ್ ಸಂವಾದದಲ್ಲಿ ಪ್ರಾಧ್ಯಾಪಕರು, ಸುದ್ದಿ ಸಂವಹನ ವಿಭಾಗ ಮತ್ತು ಸುದ್ದಿ ನಿರೂಪಕಿ ಆದ ಡಾ. ನಾಝಿಯ ಕೌಸರ್ ರವರು ನಿರೂಪಕ ರಫೀಕ್ ಪರ್ಲಿಯಾ ಪ್ರಶ್ನೆಗೆ ಉತ್ತರಿಸಿದರು. ಮಜೀದ್ ಎಂ. ಏ ಪ್ರಸ್ತಾವನೆ ಮಾಡಿ , ಹಾರೂನ್ ರಶೀದ್ ಅಗ್ನಾಡಿ ಸ್ವಾಗತಿಸಿ,ಸಲೀಮ್ ಪರಂಗಿ ಪೇಟೆ ಧನ್ಯವಾದ ಸಮರ್ಪಿಸಿದರು.

1. ರಫೀಕ್ ಪರ್ಲಿಯಾ: ಪ್ರಸಕ್ತ ಸನ್ನಿವೇಶದಲ್ಲಿ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ರಾಜಕೀಯ ವ್ಯವಸ್ಥೆಯಲ್ಲಿ ನಡೆಸಿ ಕೊಂಡು ಬರುತ್ತಿದೆ ಮತ್ತು ಮುಸ್ಲಿಮ್ ಸಮುದಾಯದ ರಾಜಕೀಯ ಪರಿಸ್ಥಿತಿ ಯಾವ ಹಂತದಲ್ಲಿದೆ?.

1. ಡಾ.ನಾಝಿಯಾ ಕೌಸರ್: ಪ್ರಥಮವಾಗಿ ಕೇಂದ್ರ ಸರಕಾರ ದವರು, ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಕೊಡಿಸುತ್ತೇವೆ,ತುಂಬಾ ಜನ ಮುಸ್ಲಿಮ್ ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ,ಎಂದು ಹೇಳಿಕೊಂಡು ತ್ರಿವಳಿ ತಲಾಖ್ ಅನ್ನು ನಾವು ನಿಷೇಧ ಮಾಡುತ್ತೇವೆ ಎಂದು, ಆದರೆ ನಿಜವಾಗಿ ಸಿದ್ದ ತ್ರಿವಳಿ ತಲಾಖ್ ಇಸ್ಲಾಂ ಧರ್ಮದಲ್ಲಿ ಇಲ್ಲ. ಮೆಸೇಜ್, ಈಮೇಲ್ ಮೂಲಕ ತಲಾಕ್ ಅಸ್ತಿತ್ವದಲ್ಲಿ ಇಲ್ಲ. ಇದು ಗೊತ್ತಿರುವ ವಿಚಾರ, ಇನ್ಸ್ಟಂಟ್ ತಲಾಕ್ ನಿಷೇಧಿಸಿ ನಾವು ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆ ನಂತರ ಎನ್.ಆರ್.ಸಿ, ಸಿ. ಏ. ಏ, ಶುರು ಮಾಡಿದ್ರು, ಅದಾಯ್ತು, ಯೂನಿಫಾರ್ಮ್ ಸಿವಿಲ್ ಕೋಡ್ ಶುರು ಮಾಡಿದ್ರು, ಅಂದ್ರೆ ಈಗಲೂ ಕೂಡ ಕಾನೂನಿನಲ್ಲಿ ಕೋರ್ಟ್ ಕೇಸುಗಳಲ್ಲಿ, ಮುಸ್ಲಿಮ್ ಮಹಿಳೆಯರಾಗಲಿ, ಪುರುಷರಾಗಲಿ ಹೋದ್ರೆ ಶರಿಯ ಕನೂನುವಿಗೆ ಪ್ರಾಶಸ್ತ್ಯ ಇರುತ್ತದೆ,ಕೆಲವೊಂದು ವಿಚಾರದಲ್ಲಿ ಮಾತ್ರ, ಅದನ್ನೇ ತೆಗೆದು ನಾವು ಯೂನಿಫಾರ್ಮ್ ಸಿವಿಲ್ ಕೋಡ್ ಅನ್ನು ತರ್ತೀವಿ ಅನ್ನುವ ಪ್ರಯತ್ನ,ಅದಾದ ನಂತರ ಕೇಂದ್ರ ಸರಕಾರ ಸಿಕ್ಕ ಕೊನೆಯ ಅಸ್ತ್ರ ವಕ್ಫ್ ಅಮೆಂಡ್ ಮೆಂಟ್ ಬಿಲ್, ನನ್ನ ಪ್ರಕಾರ ಇದು ಹೈ ಟೈಮ್, ಇಡೀ ದೇಶದ ಮುಸಲ್ಮಾನರು ನಾವು ಈಗ ಒಗ್ಗೋಡದೆ ಇದ್ದರೆ, ಇದರ ವಿರುದ್ಧ ದ್ವನಿ ಎತ್ತದೆ ಇದ್ದರೆ, ಮುಸಲ್ಮಾನರ ಪ್ರತೀ ಒಂದು ಚಿಕ್ಕ ಚಿಕ್ಕ ಹಕ್ಕನ್ನು ಕೊಡ ಕಸಿದು ಕೊಳ್ಳುವ ಪ್ರಯತ್ನ ಎಂದರೂ ತಪ್ಪಾಗುವುದಿಲ್ಲ, ನಾವು ಶಿಕ್ಷಣ ಪಡೆಯುವ ಹಾಗಿಲ್ಲ,ಕೆಲಸದ ರಿಸರ್ವೇಶನ್ ಇಲ್ಲ, ಶರಿಯ ಕಾನೂನು ಪಾಲನೆ ಮಾಡುವ ಹಾಗಿಲ್ಲ, ಕೋರ್ಟಲ್ಲಿ ಶರಿಯ ಕಾನೂನು ಹೇಳುವ ಹಾಗಿಲ್ಲ, ನಮಾಝ್ ಮಾಡುವಂತೆ ಇಲ್ಲ, ಮಾಡಿದ್ರೂ ಅಲ್ಲಿ,ಇಲ್ಲಿ ಮಾಡಿದ್ರು ಎಂದು ದೊಡ್ಡ ಮಟ್ಟದ ಸುದ್ದಿ,ನಾವು ಈಗ ಫೈಟ್ ಮಾಡದೆ ಇದ್ದರೆ, ಇದರ ವಿರುದ್ಧ ದ್ವನಿ ಎತ್ತದೆ ಇದ್ದರೆ, ಸೆಂಟ್ ಪರ್ಸೆಂಟ್ ತುಂಬಾ ಖಂಡಿತ ಹೇಳುತ್ತೇನೆ, ಮುಂದಿನ ಪೀಳಿಗೆ ನಮಗೆ ಬೆರಳು ಮಾಡಿ ತೋರಿಸುತ್ತದೆ ನೀವು ಏನು ಮಾಡಿದ್ದೀರಿ ಎಂದು,ದ್ವನಿ ಎತ್ತಲಿಲ್ಲ, ಆ ಮಟ್ಟಕೆ ಇವರು ತಂದು ಇಟ್ಟಿದ್ದಾರೆ, ಹಾಗಾಗಿ ನಾವೆಲ್ಲರೂ ಎಚ್ಚೆತ್ತು, ದ್ವನಿ ಮಾಡಬೇಕಾದ ಅನಿವಾರ್ಯ ಸಮಯ ಇದು, ಹಲವಾರು ಜನ ಮುಸ್ಲಿಮ್ ರಿಗೇ ಇದರ ಗಂಭೀರತೆ ಎಷ್ಟಿದೆ ಎಂದು ಗೊತ್ತಿಲ್ಲ, ಮುಂದೆ ನಾವು ಸುಮ್ಮನಿದ್ದರೆ ಏನಾಗಬಹುದು ಎಂಬ ಕನಿಷ್ಠ ಜ್ಞಾನ ಕೆಲವರಿಗೆ ಮಾತ್ರಾ ಇದೆ.

2. ರಫೀಕ್ ಪರ್ಲಿಯ: ಪ್ರಸ್ತುತ ಭಾರತ ದೇಶವನ್ನು ಆಡಳಿತ ನಡೆಸುತ್ತಿರುವ ಪಕ್ಷಗಳು ಇದುವರೆಗೆ ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ಅನ್ಯಾಯ, ಅಕ್ರಮ,ದೌರ್ಜನ್ಯಗಳು ದಬ್ಬಾಳಿಕೆಗಳನ್ನು ನಡೆಸುತ್ತಿರುವಂತಹ ಈ ಸಂದರ್ಭ ಗಳಲ್ಲಿ ನಮ್ಮ ಮುಸ್ಲಿಮ್ ಸಮುದಾಯ ಆ ಸವಾಲುಗಳನ್ನು ಯಾವ ರೀತಿ ಸ್ವೀಕರಿಸ ಬೇಕಾಗಿದೆ ಮತ್ತು ಈ ಸವಾಲುಗಳಿಗೆ ಕೇಂದ್ರ ಸರಕಾರ ವಾಗಲಿ, ರಾಜ್ಯ ಸರ್ಕಾರ ವಾಗಲಿ ಮುಸ್ಲಿಮರ ಪರವಾಗಿ ಯಾವ ರೀತಿಯ ಜವಾಬ್ದಾರಿಗಳನ್ನು ವಹಿಸಬೇಕಾಗಿದೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ?

