June 13, 2024

Vokkuta News

kannada news portal

ಸೌಹಾರ್ದ ಸಮ್ಮಿಲನ:ಕಲಾಂ,ಇಬ್ರಾಹಿಂ ಸಿತಾರ ರನ್ನು ಸನ್ಮಾನಿಸಿದ ದೇಶ ಭಾರತ : ಶ್ರೀ ಗುರುಪಾದೇಶ್ವರ ಸ್ವಾಮೀಜಿ ಹುಬ್ಬಳ್ಳಿ.

ಈ ದೇಶಕ್ಕೆ ಬಂದ ಮುಸ್ಲಿಮರು ಸಾಮರಸ್ಯದ ಜೊತೆ ಜೊತೆಗೆ ಬದುಕಿ ಅನೇಕ ಸಾಮರಸ್ಯದ ಕುರುಹುಗಳನ್ನು ಉಳಿಸಿ ಹೋಗಿದ್ದಾರೆ, ಅದುವೇ ಇಂಡೋ ಅರೇಬಿಕ್ ವಾಸ್ತು ಶಿಲ್ಪ ಇರುವ ಅನೇಕ ಆರಾಧನಾ ಕೇಂದ್ರಗಳು

ಮಂಗಳೂರು: ಮಂಗಳೂರಿನ ಸಮಾನ ಮನಸ್ಕರ ಸಂಘಟನೆಯಾದ ಸಾಮರಸ್ಯ ಮಂಗಳೂರು ವತಿಯಿಂದ ಇಂದು ಮಂಗಳೂರಿನ ಸುಜೀರ್ ಸಿ.ವಿ.ನಾಯಕ್ ಹಾಲ್ ನಲ್ಲಿ ಹತ್ತು ಹಲವು ಧಾರ್ಮಿಕ ಮಹನೀಯರು,ಸಾಮಾಜಿಕ ಕಾರ್ಯಕರ್ತರು, ಸಾಹಿತಿ ,ಹೋರಾಟಗಾರರು, ಜನಪ್ರತಿನಿಧಿಗಳು, ಸಾರ್ವಜನಿಕರ ಉಪಸ್ಥಿತಿಯಲ್ಲಿ ವಿಶಿಷ್ಟ ಸೌಹಾರ್ಧ ಸಮ್ಮಿಲನ ಕಾರ್ಯಕ್ರಮ ಜರುಗಿತು.ಸಂಜೆ 4.00 ಗಂಟೆಗೆ ಆರಂಭವಾದ ಸಮ್ಮಿಲನ ಕಾರ್ಯಕ್ರಮವನ್ನು ಮಾಜಿ ಜಿಲ್ಲಾಧಿಕಾರಿ ಸಶಿಕಾಂತ್ ಸೆಂತಿಲ್ ರವರು ಉದ್ಘಾಟಿಸಿ ಮಾತನಾಡುತ್ತಾ ಭಾರತ ಅಂದರೆ ಏನು? ಈಗ ನಡೆಯುತ್ತಿರುವ ಬೆಳವಣಿಗೆ ಏನು? ನಾವು ಏನು ಮಾಡಬೇಕು ? ಎಂಬುದನ್ನು ವಿವರಿಸುತ್ತಾ ಅವರ ಬಾಲ್ಯದ ಸ್ವಂತ ಮನೆ ಚೆನ್ನೈನಲ್ಲಿ ನ ಅನುಭವ ಹೇಳುತ್ತಾ ಅವರ ಹೆಸರು ತಮಿಳು ನಾಡಿನ ಅತಿ ಹಿರಿಯ ದೇವರು ಎಂದು ಹೆಸರಿರುವ ಮುರುಘಾ ಹೆಸರು ಆದ ಸೆಂತಿಲ್ ನನ್ನ ಹೆಸರು, ನಾನು ನನ್ನ ಬಾಲ್ಯ ಶಿಕ್ಷಣ ಪಡೆದದ್ದು ಸೈಂಟ್ ಮೇರಿಸ್ ಶಾಲೆಯಲ್ಲಿ, ಶಾಲೆ ಬಿಟ್ಟು ಬರುವಾಗ ದರ್ಗಾ ಭೇಟಿ ಮಾಡುತ್ತಿದ್ದೆ , ನಾವು ಭಾರತದ ವಿಭಿನ್ನತೆಯನ್ನು ಆಚರಿಸಬೇಕು,ಅದುವೇ ನಿಜವಾದ ಸಾಮರಸ್ಯದ ಭಾರತ,ಸಂವಿಧಾನದ ಮುನ್ನುಡಿಯೆ ನಾವು ಒಗ್ಗಟ್ಟಾಗಿ ಇರಬೇಕು ಎಂಬುದಾಗಿದೆ.