November 21, 2024

Vokkuta News

kannada news portal

ಕ್ಯಾಂಪಸ್ ಫ್ರಂಟ್ ನಿಂದ ಮಂಗಳೂರಿನಲ್ಲಿ ಪ್ರತಿಭಟನಾ ಮಾರ್ಚ್

ಮಂಗಳೂರು: ವಿಧ್ಯಾರ್ಥಿ ನಾಯಕರ ಬಿಡುಗಡೆ,ಹತ್ರಾಸ್ ಪ್ರಕರಣಕ್ಕೆ ಒಂದು ವರ್ಷ,ಕರಾಳ ಯು. ಎ.ಪೀ. ಎ ಕಾನೂನಿನ ದುರ್ಬಳಕೆ,ಎನ್. ಇ.ಪೀ ಹಿಂತೆಗೆತ ಬೇಡಿಕೆ ಇತ್ಯಾದಿ ಆಗ್ರಹಿಸಿ ಇಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಧ್ಯಾರ್ಥಿ ಸಂಘಟನೆ ಮಂಗಳೂರಿನಲ್ಲಿ ವಿಧ್ಯಾರ್ಥಿ ಜಾಥಾ,ಜೈಲು ಕಂಬಿ ಪ್ರದರ್ಶನ,ಪ್ರತಿಭಟನೆ,ವಿಧ್ಯಾರ್ಥಿ ಪ್ರತಿಭಟನಾ ಭಾಷಣ ಇತ್ಯಾದಿ ಗಳ ಮೂಲಕ ಕೇಂದ್ರ ಸರಕಾರದ ವಿರುದ್ಧ ಪ್ರತಿರೋಧ ವ್ಯಕ್ತ ಪಡಿಸಿದರು.ನಗರ ಮಧ್ಯದ ಸಿಗ್ನಲ್ ವೃತ್ತದಿಂದ ಹಾದು ಬಂದ್ ವಿಧ್ಯಾರ್ಥಿ ಮಾರ್ಚ್ ಆರ್.ಟಿ. ಓ ವೃತ್ತದಿಂದ ಸಾಗಿ ದ.ಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿಧ್ಯಾರ್ಥಿ ನಾಯಕರು ಮಾತನಾಡಿ ಕರಾಳ ಕಾನೂನಿನ ಅಡಿಯಲ್ಲಿ ಬಂಧನಕ್ಕೊಳಗಾದ ವಿಧ್ಯಾರ್ಥಿ ನಾಯಕರ ಬಿಡುಗಡೆಗೆ ಒತ್ತಾಯಿಸಿದರು. ಜೈಲು ಕಂಬಿ ಪ್ರದರ್ಶನ ನಡೆಸಲಾಯಿತು.ಆರಂಭದಲ್ಲಿ ವಿಧ್ಯಾರ್ಥಿ ಜಾಥಾ ವನ್ನು ತಡೆಯಲು ಪ್ರಯತ್ನಿಸಿದ ಪೋಲೀಸರ ಕ್ರಮಕ್ಕೆ ವಿರೋಧಿಸಿದ ವಿಧ್ಯಾರ್ಥಿಗಳು, ನಂತರ ತೀವ್ರ ಮಾತಿನ ಪ್ರತಿರೋಧದ ನಂತರ ಪೊಲೀಸರು ಜಾಥಾ ಮುಂದುವರಿಯಲು ಅನುಮತಿಸಿದರು.