2. ಡಾ. ನಾಝಿಯ ಕೌಸರ್: ನಮ್ಮ ಸಂಸ್ಥೆಗಳು ಹಲವಾರು,ಸಾವಿರ ಸಮಸ್ಯೆಗಳು ಇದೆ,ಆದ್ರೆ ಅದಕ್ಕೆ ಏನು ಪರಿಹಾರ, ನಾವು ಏನು ಮಾಡಬೇಕು ಎನ್ನುವುದು ಪ್ರಾಮುಖ್ಯ ಪಡೆದಿದೆ, ಈಗಾಗಲೇ ಹೇಳಿದಂತೆ,ತಲಾಕ್ ,ಏನಾರ್ಸಿ,ಸಿಎಏ,ಯೂನಿಫಾರ್ಮ್ ಸಿವಿಲ್ ಕೋಡ್, ವಕ್ಫ್ ಎಮೆಂಡ್ ಮೆನ್ಟ್ ಬಿಲ್,ಹಿಜಾಬ್, ಅಝಾನ್ ವಿಚಾರ ಎಲ್ಲಾ ಕೂಡಾ ಸುದ್ದಿ ಆಯಿತು ಚರ್ಚೆ ಆಯಿತು,ಯಾಕೆ ನಾವು ಇದಕ್ಕೆ ಆನ್ಸರ್ ಮಾಡಕೆ ಆಗ್ತಾ ಇಲ್ಲ,ಇದಕ್ಕೆ ಏನು ಸೊಲೂಶಿಯನ್ ?, ಮಾಡಬೇಕಾಗಿರೋದು ಏನು, ನಮ್ಮಲ್ಲಿ 2022 ರ ಸಮೀಕ್ಷೆ ಪ್ರಕಾರ ಕೇವಲ ಶೇಖಡಾ 68 ಮುಸಲ್ಮಾನರು ಮಾತ್ರಾ ಶಿಕ್ಷಿತರು, ಇದು ಶಾಕಿಂಗ್ ಸುದ್ದಿ, ಖೇದ ಅಂದರೆ ಕೇವಲ ಶೇಖಡಾ 32 ಮುಸ್ಲಿಮರು ಭಾರತದಲ್ಲಿ ಉದ್ಯೋಗದಲ್ಲಿ ಇದ್ದಾರೆ, ಬಾಕಿ ಇರುವರು ನಿರುದ್ಯೋಗಿಗಳು, ಶಿಕ್ಷಣ ಮತ್ತು ನೌಕರಿಯಲ್ಲಿ ನಾವು ಮುಂದೆ ಬರಲೇ ಬೇಕು, ಇದೆ ಇದಕ್ಕೆ ಉತ್ತರ,ನಾವು ಎಲ್ಲಿ ಶಿಕ್ಷಿತ ರಾಗುತ್ತೇವೆ ಎಲ್ಲಿ ಮುಂದೆ ಬರುತ್ತೇವೆಯೋ ಅಂತ ನಮ್ಮನ್ನು ತುಳಿಯಿವುದುದರಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ , ಯಾವುದೇ ಪಕ್ಷ ಆಗಿರಲಿ ನಮಗೆ ಆಗಲಿಕ್ಕಿಲ್ಲ, ಭಯ, ಓದಿದರೆ ಎಲ್ಲಿ ಮುಂದೆ ಬರುತ್ತಾರೆ ಎಂದು ಅದಕ್ಕೆ ರಿಸರ್ವೇಶನ್ ಕೂಡಾ ತೆಗೆದು ಹಾಕಬೇಕು ಎಂದು ಹೇಳುತ್ತಾರೆ. ಜಸ್ಟೀಸ್ ರವಿ ವರ್ಮ ಕುಮಾರ್ ಅವರು ವರದಿಯಲ್ಲಿ ಮಂಡನೆ ಮಾಡುತ್ತಾರೆ, ಕನಿಷ್ಠ ಆರು ಶೇಕಡಾ ಮೀಸಲಾತಿ ಮುಸ್ಲಿಮರಿಗೆ ಕೊಡಬೇಕು ಎಂದು, ಅದನ್ನು ಇವರು ಪರಿಗಣನೆ ಕೂಡಾ ಮಾಡುವುದಿಲ್ಲ,ಯಾಕೆ ಶಿಕ್ಷಿತರಾಗ ಬೇಕು, ಯಾಕೆ ನೌಕರಿ ನಮ್ಮಲಿ ಇರಬೇಕು ಎಂದು ನಾನು ಮುಂದೆ ಹೇಳುತ್ತಾ ಹೋಗುತ್ತೇನೆ, ಈ ಎಲ್ಲಾ ಸಂಸ್ಥೆಗಳಿಗೆ ಶಿಕ್ಷಣ ಮತ್ತು ನೌಕರಿ ಉತ್ತರ ಆಗುತ್ತೆ ಅಂದರೆ, ನಮ್ಮಲ್ಲಿ ಇದಕ್ಕೆ ತುಂಬಾ ಪ್ರಾಶಸ್ತ್ಯ ನೀಡಬೇಕಾಗುತ್ತದೆ, ಮಹಿಳೆಯರು,ಪುರುಷರಾಗಿರಲಿ ಶಿಕ್ಷಣ ಉದ್ಯೋಗ ಪ್ರತಿ ಇಲಾಖೆಯಲ್ಲಿ ಪಡೆಯಬೇಕಿದೆ, ಇಲ್ಲವಾದಲ್ಲಿ ನಾವು ಮೌನ ಇದ್ದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಆಗಿರಲಿ ಇದೆ ವಿಷಯವನ್ನು ಪ್ರತಾಪಿಸುತ್ತ ಹೋಗ್ಗುತ್ತಾರೆ ಇವರು, ನಾವು ಪ್ರತಿಭಟನೆ ಮಾಡುತ್ತೇವೆ,ಒಂದು ದಿನದ ಕಾನ್ಪರೆನ್ಸ್ ,ಒಂದು ದಿನದ ಭಾಷಣ, ಹೆಚ್ಚು ಕಡಿಮೆ ಆದರೆ ಮೇಣದ ಬತ್ತಿ ಹಚ್ಚುತ್ತೇವೆ, ಆತ್ಮಕ್ಕೇ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೀವೆ, ಅಷ್ಟೇ ಹೊರತು ಬೇರೆ ಏನು ಮಾಡಲು ನಮಗೆ ಆಗುವುದಿಲ್ಲ, ನಮ್ಮ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಎಂಬುದು ಮಹತ್ವ ಆಗುತ್ತದೆ.