ಸಂವಿಧಾನದ ಮುನ್ನುಡಿ ಸೆಕ್ಯುಲರ್ ಎಂಬ ಪದ ಆರಂಭದಲ್ಲಿ ಇರಲಿಲ್ಲ, ಅದನ್ನು ರಾಜ್ಯಕ್ಕೆ ಸಂಬಂಧ ಇಲ್ಲದ ಹಾಗೆ ಆಗಬಹುದು ಎಂದು ಭಾವಿಸಿ ಸೆಕ್ಯುಲರ್ ಪದಾ ಬಳಕೆ ಮಾಡಿಲ್ಲ, ಭಾರತ ಅಂದರೆ ನಾವೆಲ್ಲರೂ ಅದನ್ನು ಒಟ್ಟಾಗಿ ಆಚರಿಸಬೇಕು,ಆದರೆ ಈಗ ಏನಾಗಿದೆ ಅಂದರೆ, ಧರ್ಮ ಧರ್ಮ ಕ್ಕೆ ಇಲ್ಲಿ ಸಂಘರ್ಷ ಅಲ್ಲವೇ ಅಲ್ಲ, ರಾಜಕೀಯ ಲಾಭಕ್ಕಾಗಿ ಜನರ ಮಧ್ಯೆ ಕಲಹ ಸೃಷ್ಟಿಸುತ್ತಾರೆ.ಭಯ ಹುಟ್ಟಿಸುವ ರಾಜಕೀಯ ಅಸುರಕ್ಷಿತತೆ ರಾಜಕೀಯ.ಹಿಂದೂ ಮುಸ್ಲಿಮರ ಮದ್ಯೆ ಗಲಭೆ ಅಲ್ಲ,ಎರಡು ಮನಸ್ಥಿತಿಯ ಮಧ್ಯೆ ಗಲಭೆ. ಪ್ರೀತಿ ವಿಶ್ವಾಸ ಕ್ಕಿಂತ,ಭಯ ಹುಟ್ಟಿಸುವ ಮನಸ್ಥಿತಿ. ಎಪ್ಪತ್ತು ಶೇಕಡಾ ಜನರು ಭಾರತದಲ್ಲಿ ಪ್ರೀತಿ ಸಹೋದರತೆ ಬಾತ್ರತ್ವ ಬಯಸುವವರು ಜೀವಿಸುತ್ತಿದ್ದಾರೆ, ಅದನ್ನೇ ಸಂವಿಧಾನ ಶಿಲ್ಪಿಗಳು ಸಂವಿಧಾನದಲ್ಲಿ ಅಳವಡಿಸಿ ರಚಿಸಿದರು. ಸಂವಿಧಾನವನ್ನು ಬದಲಿಸಲು ಪ್ರಯತ್ನಿಸಲಾಗಿದೆ. ಏನು ಮಾಡುವುದು? ಭಾರತ ಎಂಬ ತಾಯಿಯನ್ನು ನಾವು ಆಚರಿಸಬೇಕು. ನಮ್ಮ ಭಾರತೀಯತೆಯ ಸ್ಪೂರ್ತಿಯನ್ನು ಆಚರಿಸಬೇಕು ಸರ್ವರೂ ಈ ಬಗ್ಗೆ ಮಾತನಾಡ ಬೇಕು, ಭಾರತವನ್ನು ನಂಬುವ ವರಿಗೆ ಮತ್ತು ನಂಬದದವರಿಗೆ ಇರುವ ವೈರುಧ್ಯ.ನಮ್ಮ ಮುಂದಿನ ಜನಾಂಗ ಕ್ಕಾಗಿ ನಾವು ಒಂದು ಸುಂದರ ಭಾರತವನ್ನು ಆಚರಿಸಬೇಕು ಎನ್ನುವ ಮೂಲಕ ಉದ್ಘಾಟಿಸಿದರು.ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ವೈ ನಾಯಕ್ ರವರು ಸಭಾಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು. ಈ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ ಧಾರವಾಡ ವೀರಕ್ತ ಮಠ ಶ್ರೀ ಗುರು ಪಾದೇಶ್ವರ ಸ್ವಾಮೀಜಿಯವರು ವಹಿಸಿದರು. ಭಾರ್ಗವಿ ಮಯ್ಯರವರು ರಾಷ್ಟ್ರ ಕವಿ ಕುವೆಂಪುರವರ ನಾಡ ಗೀತೆಯನ್ನು ಹಾಡುವ ಮೂಲಕ ಸಮ್ಮಿಲನ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಕವಿ ನಿಸಾರ್ ಅಹ್ಮದ್ ರವರ ನಿತ್ಯೋತ್ಸವ ಹಾಡಿನ ಸಂಗೀತದೊಂದಿಗೆ, ಎಳೆ ಮಕ್ಕಳ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.ಪ್ರಸ್ತಾವನಾ ಭಾಷಣವನ್ನು ಮೊಹಮ್ಮದ್ ಕುಂಜತ್ ಬೈಲ್ ರವರು ನೆರವೇರಿಸಿದರು, ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ವೇಶ ಪರಿಸ್ಥಿತಿಯ ಈ ಸಂಧರ್ಬದಲ್ಲಿ ಈ ಕಾರ್ಯಕ್ರಮ ಅನಿವಾರ್ಯ,ನಾವೆಲ್ಲರೂ ಮಾನವರಾಗಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದರು. ಅತಿಥಿಗಳಾಗಿ ಶಿಕಾರಿ ಪುರ ಕೃಷ್ಣ ಮೂರ್ತಿ, ನಿವೃತ್ತ ಪ್ರಾಧ್ಯಾಪಕರು ಸಂತ ಅಲೋಶಿಯಸ್ ಕಾಲೇಜು ರವರು ಉಪಸ್ತಿತರಿದ್ದರು. ದೇರೆ ಬೈಲ್ ಚರ್ಚ್ ಧರ್ಮಗುರು ಫಾ.ಜೋಸೆಫ್ ಮಾರ್ಟಿಸ್ ರವರು ಮಾತನಾಡುತ್ತಾ ಭಾರತ ದೇಶ ಒಂದು ಒಳ್ಳೆಯ ದೇಶ,ಮೌಲ್ಯ,ವೈವಿದ್ಯತೆ,ಪ್ರೀತಿ,ಒಗ್ಗಟ್ಟು,ಸಂಪನ್ಮೂಲ ವನ್ನು ಈ ದೇಶ ನೀಡುತ್ತಿದೆ,ನಾವು ವೈವಿಧ್ಯತೆಯನ್ನು ಆಚರಿಸಬೇಕು,ನಾವು ಭಾರತೀಯರು ಎಂದು ಹೆಮ್ಮೆ ಪಡಬೇಕು,ನಾವು ಪರಸ್ಪರ ಸಹೋದರರು,ನಮ್ಮಲಿ ಇರುವ ಬೆಳಕನ್ನು ಪ್ರಕಾಶಿಸೋಣ ಎಂದು ಹೇಳಿದರು.