ಉಳ್ಳಾಲ : ಉಳ್ಳಾಲ ನಗರ ಕಾಂಗ್ರೆಸ್ ಸಮಿತಿ , ಉಳ್ಳಾಲ ಬ್ಲಾಕ್ ಯೂತ್ ಕಾಂಗ್ರೆಸ್ ಆಶ್ರಯದಲ್ಲಿ ಇಂದು ಸಂಜೆ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತದಲ್ಲಿ ಇಸ್ಲಾಮ್ ಧರ್ಮದ ಪ್ರವಾದಿ ಮೊಹಮ್ಮದ್ ರವರ ವಿರುದ್ಧದ ಬಿ.ಜೆ.ಪಿ ವಕ್ತಾರೆ ನೂಪೂರ್ ಶರ್ಮಾ ಮತ್ತು ದೆಹಲಿ ಬೀ. ಜೇ.ಪೀ ಪಕ್ಷದ ಮಾದ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಇತ್ತೀಚೆಗೆ ಟಿ.ವಿ.ಸಂವಾದ ಟೈಮ್ಸ್ ನೌ ನಲ್ಲಿ ನಡೆಸಿದ ಪರಾಮರ್ಶೆ ವೇಳೆ ನಿಂದನಾತ್ಮಕವಾಗಿ ಸಂಭೋದಿಸಿದ ಕಾರಣಕ್ಕಾಗಿ ಪ್ರತಿಭಟನಾ ಸಭೆಯನ್ನೂ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಉಳ್ಳಾಲ ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ದಿನೇಶ್ ರೈರವರು ಮಾತನಾಡಿ ಈ ದೇಶದಲ್ಲಿ ಮುಸ್ಲಿಮರು, ಹಿಂದೂಗಳು,ಕ್ರೈಸ್ತರು ಮತ್ತು ಇತರರು ಅನ್ಯೋನ್ಯವಾಗಿ ಈ ಹಿಂದೆ ಜೀವಿಸಿರುತ್ತೇವೆ, ಮುಂದೆಯೂ ಜೀವಿಸಲಿದ್ದೇವೆ. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ರವತಂತಹ ಬೀ.ಜೇ.ಪಿಗರು ತಮ್ಮ ನೀಚ ರಾಜಕೀಯ ಉದ್ದೇಶಕ್ಕಾಗಿ ಪ್ರವಾದಿ ಮೊಹಮ್ಮದ್ ರವರ ಹೆಸರನ್ನು ಪ್ರಸ್ತಾಪಿಸಿ ಅವರನ್ನು ನಿಂದಿಸಿ ಆ ಮೂಲಕ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಪ್ರವಾದಿ ಮೊಹಮ್ಮದ್ ರವರು ಜಗತ್ತಿನ ಜನರನ್ನು ಸಾಮರಸ್ಯದಿಂದ ಬದುಕಲು ಪ್ರತಿಪಾದಿಸಿದ ಮಹಾನ್ ನಾಯಕ, ಜನರು ಮೇಲು ಕೀಳು,ಬಡವ, ಶ್ರೀಮಂತ ಎಂಬ ಭೇದ ಭಾವ ವನ್ನು ವಿರೋಧಿಸಿದ ಮಹಾನ್ ಚೇತನ, ಅಂತಹ ಪ್ರವಾದಿಯನ್ನು ನಿಂದಿಸುವುದು ಖಂಡನೀಯ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಈ ದೇಶದ ಜನರು ಕೇಂದ್ರದಲ್ಲಿ ಇರುವ ಬೀ. ಜೆ.ಪೀ.ಪಕ್ಷದ ವಿರುದ್ಧ ಆಂದೋಲನ ನಡೆಸಿ ಕಾಂಗ್ರೆಸ್ ಪಕ್ಷ ವನ್ನು ಆಡಳಿತಕ್ಕೆ ತಂದು ಜಾತ್ಯಾತೀತ ಸರಕಾರ ರಚಿಸಲಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಸದಾಶಿವ ಉಳ್ಳಾಲ್, ಉಪಾಧ್ಯಕ್ಷರಾದ ದಿನೇಶ್ ರೈ, ಸುರೇಶ್ ಭಟ್ ನಗರ್, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ, ದೀಪಕ್ ಪಿಲಾರ್, ಉಳ್ಳಾಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ರಿಚರ್ಡ್, ಕಾರ್ಯದರ್ಶಿ ರಾಜು ಬಂಡಸಾಲೆ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ತಲಪಾಡಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಉಳ್ಳಾಲ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್,ಮಾಜಿ ವಲಯ ಕಾಂಗ್ರೆಸ್ ಯೂತ್ ಘಟಕದ ಮುಖ್ಯಸ್ಥರಾಗಿದ್ದ ಯುಬಿ ಸಲೀಂ, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮುಸ್ತಫ ಅಬ್ದುಲ್ಲಾ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಶೀದ್ ಕೋಡಿ ನಗರಸಭಾ ಉಪಾಧ್ಯಕ್ಷರಾದ, ಅಯೂಬ್ ಮಂಚಿಲ, ನಗರ ಸಭಾ ಸದಸ್ಯರುಗಳು ಆದ ಇಬ್ರಾಹಿಮ್ ಆಶ್ರಫ್, ಬಾಝಿಲ್ ಡಿ ಸೋಜ, ಮುಹಮ್ಮದ್ ಮುಕ್ಕಚ್ಚೆರಿ, ಯು. ಎ ಇಸ್ಮಾಯಿಲ್, ಸ್ವಪ್ನ ಹರೀಶ್, ರೀನಾ ಡಿ ಸೋಜ, ಹಾಗೂ ಉದ್ಯಮಿ ಯುಸುಫ್, ಮಾಜಿ ನಗರಸಭಾ ಸದಸ್ಯರಾದ ಉಸ್ಮಾನ್ ಕಲ್ಲಾಪು, ಮತ್ತಿತರರು ಹಾಗೂ ಪಕ್ಷದ ಕಾರ್ಯಕರ್ತರು ಬಹುತೇಕ ಜನರು ಪ್ರತಿಭಟನಾ ಸಭೆಯಲ್ಲಿ ಹಾಜರಿದ್ದರು,
ಪ್ರತಿಭಟನಾ ಸಭೆಯ ಬಳಿಕ ಉಳ್ಳಾಲ ಆರಕ್ಷಕ ಠಾಣೆಯ ಠಾಣಾಧಿಕಾರಿ ಯವರಿಗೆ ಪ್ರವಾದಿ ನಿಂದನೆ ಮಾಡಿದ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಪತ್ರ ನೀಡಲಾಯಿತು, ಸಭೆಯಲ್ಲಿ ನಾಸಿರ್ ಸಾಮ್ನಿಗ ಸ್ವಾಗತ ಮಾಡಿದರು, ಮುಸ್ತಫ ಅಬ್ದುಲ್ಲಾ ಧನ್ಯವಾದ ಸಮರ್ಪಿಸಿದರು.
ವರದಿ: ಸೋಶಿಯಲ್ ಫಾರೂಕ್
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಎಸ್ಡಿಪಿಐ ಪ್ರತಿಭಟನೆ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಪ್ರಾದೇಶಿಕ ಸ್ಥಾನಮಾನ ಕೋರಿ ದ.ಕ ಸಂಸದ ಬ್ರಿಜೇಶ್ ಚೌಟ ಮುಖ್ಯ ಮಂತ್ರಿಗೆ ಮನವಿ.
ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಪತ್ರಿಕಾ ಶಿಕ್ಷಣ ಸಮೀಕ್ಷೆ.