3. ರಫೀಕ್ ಪರ್ಲಿಯಾ: ಮುಸ್ಲಿಮ್ ಸಮುದಾಯ ಬಹಳಷ್ಟು ಎಚ್ಚೆರ ಗೊಂಡಿರಬೇಕಾದ ವಿಚಾರ ವಕ್ಫ್ ಹಗರಣ, ದೇಶದಾದ್ಯಂತ ಲಕ್ಷ ಗಟ್ಟಲೆ ಎಕರೆ ಆಸ್ತಿಗಳು ಇಂದು ವಕ್ಫ್ ಹಗರಣದ ಹೆಸರಿನಲ್ಲಿ ಭೂ ಕಬಳಿಕೆ ಮಾಡಿಕೊಂಡು ಅವರು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತ ಇದೆ ಅದರ ಜೊತೆಗೆ ಅನ್ವರ್ ಮಾಣಿಪ್ಪಾಡಿ ಯವರ 2012 ರ ಸಿದ್ಧಪಡಿಸಿದ ವರದಿ ಕೂಡಾ ಚರ್ಚಾಸ್ಪದ ಆಗಿದೆ, ಸದನದಲ್ಲಿ ಈ ವಿಚಾರದಲ್ಲಿ ಚರ್ಚೆ ನಡೆಯುವುದಿಲ್ಲ, ಇದೆಲ್ಲ ಬದಿಗಿಟ್ಟು ಕೊಂಡು ವಕ್ಫ್. ಅಮೆನ್ಡ್ ಮೆಂಟ್ ಯಾಕ್ಟ್ ಒಂದು ದೊಡ್ಡ ಕರಾಳ ಕಾಯಿದೆಯನ್ನು ತಂದು ಕೊಂಡು ಮುಸ್ಲಿಮ್ ಸಮುದಾಯದ ಆಸ್ತಿಗಳನ್ನು, ನಮ್ಮ ಪೂರ್ವಜರು ದಾನ ಮಾಡಿರುವ ಹಕ್ಕುಗಳನ್ನು ಕಸಿದು ಕೊಳ್ಳುವ ಒಂದು ದೊಡ್ಡ ಪ್ರಯತ್ನಕ್ಕೆ ಕೇಂದ್ರ ಸರಕಾರ ಕೈ ಹಾಕುತ್ತಾ ಇದೆ,ಇದನ್ನು ನಮ್ಮ ಕೈಯಿಂದ ಕೇಂದ್ರ ಸರಕಾರ ಕೆ ಹೋಗುವುದನ್ನು ತಡೆಯಲು ಯಾರು, ಯಾವ ರೀತಿಯಲ್ಲಿ,ಹೇಗೆ ನೇತೃತ್ವ ವಹಿಸಿಕೊಂಡು, ಪರಿಹಾರ ಕಂಡು ಕೋಳ್ಳಬೇಕಿದೆ?.