ಶಾಂತಿ ಪ್ರಕಾಶನ ಸಂಸ್ಥೆಯ ಪರವಾಗಿ ಇಸಾಕ್ ಪುತ್ತೂರುರವರು ಮಾತನಾಡುತ್ತಾ ನಮ್ಮ ಭಾರತ ಅತಿ ಅಧಿಕ ಧರ್ಮಗಳು ಅಸ್ತಿತ್ವದಲ್ಲಿರುವ ದೇಶ,ಇಲ್ಲಿ ಒಂದು ಭಯದ ರಾಜಕೀಯ ಮಾಡಲಾಗುತ್ತದೆ, ಧರ್ಮ ಅಪಾಯದಲ್ಲಿ ಇದೆ ಎಂದು ಹೇಳಲಾಗುತ್ತದೆ ಕೋಮುವಾದ ವನ್ನು ಪೋಷಿಸಲಾಗುತ್ತದೆ,ಧರ್ಮದ ಮೌಲ್ಯಗಳನ್ನು ನಾಶ ಮಾಡಲಾಗುತ್ತದೆ,ಇತಿಹಾಸ ವನ್ನು ನಾಶ ಪಡಿಸಿ,ತಿದ್ದಲಾಗುತ್ತದೆ,ಯಾವುದೇ ಧರ್ಮವನ್ನು ರಕ್ಷಿಸುವ ಅಗತ್ಯವಿಲ್ಲ, ಅದು ಸಮೃದ್ಧವಾಗಿದ್ದರೆ ಅದುವೇ ರಕ್ಷಣೆ ಹೊಂದುತ್ತದೆ. ಕೋಮುವಾದವನ್ನು ಬೆಂಬಲಿಸುವರು ಭಾವಿಗೆ ಬೀಳುವ ಒಂಟೆಯ ಬಾಲ ಹಿಡಿದಂತೆ ಎಂದು ಪ್ರವಾದಿ ಮೊಹಮ್ಮದ್ ಸ ಅ ರವರು ಹೇಳಿದರು,ಕೋಮುವಾದ ಈ ಸಮಾಜದಿಂದ ಮೇಲೋತ್ಪಟನೆ ಗೊಳ್ಳಲಿದೆ, ಈ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಹಲವರು ತ್ಯಾಗ ಮಾಡಿದ್ದಾರೆ,ಇಂದು ಶಶಿಕಾಂತ್ ಸೆಂತಿಲ್ ರವರು ತಮ್ಮ ಉನ್ನತ ಹುದ್ದೆಯನ್ನೇ ತ್ಯಾಗ ಮಾಡಿ ಹೋರಾಟಕ್ಕೆ ಧುಮುಕಿದ್ದಾರೆ.ಕೋಮುವಾದಿಗಳು ಇಂದು ಈ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ಕೊಂಡಿದ್ದಾರೆ
ಅದರ ವಿರುದ್ದ ವ್ಯವಸ್ಥಿತ ಕಾರ್ಯಕ್ರಮ ಬೇಕಿದೆ, ಶಾಂತಿ ಪ್ರಿಯ ಬಹು ಸಂಖ್ಯಾತರು ಒಗ್ಗಟ್ಟು ಆಗಬೇಕಿದೆ ಮತ್ತು ಈ ದೇಶವನ್ನು ಅಭಿವೃದ್ಧಿ ಪಡಿಸಬೇಕು, ಇಂತಹ ಕಾರ್ಯಕ್ರಮಗಳು ಇನ್ನೂ ಅನೇಕ ಕಡೆ ಆಗಬೇಕಿದೆ ಎಂದರು.ಶಿಕಾರಿಪುರ ಕೃಷ್ಣಮೂರ್ತಿಯವರು ಮಾತನಾಡಿ ಸಂತ ಅಲೋಶಿಯಸ್ ಕಾಲೇಜು ವಿನ ನೂರ ಐವತ್ತು ವರುಷದ ಸಂಸ್ಕೃತಿ ಏನೆಂದರೆ ನೀನು ಹುಟ್ಟಿನಿಂದ ಯಾವ ಜಾತಿ ಯಾದರೂ ನೀನು ಏನನ್ನಾದರೂ ಸಾಧಿಸು, ಶಿಕ್ಷಣದ ಮೂಲಕ ಧಾರ್ಮಿಕ ಸೌಹಾರ್ಧ ಮಾಡಬೇಕು, ಹಾಗೆ ವಿವಿಧ ಧರ್ಮದ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ ವಿಧ್ಯಾರ್ಥಿಗಳಿಗೆ ಶಿಬಿರ ಮಾಡಿದೆವು, ಧರ್ಮದ ದೃತಿ ಇದ್ದರೆ ನೈರ್ಮಲ್ಯ ಇರಬೇಕು,ಆದರೆ ವ್ಯಸನಿಗಳು ತುಂಬಿದ್ದಾರೆ. ನಾರಾಯಣ ಗುರುಗಳು ಕೇರಳದ ಸರ್ವ ಬಿಲ್ಲವರು ನಿತ್ಯ ಸ್ಥಾನ ಮಾಡಲು ಹೇಳಿದರು ಮತ್ತು ಶಿಕ್ಷಣ ವನ್ನು ಉತ್ತೇಜಿಸಿದರು.