ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾಗಿ ಮಂಗಳೂರಿನ ಅಬೂಬಕ್ಕರ್ ಕುಳಾಯಿ ಯವರು ಆಯ್ಕೆಯಾಗಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಸಾದತ್ ಬಜೆತ್ತೂರ್ ಆಯ್ಕೆಯಾಗಿರುತ್ತಾರೆ.
ಇಂದು ಬಂಟ್ವಾಳದ ಬೀ.ಸಿ. ರೋಡ್ ನಲ್ಲಿನ ಸಾಗರ್ ಹಾಲ್ ನಲ್ಲಿ ಜಿಲ್ಲಾ ಮಟ್ಟದ ಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿತ್ತು.ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪಕ್ಷದ ಉನ್ನತ ಪದಾಧಿಕಾರಿಗಳು ವೀಕ್ಷಕರಾಗಿ ಆಗಮಿಸಿದ್ದರು.
ಎಸ್. ಡಿ. ಪಿ. ಐ ಪಕ್ಷದ ದ.ಕ.ಜಿಲ್ಲಾ ಮಟ್ಟದ ನೂತನ ಸಮಿತಿ ಪದಾಧಿ ಕಾರಿಗಳ ಆಯ್ಕೆ ಪ್ರಕ್ರಿಯೆಗೆ ಇಂದು ಚುನಾವಣೆ ನಡೆಸಲಾಯಿತು. ಉಪಾಧ್ಯಕ್ಷ ರಾಗಿ ವಿಕ್ಟರ್ ಮಾರ್ಟಿಸ್,ಮಿಶ್ರಿಯಾ ಕಣ್ಣೂರು ಆಯ್ಕೆಯಾದರೆ.ಆಡಳಿತ ಕಾರ್ಯದರ್ಶಿಯಾಗಿ ಅಕ್ಬರ್ ಬೆಳ್ತಂಗಡಿ,ಕಾರ್ಯದರ್ಶಿಗಳಾಗಿ ಸುಹೈಲ್ ಖಾನ್,ಶಾಕಿರ್ ಅಳಕೆ ಮಜಲು,ಕೋಶಾಧಿಕಾರಿಯಾಗಿ ಇಕ್ಬಾಲ್ ಐ.ಎಂ.ಆರ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿಗೆ ಸದಸ್ಯರಾಗಿ ಅಬ್ದುಲ್ ಅಝೀಝ್ ಸುರತ್ಕಲ್, ಅಥಾ ವುಲ್ಲ ಜೋಕಟ್ಟೆ,ಅಶ್ರಫ್ ಕೆ. ಸಿ.ರೋಡ್,ಇಕ್ಬಾಲ್ ಬೆಳ್ಳಾರೆ, ಝಾಕಿರ್ ಉಳ್ಳಾಲ್,ಗಣೇಶ್ ಕುರಿಯನ್,ಜಮಾಲ್ ಜೋಕಟ್ಟೆ,ನಾಸಿರ್ ಸಜೀಪ,ಪ್ರೇಮಾ ಮಲ್ಲೂರು,ಯೂಸುಫ್ ಆಲಡ್ಕ,ಸಫಾ ಸಲ್ಮಾ ಕಾವಲ್ ಕಟ್ಟೆ, ಆಯ್ಕೆಯಾಗಿದ್ದಾರೆ. ಸಮಿತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿ ಚುನಾವಣಾ ಅಧಿಕಾರಿಗಳಾಗಿ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮತ್ತು ಬೀ.ಬೀ.ಎಂ.ಪೀ ಮಾಜಿ ಕಾರ್ಪೊರೇಟರ್ ಆದ ಮುಜಾಯಿದ್ ಪಾಷಾ ಉಪಸ್ಥಿತರಿದ್ದರು. ನೂತನ ಜಿಲ್ಲಾ ಸಮಿತಿಯು ಮುಂದಿನ ಮೂರು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ವರದಿಗಳು
ಮಂಗಳೂರು: ಆನ್ಲೈನ್ ವಂಚಕ ಪೊಲೀಸ್ ಅಧಿಕಾರಿಯಂತೆ ನಟಿಸಿ 50 ಲಕ್ಷ ರೂ ಮಹಿಳೆಗೆ ವಂಚನೆ.
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.
ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.