3. ಡಾ.ನಾಝಿಯ ಕೌಸರ್: ಕೇಂದ್ರ ಸರಕಾರ ಇದಕ್ಕೆ ಜೆಪಿಸಿ ರಚನೆ ಮಾಡಿದೆ, ಕೇಂದ್ರದ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದಾರೆ ಯಾರು ಏನೇ ತಡೆದರೂ, ಪ್ರಯತ್ನ ಪಟ್ಟರೂ ನಾವು ವಕ್ಫ್ ಎಮೆನ್ಡ್ ಮೆಂಟ್ ಬಿಲ್ ಅನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು, ಇದನ್ನು ಜಾರಿ ಮಾಡಲೇ ಬೇಕು ಎಂದು ಪಟ್ಟು ಹಿಡಿದು ಕೂತಿದೆ, ಡಿಸೆಂಬರ್ ನಲ್ಲಿ ಈ ನಿರ್ಧಾರ ಆಗುತ್ತದೆ, ಆದ್ರೆ ನಮ್ಮವರ ವಿಫಲತೆ ಇದಕ್ಕೆ ಕಾರಣ ಎಂದೂ ಕೂಡಾ ಹೇಳಬಹುದು,ಯಾವಾಗ ಪಾರ್ಲಿಮೆಂಟ್ ನಲ್ಲಿ ಇದರ ಪ್ರಸ್ತಾಪ ಶುರು ಆಯಿತು ಆಗ ನಮ್ಮ ಸಮುದಾಯದ ನಾಯಕರು, ಜನ ಆಯ್ಕೆ ಮಾಡಿ ಕಳುಹಿಸಿದವರು ಅದರ ವಿರುದ್ಧ ದ್ವನಿ ಎತ್ತಿದ್ರಾ, ಎತ್ತಲಿಲ್ಲ ವಾ, ಇಷ್ಟು ತಿಂಗಳು ಇವರು ಏನು ಮಾಡಿದ್ದಾರೆ, ಇತ್ತೀಚೆಗೆ ನನಗೆ ಹಾಸನದಿಂದ ಒಂದು ಕರೆ ಬಂದಿತ್ತು,ಅಲ್ಲಿ ಜಾಗೃತಿ ಸಭೆ ಇದೆ , ಅಲ್ಲಿ ಒಬರು ಸ್ಪೀಚ್ನಲ್ಲಿ ಹೇಳಿದ್ದರಂತೆ, ವಕ್ಫ್ ಅಮೇನ್ಡ್ ಮೇನ್ಟ್ ಬಿಲ್ ಅನ್ನು ನಾವು ವಿರೋಧ ಮಾಡಲೇ ಬೇಕು , ಒಂದು ವೇಳೆ ವಿರೋಧ ಮಾಡದೆ ಇದ್ದರೆ , ಮುಸ್ಲಿಮ್ ಹೆಣ್ಣು ಮಕ್ಕಳು ಎಲ್ಲಾ ಮಸೀದಿಗೆ ಬಂದು ಕುಳಿತು ಕೊಳ್ಳುತ್ತಾರೆ ಎಂದು,ಇದು ಯಾಕ್ಕೆ ಹೇಳುತ್ತೇನೆ ಅಂದರೆ ಹಲವು ಜನ್ರಿಗೆ ವಕ್ಫ್ ಅಮ್ಮೆಂಡ್ ಮೆಂಟ ಬಿಲ್ ನಲ್ಲಿ ಏನು ಇದೆ ಎಂದು ಗೊತ್ತಿಲ್ಲ,ಮಸೀದಿಗೆ ಬರುವ ವಿಚಾರ ಈ ಅಮ್ಮೆನ್ಡ್ ಮೆನ್ಟ್ ವಿಚಾರ ಈ ಬಿಲ್ ನಲ್ಲಿ ಇಲ್ಲವೇ ಇಲ್ಲ, ತುಂಬಾ ಸರಳವಾಗಿ ಹೇಳುವುದಾದರೆ ವಕ್ಫ್ ಬೈ ಯೂಸರ್ ಎಂದು ಇತ್ತು ಅಂದರೆ ಮುಸ್ಲಿಮರು 200 ಅಥವಾ 300 ವರ್ಷಗಳಿಂದ ಮಸೀದಿಯಲ್ಲಿ ನಮಾಝ್ ಮಾಡುತ್ತಾ ಇದ್ದರೆ ಅದು ಬೈ ಯೂಸರ್ ಆಸ್ತಿ, ವರ್ಷಗಳಿಂದ ಶತಮಾನಗಳಿಂದ ದರ್ಗಾ ಮಸೀದಿಗಳಲ್ಲಿ ಹೋಗುತ್ತಾರೆ ಅದು ಬೈ ಯೂಸರ್ ಆಸ್ತಿ,ಶತಮಾನಗಳಿಂದ ಮುಸ್ಲಿಮರು ತಮ್ಮ ಆಜ, ಅಜ್ಜಿಗಳ ಖಬರ್ ಸ್ಥಾನಗಳಿಗೆ ಹೋಗುತ್ತಾರೆ ಅದು ಬೈ ಯೂಸರ್ ಆಸ್ತಿ,ಅದನೂ ಈ ಅಮೆಂಡ ಮೆನ್ನ್ ಟ್ ಬಿಲ್ ನಲ್ಲಿ ತೆಗೆದು ಬಿಟ್ಟಿದ್ದಾರೆ,ಈಗ ಯಾವ ಮಸೀದಿಯಲ್ಲಿ ನಾವು ನಮಾಝ್ ಮಾಡುತ್ತೇವೆ ಅದನ್ನು ನಾವು ವಕ್ಫ್ ಆಸ್ತಿ ಎಂದು ಸಾಬೀತು ಮಾಡಬೇಕಿದೆ. ಹಲವಾರು ವರ್ಷದ ಪುರಾತನ ಮಸೀದಿ ನಮ್ಮ ದೇಶದಲ್ಲಿ ಇದೆ, ಯಾವ ದಾಖಲೆ ತಂದು ತೋರಿಸುವುದು, ಇದು ನಮ್ಮದೇ ಆಸ್ತಿ ಎಂದು, ಮುಂಬೈ ಯ ಹಾಜಿ ಮಳನ್ ದರ್ಗಾ ಅದು ದರ್ಗಾ ಅಲ್ಲ.ಎಂದು ಹೇಳುತ್ತಿದ್ದು ಅದನ್ನು ವಕ್ಫ್ ಎಂದು ಹೇಳಲು ಯಾವ ದಾಖಲೆ ತರುವುದು. ಖಾಬರ್ ಸ್ಥಾನ ದ ಆಸ್ತಿ ಅಲ್ಲ ಎಂದು ಹೇಳುವಾಗ ಎಲ್ಲಿಂದ ದಾಖಲೆ ತರುವುದು.ಯುಪಿ ಯಂತಹ ಸರಕಾರದ ಜಿಲ್ಲಾಧಿಕಾರಿ ಅವರ ಸರಕಾರದ ವಿರುದ್ಧ ತೀರ್ಮಾನ ತಗೊಂಡು ಇದು ವಕ್ಫ್ ಆಸ್ತಿ ಎಂದು ತೀರ್ಪು ಕೊಡುತ್ತಾರೆ ಎಂದು ನಂಬಲು ಸಾಧ್ಯವೇ, ಕೆಲವರು ಪ್ರಾಮಾಣಿಕ ವ್ಯಾಗಿ ಕೊಡಬಹುದು, ವಕ್ಫ್ ಅಮೆಅಂಡ್ ಮೆನ್ಟ್ ಬಿಲ್ ಜಾರಿ ಆದರೆ ಮಸೀದಿ ಗಳು ದರ್ಗಾ ಗಳು, ಖಬರ ಸ್ಥಾನಗಳು ಇಲ್ಲದಂತೆ ಆಗುತ್ತದೆ. ನಮ್ಮ ಸಂಸದರು ನಾಯಕರು ದ್ವನಿ ಎತ್ತಲೆ ಬೇಕು , ಸಂಸತ್ ನಲ್ಲಿ ದ್ವನಿ ಎತ್ತಿ ಎಂದು ಹೇಳುತ್ತೇನೆ.ಜೀಪಿಸಿ ಯಲ್ಲಿ ದ್ವನಿ ಎತ್ತಿ ಮಾತನ್ನಾಡಿ..ಅಮಿತ್ ಶಾ ಅವರು ನಾವು ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

4. ರಫೀಕ್ ಪರ್ಲಿಯಾ: ಮುಸ್ಲಿಮ್ ಸಮುದಾಯದ ಅದೆಷ್ಟೋ ಅಮಾಯಕರ ಮೇಲೆ ಯು ಏ ಪೀ ಏ ಎಂಬ ಎನ್ ಐ ಏ ಧಾಳಿ ನಡೆಸಿ ಕರಾಳ ಕಾನೂನನ್ನು ಹಾಕಿ ಬಂಧಿಸಿ , ಇಂದು ಬಿಡುಗಡೆ ಕೂಡಾ ಇಲ್ಲದೆ ವರ್ಷಾನುಗಟ್ಟಲೆ ಜೈಲಿನಲ್ಲಿ ಹಾಕಲಾಗಿದೆ ? ಸಮುದಾಯದ ಪರವಾನಗಿ ದ್ವನಿ ಎತ್ತಿದ ಕಾರಣಕ್ಕಾಗಿ ಒಂದು ನಿರ್ಧಿಷ್ಟ ಸಮುದ್ದಯಕ್ಕೆ ಸೀಮಿತವಾಗಿದೆ ಮತ್ತು ಇದು ಯಾಕಾಗಿ ಈ ಸಮುದಾಯವನ್ನು ಕಟ್ಟಿ ಹಾಕುತ್ತಿದೆ, ಇದನ್ನು ಪ್ರಶ್ನಿಸುವ ಯಾವುದೇ ವರ್ಗ ಭಾರತದಲ್ಲಿ ಇಲ್ಲವೇ?.