ಧರ್ಮ ಸಾರ್ವತ್ರಿಕ ವಾದುದು. ಈ ಧರ್ಮವನ್ನು ಎಲ್ಲರೂ ಒಪ್ಪಬೇಕು, ಧರ್ಮದ ಜ್ಞಾನ ಓರ್ವನಲ್ಲಿ ತುಂಬಿದರೆ ಅವರು ಉದಾತ್ತ ರಾಗಿರುತ್ತಾರೆ,ಧರ್ಮ ಮತ್ತು ಮತ ಬೇರೆ. ಆದುದರಿಂದ ತಮಗೆ ಇಷ್ಟವಾದ ರೀತಿಯಲ್ಲಿ ಆರಾಧನೆ ಮಾಡಲು ಸ್ವಾತಂತ್ರ್ಯ ಇದೇ ಎಂದು ಹೇಳಿದರು.ರಘು ಧರ್ಮ ಸೇನಾ ಬೆಳ್ತಂಗಡಿರವರು ಮಾತನಾಡಿ ಸಹೋದರತೆಯನ್ನು ಪಾಲಿಸದಿದ್ದರೆ ಸಂವಿಧಾನ ಉಳಿಯುವುದಿಲ್ಲ, ಸಹೋದರತೆ,ಸ್ವಾತಂತ್ರ ಮತ್ತು ಸಮಾನತೆ ಪಾಲನೆ ಅನುಷ್ಟಾನಿಸಿದರೆ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ,ಸಾಂವಿಧಾನಿಕ ನೈತಿಕತೆ ಪಾಲನೆ ಅಗತ್ಯ, ಸಾಂವಿಧಾನಿಕ ಮುನ್ನುಡಿಯಲ್ಲಿ ನಮ್ಮ ದೇಶದ, ರಾಜ್ಯದ ಸಾರ್ವಬೌಮತೆ ಅಡಗಿದೆ,ದ್ದ.ಕ.ಜಿಲ್ಲೆಯಲ್ಲಿ ಕೋಟಿ ಚೆನ್ನಯ್ಯ, ನಾರಾಯಣ ಗುರುಗಳ ದಾರ್ಶನಿಕತೆಗಳನ್ನು ,ದೈವ ಪರಂಪರೆ ಗಳನ್ನು ಉಳಿಸಬೇಕು,ಅಂಬೇಡ್ಕರ,ನಾಲ್ವಡಿ ಕೃಷ್ಣರಾಜರ ಆಶಯಗಳನ್ನು ಸಂರಕ್ಷಿಸಬೇಕು, ತುಳುನಾಡಿನ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದೈವ ಭೂತಗಳ ಪರಂಪರೆಯನ್ನು ಉಳಿಸಬೇಕಿದೆ ಎಂದರು.ರಾ ಚಿಂತನ್ ರವರು ಮಾತನಾಡಿ ಸೌಹಾರ್ದತೆಗೆ ಇನ್ನೊಂದು ಹೆಸರು ರಮಾನಾಥ ರೈ, ಅಂಬೇಡ್ಕರ್ ಜಯಂತಿ ಈಗೀಗ ನಡೆಯುತ್ತಾ ಇದೆ,ಇದು ನಿಜವಾದ ಬದಲಾವಣೆ,ಇತರ ಗ್ರಹಕ್ಕೆ ಪ್ರಯಾಣ ಮಾಡುವ ಈ ಆಧುನಿಕ ಕಾಲದಲ್ಲಿ ಸಾಮರಸ್ಯದ ಪಾಠ ಕಲಿಯುವ ಅನಿವಾರ್ಯತೆ ಖೇದಕರ, ಚುನಾವಣೆ ಸಮಯದಲ್ಲಿ ಮಾತ್ರ ಸಾಮಾರಸ್ಯಕೆ ಧಕ್ಕೆ ಆಗುತ್ತದೆ ಎಂದು ನಾವು ಯೋಚಿಸಬೇಕಿದೆ.