January 25, 2025

Vokkuta News

kannada news portal

ಮುಖ್ಯಮಂತ್ರಿಯವರ ಅನೈತಿಕ ಪೊಲೀಸು ಗಿರಿಯ ಸಮರ್ಥನೆ:ಕೆ.ಅಶ್ರಫ್ ಖಂಡನೆ.

ಮುಖ್ಯಮಂತ್ರಿಯವರ ಹೇಳಿಕೆ ಬೇಜವಾಬ್ದಾರಿಯ ದ್ದಾಗಿದೆ ಕೆ.ಅಶ್ರಫ್

ಇತ್ತೀಚೆಗೆ ಜಿಲ್ಲೆಯಲ್ಲಿ ಭಿನ್ನ ಸಮುದಾಯದ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಒಂದೇ ವಾಹನದಲ್ಲಿ ಪ್ರಯಾಣಿಸುತ್ತಾರೆ ಎಂಬುದನ್ನು ಸ್ಥಳೀಯ ಸಮಾಜ ಘಾತುಕ ಶಕ್ತಿಗಳು ತಡೆದು ಹಲ್ಲೆ ನಡೆಸಿ,ಕಾನೂನನ್ನು ಕೈಗೆತ್ತಿಕೊಂಡು,ಅನೈತಿಕ ಪೊಲೀಸು ಗಿರಿಯನ್ನು ಪ್ರದರ್ಶಿಸಿದ್ದು ಈ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲೆ ಮತ್ತು ರಾಜ್ಯಾದ್ಯಂತ ಅನೈತಿಕ ಪೊಲೀಸು ಗಿರಿಯ ವಿರುದ್ಧ ನಡೆದ ವ್ಯಾಪಕ ಪ್ರತಿಭಟನೆ, ಇತ್ಯಾದಿ ಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವ್ಯತ್ಯಯ ವಾಗಾದಂತೆ ಪೊಲೀಸು ಇಲಾಖೆಗೆ ಮುಖ್ಯಮಂತ್ರಿಯವರು ಸೂಕ್ತ ಸಲಹೆ ನೀಡುವ ಬದಲು ಅನೈತಿಕ ಪೊಲೀಸು ಗಿರಿಯನ್ನು ಬಹಿರಂಗವಾಗಿ ಸಮರ್ಥಿಸುವ ಹೇಳಿಕೆ ನೀಡಿರುವುದು ಖಂಡನೀಯ.ಮುಖ್ಯ ಮಂತ್ರಿಯವರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.