4. ಡಾ. ನಾಝಿಯ ಕೌಸರ್: ಈ ಬಗ್ಗೆ ನನಗೆ ಗ್ರೌಂಡ್ ರಿಯಾಲಿಟಿ ಏನು ಎಂದು ಗೊತ್ತಿದೆ, ವೈಯುಕ್ತಿಕವಾಗಿ ಇದು ತುಂಬಾ ನೋವು ತರಿಸುವ ವಿಚಾರ, ಡಿಜೆ ಹಳ್ಳಿ ಗಲಭೆ ಎಲ್ಲರಿಗೂ ಗೊತ್ತಿದೆ.ನಾನು ಮೊದಲೇ ಹೇಳಿದೆ ಮುಸ್ಲಿಮರು ಯಾಕೆ ಶಿಕ್ಷಣ ಪಡೆಯಬೇಕು ಎಂದು, ಡಿಜೆ ಹಳ್ಳಿ ಗಲಭೆಗೆ ಕಾರಣ ಪ್ರವಾದಿ ನಿಂದನೆ,ಇಸ್ಲಾಂ ವಿಚಾರದಲ್ಲಿ ಯುವಕರು ತುಂಬಾ ಜಾಸ್ ಬಾತ್ ಇದ್ದಾರೆ. ಅದು ನಿಜ, ಮುಸಲ್ಮಾನ್ ಯುವಕರು ಅದರ ಸ್ಕ್ರೀನ್ ಸಾರ್ಟ್ ಪಡೆದು ಸರಳವಾಗಿ ಒಂದತ್ತು ಜನ ನಮ್ಮ ನಾಯಕರನ್ನು ಕರೆದು ಕೊಂಡು ಹೋಗಿ ಪೋಲೀಸು ದೂರು ನೀಡಬೇಕಿತ್ತು. ಅಥವಾ ಉನ್ನತ ಅಧಿಕಾರಿಗಳ ಹತ್ತಿರ ಹೋಗಬೇಕಿತ್ತು. ಅಲ್ಲಿ ಒಂದು ದೂರು ಬರೆಯುದ ಪರಿಸ್ಥಿತಿ ಅಲ್ಲಿ ಇತ್ತು, ಗಲಭೆ ಆಗಿದೆ, ಪೋಲೀಸು ವಾಹನವನ್ನು ಸುಟ್ಟು ಹಾಕಲಾಗಿದೆ, ಗಲಭೆ ಕೋರರಿಗೆ ಖಂಡಿತ ಶಿಕ್ಷೆ ಆಗಲಿ,ಎಂದು ಜೀವ ಕಳಕೊಂಡವರ ಮನೆ ಯ ಸ್ಥಿತಿ ತುಂಬಾ ನೋವು ತಂದಿದೆ, ಆದರೆ.ನೂರಾರು ಜನ ಅಮಾಯಕರ ಭಂದನ ಆಗಿದೆ ಅವರಿಗೆ ಇನ್ನೂ ಕೂಡಾ ಬಿಡುಗಡೆ ಆಗಲಿಲ್ಲ, ಪೊಲೀಸರು ಮೊಬೈಲ್ ಲೋಕೇಶನ್ ಟ್ರಾಕರ್ ಆಧಾರದಲ್ಲಿ ಹಲವಾರು ರಿಕ್ಷಾ ಚಾಲಕರ ಭಂದನ ಮಾಡಿದ್ದಾರೆ, ದಾರಿ ಹೋಕರನ್ನ ಬಂಧೀಸದ್ದಾರೆ, ಮನೆಯಲ್ಲಿ ಟಿವಿ ವೀಕ್ಷಣೆ ಮಾಡುತ್ತಿದ್ದ ಅಮಾಯಕರನ್ನು ಭಂಧಿಸಿದ್ದಾರೆ, ಗರ್ಭಿಣಿಯರ ಗಂಡಂದಿರನ್ನು ಭಂದಿಸಿದ್ದಾರೆ, ಮಗುವಿಗೂ ನಾಲ್ಕು ವರ್ಷ ಆಗಿದೆ ತಂದೆಯನ್ನು ತೋರಿಸಲು ಆ ತಾಯಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವ ಪರಿಸ್ಥಿತಿ, ತಾನು ಇತರರ ಮನೆ ಗೆಲಸ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ, ನಾನು ಪ್ರತಿ ಮನೆ ಭೇಟಿ ನೀಡಿದ್ದೇನೆ, ಜೀವನ ದುಸ್ತರ ಆಗಿದೆ, ರೇಶನ್ ಗೋ ಗತಿ ಇಲ್ಲದ ಸ್ಥಿತಿ , ಎಸ್ ಡಿ ಪೀ ಏ ಪಕ್ಷದವರು ಹಾಲಿ ರೇಶನ್ ಹಾಕುತ್ತಿದ್ದಾರೆ.ಇನ್ನೂ ಐವತ್ತು ಜನ ಜೈಲಲ್ಲಿ ಇದ್ದಾರೆ.