ನಮ್ಮಲಿ ಒಗ್ಗಟ್ಟಿನ ಕೊರತೆ ಇದೆ, ಕುವೆಂಪು ಹೇಳಿದ ಹಾಗೆ ಹುಲಿ ಹಿಡಿಯಲು ಕಲ್ಲು ಸಾಕಾಗದು, ಬಂದೂಕು ಹಿಡಿಯಬೇಕು,ಆದರೆ ಪ್ರಥಮ ಗುಂಡು ಅನ್ನು, ನಮ್ಮ ಮೆದುಳಿಗೆ ಹೊಡೆದು ನಮ್ಮ ಅಜ್ಞಾನ ವನ್ನೂ ಸಾಯಿಸಬೇಕು. ಬಂದೂಕು ತರಭೇತಿ ಯಲ್ಲಿ ದಲಿತ ಹುಡುಗರನ್ನು ಬಳಸಲಾಗುತ್ತಿದೆ, ಅಂಬೇಡ್ಕರ್ ದಲಿತ ಹುಡುಗರಿಗೆ ಸಾಹಿತ್ಯ ಓದಲು ಹೇಳಿದ್ದು,ಬಂದೂಕು ಹಿಡಿಯಲು ಅಲ್ಲ, ಹಿಂಸೆ ಬೇಡ, ಶಾಂತಿ ಬೇಕು ಎಂದು ಭೋದಿಸಿದರು, ಆದರೆ ಇಂದು ಹಿಂಸೆ ವಿಜೃಂಭಿಸುತ್ತಿದೆ, ಜಾತಿ,ಹಿಂಸೆ,ದೇವರು ,ಧರ್ಮ, ಎಂದು ರಾಜಕೀಯ ಮಾಡುವವರನ್ನು ಬಹಿಷ್ಕರಿಸಿ ಎಂದು ಕರೆ ನೀಡಿದರು, ಈ ದೇಶಕ್ಕೆ ಬಂದ ಮುಸ್ಲಿಮರು ಸಾಮರಸ್ಯದ ಜೊತೆ ಜೊತೆಗೆ ಬದುಕಿ ಅನೇಕ ಸಾಮರಸ್ಯದ ಕುರುಹುಗಳನ್ನು ಉಳಿಸಿ ಹೋಗಿದ್ದಾರೆ, ಅದುವೇ ಇಂಡೋ ಅರೇಬಿಕ್ ವಾಸ್ತು ಶಿಲ್ಪ ಇರುವ ಅನೇಕ ಆರಾಧನಾ ಕೇಂದ್ರಗಳು ಇಂದು ಕೂಡ ಅಸ್ತಿತ್ವದಲ್ಲಿ ಇದೆ,ಇರುತ್ತೆ,ಮುಂದೇನೂ ಇರುತ್ತೆ ಎಂದರು.ಉಡುಪಿ ಸಹಬಾಳ್ವೆ ಅಧ್ಯಕ್ಷರಾದ ಶ್ರೀ ಅಮೃತ್ ಶೆಣೈ ಮಾತನಾಡಿ ಉಡುಪಿಯಲ್ಲಿ ತುಂಬಾ ಶ್ರಮಪಟ್ಟು ಸಹಬಾಳ್ವೆ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದ್ದೇವೆ, ಇಪ್ಪತ್ತು ಸಾವಿರ ಜನರು ಉಡುಪಿಯ ಸಾಮರಸ್ಯ ನಡೆಯಲ್ಲಿ ಭಾಗಿಯಾಗಿ ಈ ವ್ಯವಸ್ಥೆ ಬೇಕು ಎಂದು ಜನ ಮನಗಂಡಿದ್ದಾರೆ ಎಂದರು.ಹುಬ್ಬಳ್ಳಿಯ ಮಂಜುಳಾ ಹೀರೆ ಮಟ್ಟ್ ಅತಿಗಳಾಗಿ ಉಪಸ್ತಿತರಿದ್ದರು.ಕೊನೆಯದಾಗಿ ಗುರು ಪಾದೇಶ್ವರ ಸ್ವಾಮೀಜಿ ಮಾತನಾಡಿ ನಾನು ಸಾಮರಸ್ಯ ಬಗ್ಗೆ ಮಾತ್ರ ಮಾತನಾಡುತ್ತೇನೆ,ನಮದೇಶ ಎ. ಪಿ. ಜೆ.ಅಬ್ದುಲ್ ಕಲಾಂ,ಇಬ್ರಾಹಿಂ ಸಿತಾರ ರವರನ್ನು ಸನ್ಮಾನಿಸಿದ ದೇಶ. ಇಂದು ಇಸ್ಲಾಮಿಕ್ ಅಥವಾ ಹಿಂದೂ ಧರ್ಮದಲ್ಲಿ ಯಾರು ಕೂಡ ಕೆಟ್ಟ ಸಂಪ್ರದಾಯದಲ್ಲಿ ಹುಟ್ಟ ಬೇಕು ಎಂದು ಹುಟ್ಟಿದ್ದಲ್ಲ. ಹುಟ್ಟಿದ ಮೇಲೆ ಅವನ ಪರಿಸ್ಥಿತಿ ಅವನ ಬದಲಾಗುತ್ತದೆ.ಆದರೆ ನಾವು ಸೌಹಾರ್ದ ದಲ್ಲಿ ಇರಬೇಕು.ಓರ್ವ ಕವಿ ಬರೆಯುತ್ತಾನೆ ಆದ್ಯಾತ್ಮ,ಸಾಮರಸ್ಯ,ಬೇಕಾದ್ರೆ ಮಂಗಳೂರಿಗೆ ಬಾ ಅಂತಾನೆ.ಬಸವಣ್ಣ ಜಾತಿ ತಾರತಮ್ಯ ಕೆ ವಿರೋಧ ಇದ್ದರು.ಅವರು ಜಾತಿಬಗ್ಗೆ ಇವನಾರವ, ಇವನಾರವ,ಇವ ನಮ್ಮವ ಇವ ನಮ್ಮವ ಎಂದು ಪ್ರತಿಪಾದಿಸಿದರು.ದೇವನೊಬ್ಬ ನಾಮ ಹಲವು , ಅರಿವು ಇರಬೇಕು ಆಗ ಸಾಮರಸ್ಯ ಮೂಡುತ್ತದೆ. ನಾವೆಲ್ಲರೂ ಭಾರತೀಯರು.ಭಾರತೀಯತೆ ನಮ್ಮ ಧರ್ಮ ಎಂದರು.ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ವಿಧ್ಯಾ ದಿನಕರ ಉಪಸ್ಥಿತರಿದ್ದರು. ನಾಡ ಗೀತೆಯನ್ನು ಹಾಡಿದ ಭಾರ್ಗವಿ ಮಯ್ಯ ರವರಿಗೆ ಕೆ.ಅಶ್ರಫ್ ಸನ್ಮಾನಿಸಿದರು.ರಾಮನಾಥ ರೈ,ಸುನಿಲ್ ಕುಮಾರ್ ಬಜಲಕೆರೆ,ಐವನ್ ಡಿಸೋಜಾ,ಶ್ರೀಮತಿ ಶಾಲೆಟ್ ಪಿಂಟೋ, ಜೇ.ಆರ್.ಲೋಬೋ,ಪದ್ಮರಾಜ್, ಸದಾಶಿವ,ಸಂತೋಷ್ ಕಾಮತ್,ಸಂತೋಷ್ ಬಾಜಾಲ್, ವಿಶ್ವಾಸ್ ಕುಮಾರ್ ದಾಸ್, ಸಿ.ಎಂ.ಮುಸ್ತಾಫಾ,ರಾಯ್ನ್ ಕಾಸ್ತಿಲಿನೋ, ದಿನೇಶ್ ಹೆಗ್ಡೆ ಉಳಿಪ್ಪಡಿ,ಇಬ್ರಾಹಿಂ ಕೋಡಿಜಾಲ್,ಹಾಜಿ ಮೊಹಮ್ಮದ್ ಹನೀಫ್, ಮುನೀರ್ ಕಾಟಿಪಳ್ಳ,ಹರೀಶ್ ಕುಮಾರ್,ಕೆ.ಅಶ್ರಫ್ ಮತ್ತಿತರರು,ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ತಿತರಿದ್ದರು. ರೋಹಿತ್ ಕುಮಾರ್ ಉಳ್ಳಾಲ್ ನಿರೂಪಿಸಿದರು.