5. ರಫೀಕ್ ಪರ್ಲಿಯಾ: ಶಿಕ್ಷಣದಲ್ಲಿ ಮುಸ್ಲಿಮ್ ಸಮುದಾಯ ಹಿಂದೆ ಇದ್ದ ಹಾಗೆ ಆರ್ಥಿಕವಾಗಿ ಕೂಡಾ ಹಿಂದೆ ಇದೆ ಆದುದರಿಂದ ಸರಕಾರ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಅಥವಾ ಇನ್ನಿತರ ಶಿಕ್ಷಣ ಸಂಸ್ಥೆ ಸ್ಥಾಪನೆ ಆಗಬೇಕು, ಮುಸ್ಲಿಮರು ದುಬಾರಿ ಶುಲ್ಕ ತೆತ್ತು ಖಾಸಗಿ ಕಾಲೇಜುಗಳನ್ನು ಅವಲಂಬಿಸುವ ಸ್ಥಿತಿ ಇದೆ.

5. ಡಾ. ನಾಝಿಯ ಕೌಸರ್: ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಇದು ದೂರದ ವಿಚಾರ, ಅಲ್ ಅಮೀನ್ ವಿಜಯ.ಪುರ, ಖಾಜೇ ನವಾಝ್ ಗುಲ್ಬರ್ಗ, ಕಂಚೂರ್ ಮಂಗಳೂರು ಶಿಕ್ಷಣ ಸಂಸ್ಥೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗೆ ಉಚಿತ ಪ್ರವೇಶ ಕೊಟ್ಟರೂ ಕೂಡ ಪ್ರತೀ ವರ್ಷ ಕನಿಷ್ಠ ಒಂದು ವಿದ್ಯಾರ್ಥಿಗೆ ಪ್ರವೇಶ ಕೊಟ್ಟರೆ ಅದು ಒಂದು ಸಾಧನೆ ಆಗುತ್ತದೆ, ಆದರೆ ನೈಜತೆ ಏನು? ತುಂಬಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಬಹುದು ? ಟಿಪ್ಪು ಯುನಿವರ್ಸಿಟಿ ಮಾಡುತ್ತೀವ್ ಎಂದು ಶ್ರೀರಂಗ ಪಟ್ಟಣದಲ್ಲಿ ಜಮೀನು ಗುರುತಿಸಿ ಕೂಡಾ ಇನ್ನೂ ಚಾಲನೆ ಆಗಿಲ್ಲ,ಇದನ್ನು ನಮ್ಮ ಒಂಬತ್ತು ಶಾಸಕರು ಪ್ರಶ್ನೆ ಮಾಡಬೇಕಿತ್ತು. ಅಲ್ಪ ಸಂಖ್ಯಾತ ಶಾಲಾ ಕಾಲೇಜುಗಳಗೆ ಮಾನ್ಯತೆ ಕೊಡುತ್ತೇವೆ ಎಂದು ಈ ಹಿಂದೆ ಹೇಳಲಾಗಿತ್ತು, ಇಂದು ರಾಜ್ಯ ಸರಕಾರ ಹೇಳಲಾಗುತ್ತಿದೆ ಚಿಂತನೆ ಮಾಡುತ್ತೇವೆ ಎಂದು.

ಆರ್ಥಿಕವಾಗಿ ಹೇಗೆ ಹಿಂದೆ ಉಳಿದಿದ್ದೇವೆ, ವಕ್ಫ್ ಬೋರ್ಡ್ಗೆ, ಕೇ ಎಂ ಡಿ ಸಿ ಗೆ ಮೈನಾರಿಟಿ ಇಲಾಖೆಗೆ ಕೇಂದ್ರದಿಂದ ಬೇರೆ ಫೆನ್ಡ್, ರಾಜ್ಯದಿಂದ ಬೇರೆ ಫಂಡ್ ಬರುತ್ತದೆ, ವಕ್ಫ್ ಆಸ್ತಿಗಳ ನಮ್ಮಲ್ಲಿ ಇದೆ,ನಮ್ಮ ರಾಜ್ಯದಲ್ಲಿ ಅದನ್ನು ವಾಣಿಜ್ಯೀಕರಣ ಮಾಡಲು ಗಂಭೀರ ಚಿಂತನೆ ನಡೆಸಬೇಕಿದೆ. ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ವಕ್ಫ್ ಮಾಡಿದ ಹಮೀದ್ ಶಾ ಕಾಂಪ್ಲೆಕ್ಸ್ ಅನ್ನು ವಾಣಿಜ್ಯೀಕರಣ ಮಾಡಿ ಅದರ ಹಣವನ್ನು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಯಾಕೆ ಬಳಸುವುದಿಲ್ಲ ಮಹಿಳೆಯರ ಕಾಲೇಜು.ಯಾಕೆ ಮಾಡುವುದಿಲ, ಇತ್ತೀಚೆಗೆ ಮಾತ್ರ ಜಿಲ್ಲೆಗೆ ಒಂದು ಮಹಿಳಾ ಕಾಲೇಜು ಘೋಷಣೆ ಮಾತ್ರ ಆಗಿದೆ. ಮದರಸಾ ಅಭಿವೃದ್ಧಿ ಆಗಬೇಕಿದೆ , ಹೆಣ್ಣು ಮಕ್ಕಳ ಮದರಸಾ ಮಾಡಬೇಕಿದೆ.